ತಾಲೂಕಿನ ಮಲ್ಲಾಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕಾಡುಹಂದಿಗಳು ದಾಳಿ ನಡೆಸಿ ಬಿತ್ತನೆ ಮಾಡಿದ್ದ ಜೋಳದ ಕಾಳನ್ನು ತಿಂದು ಬೆಳೆ ಹಾಳು ಮಾಡಿರುವ ಘಟನೆ ನಡೆದಿದೆ .
ಸನ್ಯಾಸಿಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಾಪುರ ಉತ್ಪಾತನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜಮೀನಿನಲ್ಲಿ ಕಳೆದ ೩ ದಿನಗಳಿಂದ ೨೦ ಕ್ಕೂ ಹೆಚ್ಚು ಕಾಡು ಹಂದಿಗಳು ದಾಂಧಲೆ ನಡೆಸಿ ಬಿತ್ತನೆ ಮಾಡಿದ್ದ ಜೋಳದ ಕಾಳುಗಳನ್ನು ಬಗೆದು ತಿಂದು ಹಾಳು ಮಾಡುತ್ತಿವೆ. ಒಂದೆಡೆ ಕೊರೊನಾ ಎರಡನೆ ಅಲೆಯ ಜೀವ ಭಯ, ಇನ್ನೊಂದೆಡೆ ಕಾಡು ಹಂದಿಗಳ ದಾಳಿಯಿಂದ ಬಿತ್ತನೆ ಜೋಳದ ಕಾಳು ನಾಶವಾಗಿ ಸಾವಿರಾರು ರೂ ನಷ್ಟ ಸಂಭವಿಸಿದೆ .
ಈ ಬಗ್ಗೆ ರೈತರಾದ ಅಣ್ಣೇಗೌಡ, ಕೆಂಚೇಗೌಡ ಮಾತನಾಡಿ ಕಳೆದ ೩ ದಿನಗಳ ಹಿಂದೆ ಸಾವಿರಾರು ರೂ ರ‍್ಚುಮಾಡಿ ಜೋಳದ ಕಾಳುಗಳನ್ನು ತಂದು ಬಿತ್ತನೆ ಮಾಡಲಾಗಿತ್ತು . ೧ ಎಕರೆಗೆ ಬಿತ್ತನೆ ಬೀಜ ಗೊಬ್ಬರ ಹಾಗೂ ಕೂಲಿ ಕರ‍್ಮಿಕರ ರ‍್ಚು ಸೇರಿ ಹತ್ತು ಸಾವಿರಕ್ಕೂ ಹೆಚ್ಚು ಹಣ ರ‍್ಚು ಬರುತ್ತದೆ. ಆದರೆ ಕಾಡು ಹಂದಿಗಳ ದಾಳಿಯಿಂದ ದಿಕ್ಕು ತೋಚದಂತಾಗಿದೆ ಎಂದರು .
ಕೊರೋನ ಸಂಕಷ್ಟದ ನಡುವೆ ಸಾಲ ಮಾಡಿ ಬಿತ್ತನೆ ಮಾಡಲಾಗಿತ್ತು. ಕಳೆದ ಐದಾರು ದಿನಗಳಿಂದ ಈ ಭಾಗದಲ್ಲಿ ಕಾಡುಹಂದಿಗಳ ದಾಂದಲೆ ಹೆಚ್ಚಾಗುತ್ತಿದೆ . ಮಧ್ಯರಾತ್ರಿಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾಡುಹಂದಿಗಳು ಜಮೀನುಗಳಿಗೆ ನುಗ್ಗಿ ಬಿತ್ತನೆ ಬೀಜ ತಿಂದು ಹಾಕುತ್ತಿವೆ . ಈ ಭಾಗದ ಸುತ್ತಮುತ್ತ ೧೫ ಕ್ಕೂ ಹೆಚ್ಚು ಎಕರೆ ಜಮೀನುಗಳು ಕಾಡುಹಂದಿ ದಾಳಿಗೆ ತುತ್ತಾಗಿವೆ . ರೈತರು ಜೋಳ ಬಿತ್ತನೆ ಮಾಡಲು ಹೆದರುವ ಪರಿಸ್ಥಿತಿ ಇದೆ . ಈಗಲಾದರೂ ಗ್ರಾಮಲೆಕ್ಕಾಧಿಕಾರಿ ಕಂದಾಯ ಅಧಿಕಾರಿಗಳು ಎಚ್ಚೆತ್ತು ನಷ್ಟವಾಗಿರುವ ಜಮೀನುಗಳಿಗೆ ಭೇಟಿ ನೀಡಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ .
ಈ ಸಂರ‍್ಭದಲ್ಲಿ ರೈತರಾದ ಹೊನ್ನೇಗೌಡ, ಚನ್ನೇಗೌಡ , ರಮೇಶ, ಯಲ್ಲೇಗೌಡ ಇತರರು ಇದ್ದರು .
ಂಣಣಚಿಛಿhmeಟಿಣs ಚಿಡಿeಚಿ