ಹಾಸನ: ಕೊರೋನಾ ಸೋಂಕು ಎಲ್ಲೆಡೆ ಹರಡಿರುವುದರಿಂದ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬಡವರ, ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟಿನ್ ಮೂಲಕ ಉಚಿತವಾಗಿ ಬೆಳಗಿನ ಉಪಹಾರ ಹಾಗೂ ಮದ್ಯಾಹ್ನ ರಾತ್ರಿ ಸಮಯದಲ್ಲಿ ಊಟವನ್ನು ಕೊಡಲು ಆರಂಭಿಸಿದ್ದಾರೆ.
ಕೂಲಿ ಕಾರ್ಮಿಕರು, ವಲಸಿಗರು ಹಾಗೂ ದುರ್ಬಲ ವರ್ಗದವರಿಗೆ ಅನುಕೂಲವಾಗಲಿ ಎಂಬ ದೃಷ್ಠಿಯಲ್ಲಿ ಮೇ.೨೪ ಲಾಕ್ ಡೌನ್ ಮುಗಿಯುವವರೆಗೂ ಎಲ್ಲಾ ಇಂದಿರಾ ಕ್ಯಾಂಟಿನ್ ನಲ್ಲಿ ಒಂದು ಹೊತ್ತು ತಿಂಡಿ, ಎರಡು ಹೊತ್ತು ಊಟವನ್ನು ಉಚಿತವಾಗಿ ಕೊಡಲು ಬಿಜೆಪಿ ಸರಕಾರ ನಿರ್ಧರಿಸಿದೆ. ಕಳೆದ ಎರಡು ದಿನಗಳ ಹಿಂದೆ ಜರುಗಿದ ವೀಡಿಯೋ ಸಂವಾದದ ಸಭೆಯಲ್ಲಿ ಒಪ್ಪಿಗೆ ಕೊಡಲಾಯಿತು. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರದಲ್ಲಿ ಬಂದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರವರು ಕೋರಿದ್ದಾರೆ.
Tags
ಹಾಸನ
