ಹಾಸನ: ಹೇಮಾವತಿ ಪ್ರತಿಮೆ ಬಳಿ ನಗರ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರ ಮತ್ತು ಮಹಾವೀರ ವೃತ್ತದಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದು, ಆದರೇ ಬುಧವಾರದಂದು ಎಲ್ಲಾ ವ್ಯಾಪಾರವನ್ನು ದಿಡೀರನೆ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದರಿಂದ ವ್ಯಾಪಾರಸ್ತರು ಪರದಾಡಿ ಕೊನೆಗೆ ಎಲ್ಲೆಂದರಲ್ಲಿ ಬೀದಿ ಬದಿ ಇಟ್ಟುಕೊಂಡು ವ್ಯಾಪಾರ ಮಾಡಬೇಕಾಯಿತು.
ಲಾಕ್ ಡೌನ್ ಹಿನ್ನಲೆಯಲ್ಲಿ ವಾರದ ಮೂರು ದಿನಗಳ ಕಾಲ ವ್ಯಾಪಾರ ಮಾಡಲು ನಗರ ಬಸ್ ನಿಲ್ದಾಣದಲ್ಲಿ ಅವಕಾಶ ಕೊಡಲಾಗಿತ್ತು. ಇನ್ನು ಮಹಾವೀರ ವೃತ್ತದ ಬಳಿ ಹೂವಿನ ವ್ಯಾಪಾರ ಮಾಡುತ್ತಿದ್ದರು. ಆದರೇ ಬೆಳಿಗ್ಗಿನ ಸಮಯದಲ್ಲಿ ವ್ಯಾಪಾರ ಮಾಡಲು ಜನರು ನೂಕು ನುಗ್ಗಲಿನಲ್ಲಿ ಬರುತ್ತಿದ್ದರಿಂದ ಕೊರೋನಾ ಹರಡುವ ಸ್ಪಾಟ್ ಎಂಬAತೆ ಗೋಚರಿಸುತಿತ್ತು. ನಗರ ಬಸ್ ನಿಲ್ದಾಣದಲ್ಲಿ ೩೦ ಜನರು ಮಾತ್ರ ವ್ಯಾಪಾರ ಮಾಡಲು ಅವಕಾಶ ಕೊಡುವುದಾಗಿ ಸೂಚನೆ ನೀಡಿದ್ದರು. ಇದಕ್ಕೆ ವ್ಯಾಪಾರಸ್ತರು ಒಪ್ಪಿರಲಿಲ್ಲ. ಬುಧವಾರದಂದು ಬೆಳಿಗ್ಗೆ ನಗರಸಭೆ ಆಯುಕ್ತರು ಸೇರಿ ಈ ಭಾಗದಲ್ಲಿ ವ್ಯಾಪಾರ ಮಾಡುವುದೇ ಬೇಡ ಎಂದು ನಿರ್ಧರಿಸಿ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವಂತೆ ಸೂಚಿಸಿದರು. ಈವೇಳೆ ವ್ಯಾಪಾರಸ್ತರಿಂದ ವಿರೋಧಗಳು ಕೇಳಿ ಬಂದರೂ ಅಧಿಕಾರಿಗಳು ಒಪ್ಪಲಿಲ್ಲ. ಕೊನೆಗೆ ವ್ಯಾಪಾರಸ್ತರಲ್ಲಿ ಕೆಲವರು ಮಾತ್ರ ಜಿಲ್ಲಾ ಕ್ರೀಡಾಂಗಣಕ್ಕೆ ಹೋದರೇ ಉಳಿದವರು ಅಲ್ಲಲ್ಲಿ ರಸ್ತೆ ಬದಿ ವ್ಯಾಪಾರ ಮಾಡಲು ಮುಂದಾದರು. ಸ್ಲೇರ‍್ಸ್ ಹಾಲ್ ಬಳಿ ರಸ್ತೆ ಬದಿ ವ್ಯಾಪಾರ ಮಾಡಲು ಮುಂದಾಗಿದ್ದರಿAದ ಅಲ್ಲಿ ಸಲ್ಪ ಟ್ರಾಪೀಕ್ ಸಮಸ್ಯೆ ಕಂಡು ಬಂದಿತು. ಒನ್ನು ಎಂ.ಜಿ. ರಸ್ತೆ, ಸಾಲಗಾಮೆ ರಸ್ತೆ ಇತರೆ ಕಡೆಗಳಲ್ಲಿ ತರಕಾರಿ ಮತ್ತು ಹೂವಿನ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿತು. ಜಿಲ್ಲಾ ಕ್ರೀಡಾಂಗಣದಲ್ಲಿ ಯಾವ ವ್ಯವಸ್ಥೆಯಿಲ್ಲದೆ ಇರುವುದರಿಂದ ಮಳೆ ಬಂದು ಗುಂಡಿಯಲ್ಲಿ ಮಳೆ ನಿಂತು ಕೆಸರು ರೀತಿ ಆಗಿತ್ತು. ಇಲ್ಲೆ ವ್ಯಾಪಾರ ಮಾಡಬೇಕಾಯಿತು. ಗ್ರಾಹಕರು ಕೆಸರಿನಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲೂ ಕೂಡ ಸಾಮಾಜಿಕ ಅಂತರ ಇರಲಿಲ್ಲ. ಜನಸಂದಣೆ ಹೆಚ್ಚಾಗಿತ್ತು.
ಮಹಾವೀರ ವೃತ್ತ, ಸಹ್ಯಾದ್ರಿ ವೃತ್ತ ತಿರುಗಾಡುವ ರಸ್ತೆ ಮಧ್ಯೆ ಅಡ್ಡದಾಗಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ವಾಹನಗಳೂ ಅರಳೇಪೇಟೆ ಮಾರ್ಗವಾಗಿ ಸಂಚಾರ ನಡೆಸಿದ್ದು, ಟ್ರಾಪೀಕ್ ಜಾಮ್ ಸಮಸ್ಯೆ ಕಂಡು ಬಂದಿತು. ಹಾಸನ ನಗರದ ಬಹುತೇಕ ಕಡೆ ವಾಹನಗಳ ಸಂಚಾರ ಹೆಚ್ಚಾಗಿಯೇ ಇತ್ತು.