ಹಾಸನ: ಲಾಕ್ ಡೌನ್ ಆದೇಶವಿದ್ದರೂ ಕಾನೂನನ್ನು ಉಲ್ಲಂಘಿಸಿ ಸುಖ ಸುಮ್ಮನೆ ರಸ್ತೆಗೆ ವಾಹನ ತರುವವರ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟು, ತಪಾಸಣೆ ಮಾಡಿ ಅಂತವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ಕೊರೋನಾ ಎಂಬ ಮಹಾಮಾರಿ ಆವರಿಸಿರುವ ಪಾಸಿಟಿವ್ ಪ್ರಕರಣ ಹೆಚ್ಚಿದಲ್ಲದೇ ಸಾವುಗಳಲ್ಲೂ ಕೂಡ ಏರಿಕೆ ಉಂಟಾದ ಹಿನ್ನಲೆಯಲ್ಲಿ ನಿಯಂತ್ರಣ ಮಾಡುವ ಉದ್ದೇಶದಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿದೆ. ವಾರದಲ್ಲಿ ಮೂರು ದಿನಗಳ ಕಾಲ ಬೆಳಿಗ್ಗೆ ನಾಲ್ಕು ಗಂಟೆಗಳ ಕಾಲ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಿದ್ದರೂ ಅನೇಕರು ಕೇರೆ ಮಾಡದೇ ವಾಹನದಲ್ಲಿ ರಸ್ತೆಗೆ ಇಳಿಯುತ್ತಿದ್ದಾರೆ. ಇದನ್ನರಿತ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕೂಡ ಸುಮ್ಮನೆ ಕೂರದೆ ಅಂತವರ ಮೇಲೆ ಒಂದು ಕಣ್ಣಿಟ್ಟು ಕಾದು ಹಿಡಿದು ಅವರ ವಾಹನಗಳ ಸೀಝ್ ಮಾಡಿ ದಂಢ ಹಾಕುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಯ ನೆಪ ಹೇಳಿ ತಪ್ಪಿಸಿಕೊಳ್ಳುವ ಚಾಣುಕ್ಯತನ ಪ್ರದರ್ಶಿಸುತ್ತಿದ್ದರು. ಇಷ್ಟೆಲ್ಲಾ ಸರ್ಕಸ್ ಮಾಡಿದರೂ ಕೆಲವರಂತು ತಲೆಗೆ ಹಾಕಿಕೊಳ್ಳದೇ ರಸ್ತೆಗೆ ಇಳಿಯುತ್ತಿರುವುದು ಆತಂಕದ ವಿಚಾರ. ಕೊರೋನಾ ಸೋಂಕು ಎಂದರೆ ಅನೇಕರಿಗೆ ಇನ್ನು ಅರ್ಥವಾಗಿಲ್ಲವಂತೆ ವರ್ತಿಸುತ್ತಿದ್ದಾರೆ. ನನಗೆ ಕೊರೋನಾ ಯಾವುದು ಬರಲ್ಲ. ಕೊರೋನಾ ಇರುವುದೆಲ್ಲಾ ಸುಳ್ಳು ಎಂದು ಬುರುಡೆ ಮಾತನ್ನಾಡಿ ಮತ್ತೊಬ್ಬರ ಜಾಗೃತಿಯನ್ನು ಕಳಚುವ ಕೆಲಸ ಮಾಡುತ್ತಿದ್ದು, ಇದಕ್ಕೆ ಮೊದಲು ಕಡಿವಾಣ ಹಾಕಬೇಕಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ