ಹಾಸನ: ಸರಕಾರದ ಮುಖ್ಯ ಕರ‍್ಯದರ್ಶಿ ಪಿ. ರವಿಕುಮಾರ್ ರವರು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಬೇಟಿ ನೀಡಿ ಕೊರೋನಾ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಮೊದಲು ಆಸ್ಪತ್ರೆಯ ಹೆಚ್ಚುವರಿ ಕಟ್ಟಡಗಳ ಕಾಮಗಾರಿಯನ್ನು ವೀಕ್ಷಣೆ ಮಾಡಿದರು. ನಂತರ ಆಸ್ಪತ್ರೆಯ ಒಳಗೆ ಹೋಗಿ ಕೊರೋನಾ ರೋಗಿಗಳ ರೂಮ್ ಗಳನ್ನು ವೀಕ್ಷಣೆ ಮಾಡಿದರು. ರೋಗಿಗಳಿಗೆ ಬೇಕಾಗಿರುವ ಆಕ್ಸಿಜನ್, ಮೆಡಿಸನ್ ವೆಂಟಿಲೇಟರ್ ಇತರೆ ಬಗ್ಗೆ ಮಾಹಿತಿ ಪಡೆದರು. ಸಮಸ್ಯೆ ಇರುವುದನ್ನು ಬಗೆಹರಿಸುವ ವಿಶ್ವಾಸವ್ಯಕ್ತಪಡಿಸಿದರು.
ಇದೆ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯತ್ ಮುಖ್ಯಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಕಾಂತರಾಜ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ