ಹಾಸನ: ಜಿಲ್ಲೆಯ ಸಕಲೇಶಪುರದ ಪುರಸಭಾ ವ್ಯಾಪ್ತಿಯಲ್ಲಿ ಕಲುಷಿತ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಕೂಡಲೇ ಸರಿಪಡಿಸಿ ಶುದ್ಧ ನೀರನ್ನು ಕೊಡುವಂತೆ ಸ್ಥಳೀಯರು ಮತ್ತು ಹಿರಿಯ ನಾಗರೀಕರು ಒತ್ತಾಯಿಸಿದ್ದು, ದುರಸ್ತಿ ಮಾಡದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಕಲೇಶಪುರ ಪುರಸಭಾ ವ್ಯಾಪ್ತಿಯ ರಾಘವೇಂದ್ರ ನಗರ ಬಡಾವಣೆಯಲ್ಲಿ ಪುರಸಭೆಯಿಂದ ಸರಬರಾಜು ಮಾಡುವ ರಾಘವೇಂದ್ರನಗರ ಬಡಾವಣೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಸ್ಥಳೀಯರು ಪರಿಶೀಲನೆ ಮಾಡಲು ಹೋದಾಗ ಕೊಳಾಯಿಯಲ್ಲಿ ಅಶುದ್ಧ ನೀರು ಹಾಗೂ ಕ್ರಿಮಿ ಕೀಟಗಳು ಕಂಡು ಬಂದಿದ್ದು, ಈ ಘಟಕವು ದುರಸ್ತಿಯಾಗದೆ ಸಂಪೂರ್ಣ ಸ್ಥಗಿತಗೊಂಡು ತುಂಬಾ ವರ್ಷಗಳೇ ಕಳೆದಿರುತ್ತದೆ. ಹಾಗೂ ಇಲ್ಲಿ ಕೇವಲ ಶೇಖರಣೆಗೆ ಮಾತ್ರ ಬಳಸಲಾಗುತ್ತದೆ ಎಂದು ತಿಳಿದು ಬಂದಿರುತ್ತದೆ. ಇದರ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿ ಇಲ್ಲಿಯ ನೀರು ಚಂಪಕನಗರ ಬಡಾವಣೆಯಲ್ಲಿರುವ ಶುದ್ದೀಕರಣ ಇದರ ಬಗ್ಗೆ 2021 ಮೇ 18 ರಂದು ಬೆಳಗ್ಗೆ ಚಂಪಕನಗರ ಶುದ್ದೀಕರಣ ಘಟಕಕ್ಕೆ ಭೇಟಿ ಕೊಡಲಾಯಿತು. ಸಂಪೂರ್ಣ ಪರಿಶೀಲನೆಯ ನಂತರ ತಿಳಿದು ಬಂದ ವಿಷಯವೇನೆಂದರೆ ಹೇಮಾವತಿ ಹೊಳೆಯಿಂದ ಶುದ್ದೀಕರಣ ಘಟಕಕ್ಕೆ ಸರಬರಾಜಾದ ನೀರು ಸ್ವಲ್ಪವೂ ಶುದ್ದಿಗೊಳ್ಳದೆ ಶೇಖರಣೆಗೊಂಡು ನೇರವಾಗಿ ಅಲ್ಲಿಂದಲೂ ಸಾರ್ವಜನಿಕರಿಗೆ ಅಶುದ್ಧ ನೀರು ಸರಬರಾಜು ಆಗುತ್ತಿರುವುದು ಕಂಡು ಬಂದಿತ್ತು. ನೀರಿನ ಘಟಕ ಪರಿಶೀಲನೆ ಮಾಡಿದಾಗ ಅಲ್ಲಿಯೂ ಸಹ ಶುದ್ದೀಕರಣ ಕಾರ್ಯಗಳು ಸ್ಥಗಿತಗೊಂಡು ಉಪಕರಣಗಳು ದುರಾವಸ್ಥೆಯಲ್ಲಿರುವುದು ಕಂಡು ಬಂದಿದ್ದು, ಹೊರನೋಟಕ್ಕೆ ಮಾತ್ರ ಬಣ್ಣ ಬಳಿದಿರುವುದು ಕಂಡುಬAದಿತು.
ಕೊರೋನಾ ಎಂಬ ಮಹಾಮಾರಿಯು ದೇಶಾದ್ಯಂತ ಹರಡಿದ್ದು, ಇಂತಹ ಸಮಯದಲ್ಲಿ ಕಲುಷಿತ ನೀರಿನಿಂದ ಬೇರೆ ಕಾಯಿಲೆಗಳು ಹರಡದಂತೆ ಎಚ್ಚರ ವಹಿಸಿ ಕೂಡಲೇ ಎರಡೂ ಶುದ್ದೀಕರಣ ಘಟಕಗಳನ್ನು ದುರಸ್ತಿಗೊಳಿಸಿ ಪಟ್ಟಣವಾಸಿಗಳಿಗೆ ಶುದ್ಧ ಕುಡಿಯುವ ಈ ಕಾರ್ಯಾಚರಣೆಗೆ ಸಂಬAಧಪಟ್ಟAತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಎರಡೂ ಶುದ್ದೀಕರಣ ಘಟಕಗಳನ್ನು ದುರಸ್ತಿಗೊಳಿಸಿ ಪಟ್ಟಣವಾಸಿಗಳಿಗೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವಂತೆ ಆಗ್ರಹಿಸುತೇವೆ. ಈಬಗ್ಗೆ ಸಂಬAಧಪಟ್ಚಟವರಿಗೆ ಮನವಿ ಕೂಡ ಮಾಡಲಾಗಿದ್ದು, ಕಾರ್ಯಾಚರಣೆ ವಿಳಂಬವಾದಲ್ಲಿ ಪುರಸಭಾ ಆವರಣದಲ್ಲಿ ಮುಂದಿನ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಇದೆ ವೇಳೆ ಎಂ.ಎ. ರೇಣುಕಾನಂದ್, ಎಸ್.ಎ. ಮೋಹನ್, ಎಂ.ಬಿ. ನಂದೀಶ್, ಕುಮಾರಸ್ವಾಮಿ, ದರ್ಶನ್ ಇತರರು ಎಚ್ಚರಿಸಿದ್ದಾರೆ.