ಬಾಡಿಗೆ ಇಲ್ಲದೆ ಸಂಕಷ್ಟದಲ್ಲಿದ್ದ ವಾಹನದ ಮಾಲೀಕರಿಗೆ ಸಲ್ಪವಾದರೂ ಉಸಿರು ಬಂದಂತಾಯಿತು

ಹಾಸನ: ಕೊರೋನಾ ಸೋಂಕು ಹರಡಿ ಲಾಕ್ ಡೌನ್ ಆದೇಶ ಇರುವದರಿಂದ ಯಾವ ವಾಹನ ರಸ್ತೆಗಿಳಿಯದೆ ಸಂಕಷ್ಟದಲ್ಲಿದ್ದ ವಾಹನಗಳ ಮಾಲೀಕರಿಗೆ ಈಗ ಸಲ್ಪವಾದರೂ ಉಸಿರು ಬಂದಾAತಾಗಿದೆ.


       ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಿಯಂತ್ರಿಸಲು ಸರಕಾರವು ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಕಾರ್ಯಕ್ರಮವನ್ನು ಕೈಗೊಳ್ಳಲು ವಾಹನವನ್ನು ಬಾಡಿಗೆ ಪಡೆಯುತ್ತಿದೆ. ಹೆಚ್ಚಾಗಿ ಗ್ರಾಮೀಣ ಭಾಗಗಳಲ್ಲಿ ವಾಸ ಮಾಡುವ ಜನರಿಗೆ ಹೆಚ್ಚು ಕೊರೋನಾ ಸೋಂಕು ಹರಡುತ್ತಿರುವುದರಿಂದ ವೈದ್ಯರು ಮತ್ತು ಸಿಬ್ಬಂದಿಗಳ ತಂಡವು ಹಾಸನ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಭೌತಿಕ ಪರೀಕ್ಷೆ, ಗಂಟಲು ಮಾಧರಿ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಸೂಕ್ತ ಚಿಕಿತ್ಸೆ ನೀಡುವುದು, ಅವಶ್ಯಕತೆ ಇದ್ದರೇ ವೈದ್ಯಕೀಯ ಕಿಟ್ ಗಳನ್ನು ವಿತರಣೆ ಮಾಡುವ ಉದ್ದೇಶಗಳಿಗಾಗಿ ಸಂಚಾರಿ ಕ್ಲಿನಿಕ್ ಒಳಗೊಂಡಿರುವ ವೈದ್ಯರ ನಡೆ ಹಳ್ಳಿಗಳ ಕಡೆಗೆ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ನಗರದ ಸರಕಾರಿ ಕಲಾ ಕಾಲೇಜು ಆವರಣದಲ್ಲಿ ನೂರಾರು ಟೆಂಪೊ ವಾಹನಗಳು ಬಾಡಿಗೆಗೆ ನೊಂದಾಣಿ ಮಾಡಿಸಲು ರಸ್ತೆ ಉದ್ದಕ್ಕೂ ಸಾಲಾಗಿ ನಿಂತಿದ್ದವು. ವಾಹನದ ವಿಮೆ ಪರಿಶೀಲಿಸಲು ಆರ್.ಟಿ.ಓ. ಅಧಿಕಾರಿಗಳು ಕೂಡ ದಾವಿಸಿದ್ದರು. ವಿಮೆ ಪಾವತಿ ಮಾಡದೆ ದಿನಾಂಕ ಕೊನೆಯಾದ ವಾಹನವನ್ನು ಬಾಡಿಗೆ ಪಡೆಯದೆ ತಿರಸ್ಕರಿಸುತ್ತಿದ್ದರು. ಒಟ್ಟು ೩೫೦ ಟೆಂಪೋ ವಾಹನಗಳಿದ್ದು, ವೈದ್ಯರ ತಂಡಗಳನ್ನು ಕರೆದೊಯ್ಯಲು ಸದ್ಯಕ್ಕೆ ೪೭ ವಾಹನಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಅನೇಕರು ಸಾಲ ಮಾಡಿ ವಾಹನ ಖರೀದಿ ಮಾಡಿದ್ದು, ತಿಂಗಳಾದರೇ ಹಣ ಕಟ್ಟಬೇಕು. ಆದರೇ ಚಾಲಕರು ಹೇಳಿದರು. ಲಾಕ್ ಡೌನ್ ಇರುವುದರಿಂದ ಟೆಂಪೋ ಮಾಲೀಕರು ಹೆಚ್ಚು ಸಮಸ್ಯೆಯನ್ನು ಎದುರಿಸುತ್ತಿದ್ರು. ಸರಕಾರವೇ ನಮ್ಮ ವಾಹನವನ್ನು ಬಾಡಿಗೆಗೆ ಪಡೆಯುತ್ತಿರುವುದರಿಂದ ಸಲ್ಪವಾದರೂ ನಮಗೆ ಉಸಿರು ಬಂದAತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.


Post a Comment

Previous Post Next Post