ಇಂದಿನ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ರಾಷ್ತ್ರಕೂಟರ ಆಡಳಿತದಲ್ಲಿ ಒಂದನೇ ಕೃಷ್ಣ ಕೊರೆಯಿಸಿದ ಈ ಕೈಲಾಸ ದೇಗುಲ ಪ್ರಪಂಚದಲ್ಲಿ ಇರುವ ಅತಿ ದೊಡ್ಡ ಏಕಶಿಲ ದೇಗುಲವಾಗಿದೆ. ಇದನ್ನ ಸ್ಥಳೀಯವಾಗಿ ಗುಹೆ ೧೬ ಎಂದೇ ಗುರುತಿಸಿದ್ದು ಇದು ಎಲ್ಲೋರದ ಸಾಟಿಯಿಲ್ಲದ ಆಕರ್ಷಕ ಕೇಂದ್ರಬಿಂದುವಾಗಿದೆ ಮತ್ತು ಅತೆನ್ಸ್ನಲ್ಲಿರುವ ಪಾರ್ತೆನಾನ್‌ನ ಸ್ಥಳದ ವಿಸ್ತಾರಕ್ಕಿಂತಲೂ ಎರಡುರಷ್ಟು ದೊಡ್ಡದಾಗಿದೆ. ಸುಮಾರು ೨೮೦ × ೧೬೦ × ೧೦೬ ಅಡಿ ವಿಸ್ತೀರ್ಣದ ಈ ಗುಡಿಯನ್ನು ಕೆತ್ತುವ ಸಾಲವಾಗಿ ಸುಮಾರು ೨ ಲಕ್ಷ ಟನ್ ಕಲ್ಲನ್ನ ಬೇರ್ಪಡಿಸಲಾಗಿದೆ ಅಂದ್ರೆ ಸುಮಾರುಎಂಟನೇ ಶತಮಾನದಲ್ಲಿ ಕನ್ನಡಿಗರ ಬಳಿಯಲ್ಲಿ ಏನೇನು ತಂತ್ರಜ್ಞಾನ ಇತ್ತು ಅಂತ ಒಮ್ಮೆ ಆಶ್ಚರ್ಯ ಆಗೋದರಲ್ಲಿ ಯಾವ ಸಂಶಯವೂ ಇಲ್ಲ.ಕನ್ನಡಿಗರ ಗತ ವೈಭವದ ದಿನಗಳಲ್ಲಿ ತಮ್ಮ ಉಚ್ಛ್ರಾಯ ಸ್ಥಿತಿಯನ್ನ ನೋಡಬೇಕಿದ್ರೆ ಇಲ್ಲಿಗೆ ಭೇಟಿ ನೀಡಲೇಬೇಕು.
Tags
ಪ್ರವಾಸ