ಚಿಕ್ಕಮಗಳೂರು :ಜನಸಾಮಾನ್ಯರನ್ನು ದೃಷ್ಟಿಯಲ್ಲಿ ಇಟ್ಟುಕೊಳ್ಳದೆ ,ಬಡವರ ಬದುಕಿನ ಬಗ್ಗೆ ಚಿಂತನೆ ಇಲ್ಲದೆ ,ಯಾರನ್ನೋ ಮೆಚ್ಚಿಸಲು ಜಿಲ್ಲಾಡಳಿತ ಹೊರಟಿದ್ದು ಇದೊಂದು ಹಿಟ್ಲರ್ ಧೋರಣೆ ಎಂದು ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆ.ಡಿ.ಎಸ್ .ನ ಎಚ್ .ಎಚ್ ದೇವರಾಜ್, ಸಿಪಿಐ ನ ಎಚ್. ಎಂ. ರೇಣುಕಾರಾಧ್ಯ, ಬಹುಜನ ಸಮಾಜ ಪಕ್ಷದ ರಾಧಾಕೃಷ್ಣ, ಕಾಂಗ್ರೆಸ್ ನ ಎಚ್. ಎಸ್ .ಪುಟ್ಟಸ್ವಾಮಿ ಜನಪ್ರತಿನಿಧಿಗಳು ನಿರ್ಜೀವ ವಸ್ತುವಾಗಿದ್ದಾರೆ ಎಂದು ಟೀಕಿಸಿ ಮೌನ ಮುರಿದು ಜಿಲ್ಲಾಡಳಿತ ಕ್ರಮವನ್ನು ಪ್ರಶ್ನಿಸಲಿ ಎಂದು ಒತ್ತಾಯಿಸಿದರು .
ಜಿಲ್ಲಾಧಿಕಾರಿಗಳನ್ನು ಪ್ರತಿಪಕ್ಷದ ಮುಖಂಡರು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ದೂರವಾಣಿ ಕರೆಯನ್ನೇ ಸ್ವೀಕರಿಸುವುದಿಲ್ಲ .ಸರ್ಕಾರ ಅವರಿಗೆ ದೂರವಾಣಿ ಕೊಟ್ಟಿದೆಯೋ ಇಲ್ಲವೋ ಅಥವಾ ನಾವೇ ಕೊಡಬೇಕಾ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು .
ರೈತರು ಬೆಳೆದ ಬೆಳೆಗಳು ಹಾಳಾಗುತ್ತವೆ .ರೈತರ ಹೊಲಗಳಿಗೆ ಹೋಗಿ ಬೆಳೆ ಖರೀದಿಸಿ ಬಡವರಿಗೆ ಉಚಿತವಾಗಿ ವಿತರಿಸಲಿ .
ಯಾರಿಗೂ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳು ಸಿಗುತ್ತಿಲ್ಲ , ಜಿಲ್ಲಾಡಳಿತವೇ ಮನೆಮನೆಗೆ ತೆರಳಿ ಆಹಾರ ಪದಾರ್ಥ ವಿತರಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು .
ಜನರನ್ನು ಕಟ್ಟಿಹಾಕಿ ಉಪವಾಸ ಕೂರಿಸಿ ಕಾಯಿಲೆಯನ್ನು ನಿಯಂತ್ರಿಸುತ್ತೇವೆ ಎನ್ನುವ ವಾದದಲ್ಲಿ ಹುರುಳಿಲ್ಲ . ಜಿಲ್ಲಾಡಳಿತ ತನ್ನ ಧೋರಣೆಯನ್ನು ಬದಲಾವಣೆ ಮಾಡಿಕೊಳ್ಳದೆ ಇದ್ದಲ್ಲಿ ಲಾಕ್ ಡೌನ್ ಉಲ್ಲಂಘಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ .
Tags
ಚಿಕ್ಕಮಗಳೂರು