ಹಾಸನ: ನಗರದ ಎನ್.ಆರ್. ವೃತ್ತದ ಬಳಿ ಇರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಛೇರಿ ಮುಂದೆ ವಿವಿಧ ಕೆಲಸಕ್ಕಾಗಿ ವೃದ್ಧರು, ಯುವಕರು ಯಾವುದೇ ಸಾಮಾಜಿಕ ಅಂತರ ಪಾಲಿಸದೆ ಸರದಿ ಸಾಲಿನಲ್ಲಿ ನಿಂತಿದ್ದರು.
ಕೊರೋನಾದಿಂದ ದೂರ ಇರಲು ಮಾಸ್ಕ್ ಬಳಸಿ, ಸಾಮಾಜಿಕ ಅಂತರದಲ್ಲಿ ನಿಂತು ವ್ಯವಹಾರ ಮಾಡುವಂತೆ ಸರಕಾರವು ಅಷ್ಟೊಂದು ಜಾಗೃತಿ ಮೂಡಿಸುತ್ತಿದ್ದರೂ ಜನರಿಗೆ ಇನ್ನು ಅರಿವೆ ಆಗದಿರುವುದು ಬೇಸರದ ಸಂಗತಿ. ಅದರಲಂತು ವೃದ್ಧರು ಎಚ್ಚರಿಕೆಯಿಂದ ಇರಬೇಕು. ಆದರೇ ಬ್ಯಾಂಕ್ ನಲ್ಲಿ ವ್ಯವಹಾರ ಮಾಡಲು ಬೆಳಿಗ್ಗೆ ೮ ರಿಂದ ೧೦ ಗಂಟೆಯವರೆಗೂ ಕೇವಲ ೨ ಗಂಟೆಯ ಕಾಲ ಅವಕಾಶ ನೀಡಿರುವುದರಿಂದ ಮನೆಯಲ್ಲಿ ಶುಭ ಕಾರ್ಯಕ್ಕೆ ಹಣ ಡ್ರಾ ಮಾಡಲು, ಪೆನ್ಸನ್ ಹಣ ಪಡೆಯಲು, ಚೆಕ್ ಹಾಕಲು, ಹಣ ಕಟ್ಟಲು, ಸೇರಿದಂತೆ ವಿವಿಧ ಕೆಲಸಕ್ಕಾಗಿ ಸಾರ್ವಜನಿಕರು ಬೆಳಗಿನ ಜಾವದಲ್ಲೆ ಬಂದು ಸಾಲಿನಲ್ಲಿ ನಿಂತಿದ್ದರು. ಬ್ಯಾಂಕ್ ಮುಂದೆ ಹೆಚ್ಚಾಗಿ ವೃದ್ಧರೆ ನಿಂತಿದ್ದರು. ಆದರೇ ಸಾಮಾಜಿಕ ಅಂತರ ಎಂಬುದು ಇಲ್ಲಿ ಕಾಣಲಿಲ್ಲ. ದಿನೆ ದಿನೆ ಸಾವಿರಾರು ಜನರಿಗೆ ಪಾಸಿಟಿವ್ ಬಂದರೇ ೨೦ ರಿಂದ ೩೦ ಜನರು ಪ್ರತಿನಿತ್ಯ ಸಾಯುತ್ತಿದ್ದಾರೆ. ಅದರಲ್ಲೂ ವಯೋವೃದ್ಧರೆ ಹೆಚ್ಚು ಸಾವನಪ್ಪುತ್ತಿರುವ ಬಗ್ಗೆ ಇಷ್ಟೆಲ್ಲಾ ಗೊತ್ತಿದ್ದರೂ ವೃದ್ಧರು ಸೇರಿದಂತೆ ಯುವ ಜನಾಂಗದವರು ಕೂಡ ಸಾಮಾಜಿಕ ಅಂತರ ಮರೆತು ಸಾಲಿನಲ್ಲಿ ನಿಂತಿದ್ದರು. ಈವೇಳೆ ಎಸ್.ಬಿ.ಐ. ಬ್ಯಾಂಕ್ ಸಿಬ್ಬಂದಿಯರವರು ಸಾಮಾಜಿಕ ಅಂತರದಲ್ಲಿ ನಿಲ್ಲಲು ಸೂಚಿಸಿದರೂ ಅದನ್ನು ಕಿವಿಗೆ ಹಾಕಿಕೊಳ್ಳುತ್ತಿರಲಿಲ್ಲ.