ಹಾಸನ: ಲಾಕ್ ಡೌನ್ ಆದೇಶವಿದ್ದರೂ ಸುಖಸುಮ್ಮನೆ ರಸ್ತೆಗಿಳಿಯುವ ವಾಹನಗಳ ತಪಾಸಣೆ ಕೆಲಸ ನಗರದ ಕೆಲ ಕಡೆ ಮಾತ್ರ ನಡೆಯುತ್ತಿತ್ತು.
ನಗರದ ಬಿ.ಎಂ. ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಓಡಾಡುವ ವಾಹನಗಳ ಪರಿಶೀಲನೆಯನ್ನು ಪೊಲೀಸರು ಮಾಡುತ್ತಿದ್ರು. ಬಹುತೇಕ ಜನರು ಆಸ್ಪತ್ರೆ ಇಲ್ಲವೇ ಕೊರೋನಾ ಡ್ಯೂಟಿ ಎಂದು ಕಾರಣ ಹೇಳುತ್ತಿದ್ದರು. ಉಳಿದಂತೆ ರಸ್ತೆಗಳಲ್ಲಿ ಯಾವ ವಾಹನವನ್ನು ತಡೆಯುತ್ತಿರಲಿಲ್ಲ. ಆದರೂ ಲಾಕ್ ಡೌನ್ ಆದೇಶ ಇರುವುದರಿಂದ ಬಹುತೇಕ ಜನರು ಹೊರಗೆ ಬರಲಿಲ್ಲ. ಕೆಲವರಂತು ಸುಮ್ಮನೆ ಹೊರಗೆ ಬಂದು ಸುತ್ತಾಡಿಕೊಂಡು ಹೋಗುವವರು ಹೆಚ್ಚಾಗಿದ್ದರು.
Tags
ಹಾಸನ