ಹಾಸನ: ಈಗಾಗಲೇ ಕಾಣಿಸಿಕೊಂಡಿರುವ ಬ್ಲಾಕ್ ಫಂಗಸ್ ಚಿಕಿತ್ಸೆ ಮಾಡಲು ಬೆಂಗಳೂರಿಗೆ ಬರಬೇಕಾಗಿಲ್ಲ. ಸರಕಾರದ ಆದೇಶದಂತೆ ಆಯಾ ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ. ಕೊರೋನಾ ಸೋಂಕು ಜೂನ್ ೧೫ರ ಒಳಗೆ ಅಂತ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಮೊದಲು ಕೊರೋನಾ ಸೋಂಕಿನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಮುಂದೆ ಯಾರಿಗಾದರೂ ಬ್ಲಾಕ್ ಫಂಗಸ್ ಕಾಣಿಸಿಕೊಂಡರೇ ಮೆಡಿಕಲ್ ಕಾಲೇಜಿನಲ್ಲಿಯೇ ಚಿಕಿತ್ಸೆ ಕೊಡಬೇಕು. ಕೊರೋನಾ ಎರಡನೇ ಅಲೆಯೂ ಜೂನ್ ೧೫ಕ್ಕೆ ಅಂತ್ಯವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ ಅಷ್ಟೆ. ಆದರೇ ಅವರು ಎಂದು ಸರಿಯಾಗಿ ಹೇಳಿಲ್ಲ ಎಂದು ಹೇಳಿಕೆ ಕೊಡುವ ಮೂಲಕ ಸಮರ್ಪಕವಾದ ಮಾಹಿತಿ ಕೊಡಲಿಲ್ಲ. ವಾಕ್ಸೀನ್ ನನ್ನು ೪೫ ವರ್ಷ ಮೇಲ್ಪಟ್ಟವರಿಗೆ ಸರಕಾರ ಉಚಿತವಾಗಿ ನೀಡಿದ್ದೇವೆ. ೧೮ ವರ್ಷ ಮೇಲ್ಪಟ್ಟವರಿಗೆ ಸ್ಟಾಕ್ ಬಂದಾಗೆ ಕೊಡಲಾಗುತ್ತಿದೆ ಎಂದರು. ಕೊರೋನಾ ವಾರಿರ‍್ಸ್ ಗೆ ಮೊದಲು ಲಸಿಕೆ ನೀಡಿ ನಂತರ ಇತರರಿಗೂ ಕೊಡಲಾಗುವುದು. ಕೊರೋನಾ ಲಸಿಕೆಯು ಹಾಸನದಲ್ಲಿ ಕೊರತೆ ಇರುವುದಿಲ್ಲ. ಇನ್ನು ಮಂಗಳೂರಿನಿAದ ನೂರು ಸಿಲೆಂಡರ್ ಹೊಸದಾಗಿ ಬಿಡುಗಡೆ ಮಾಡುತ್ತಿದ್ದೇವೆ. ಭಾರತ ಸರಕಾರದಿಂದ ಒಂದು ಸಾವಿರ ಲೀಟರ್ ಗೆ ಒಪ್ಪಿಗೆ ದೊರಕಿದೆ. ಬ್ಲಾಕ್ ಫಂಗಸ್ ಹಾಸನ ಜಿಲ್ಲೆಯಲ್ಲೂ ಬಂದಿದ್ದು, ಆದರೇ ಕಳೆದ ನಾಲ್ಕು ದಿನಗಳಿಂದ ಒಂದು ಪ್ರಕರಣ ಬಂದಿರುವುದಿಲ್ಲ. ಭಾರತ ಸರಕಾರ ಈ ಬಗ್ಗೆ ಗಮನವಹಿಸಿದೆ…ಎಂದು ಹೇಳಿದರು. ಇನ್ನು ಮೂರನೇ ಅಲೆ ಬಗ್ಗೆ ಒಂದು ಟಾಸ್ ಪರ‍್ಸ್ ಮಾಡಿದ್ದು, ಮಾಹಿತಿ ಸಿಗಲಿದೆ. ನಗರಗಳಲ್ಲಿ ಕೊರೋನಾ ಈಗಾಗಲೇ ನಿಯಂತ್ರಣಕ್ಕೆ ಬಂದಿದ್ದು, ಇನ್ನು ಮುಂದಿನ ನಮ್ಮ ಗುರಿ ಹಳ್ಳಿಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರಬೇಕಾಗಿದೆ. ಗ್ರಾಮಗಳ ಬಗ್ಗೆ ನಾವು ಈಗ ಹೆಚ್ಚಿನ ಗಮನವಹಿಸಿ ಪರೀಕ್ಷೆ ಮಾಡಿ ಏನಾದರೂ ಪಾಸಿಟಿವ್ ಕಂಡು ಬಂದರೇ ಅವರನ್ನು ಕೋವಿಡ್ ಕೇಂದ್ರದಲ್ಲಿ ಇರಿಸಿ ಚಿಕಿತ್ಸೆ ಕೊಡಲಾಗುವುದು ಎಂದು ಮಾಹಿತಿ ನೀಡಿದರು.