ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮಕ್ಕೆ ಜಿಲ್ಲಾ ಮಂತ್ರಿ ಕೆ. ಗೋಪಾಲಯ್ಯ ಚಾಲನೆ

ಹಾಸನ: ನಗರದ ಕಲಾ ಕಾಲೇಜು ಆವರಣದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವೈದ್ಯರ ನಡೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯರವರು ಹಸಿರು ಭಾವುಟ ಪ್ರದರ್ಶಿಸಿ, ವೈದ್ಯ ಸಿಬ್ಬಂದಿಗಳಿಗೆ ಚಿಕಿತ್ಸೆಯ ಕಿಟ್ ಗಳನ್ನು ಕೊಡುವುದರ ಮೂಲಕ ಚಾಲನೆ ಕೊಟ್ಟರು.


       ನಂತರ ಜಿಲ್ಲಾಧಿಕಾರಿ ಕಛೇರಿಯಲ್ಲೂ ಕೂಡ ಅಧಿಕಾರಿಗಳೊಂದಿಗೆ ಸಭೆ ಮಾಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಸೆಯಂತೆ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಚಾಲನೆ ಕೊಡಲಾಗಿದೆ. ಹಾಸನ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ಭೇಟಿ ನೀಡುವ ವೈದ್ಯರ ತಂಡವು ಪರೀಕ್ಷೆ ಮಾಡುವಾಗ ಯಾರಿಗೆ ಕೊರೋನಾ ಪಾಸಿಟಿವ್ ಇದೆ ಅವರನ್ನು ಕೊರೋನಾ ಕೇಂದ್ರಕ್ಕೆ ಸೇರಿಸುವ ಕೆಲಸ ಮಾಡುತ್ತಾರೆ. ಸ್ಥಳದಲ್ಲಿಯೇ ಮಾತ್ರೆಗಳನ್ನು ಕೊಡಲು ತಂಡವಾಗಿ ಕೆಲಸ ಮಾಡುವ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು. ಮೊದಲ ದಿನದಲ್ಲಿ ೪೭ ವಾಹನವನ್ನು ವಿವಿಧ ಗ್ರಾಮಗಳಿಗೆ ಕಳುಹಿಸಲಾಗುವುದು. ಯಾವ ತಾಲೂಕಿಗೆ ಇನ್ನು ಹೆಚ್ಚಿನ ವಾಹನದ ಅವಶ್ಯಕತೆ ಇದ್ದರೆ ಕಳುಹಿಸುವ ಕೆಲಸ ಮಾಡಲಾಗುವುದು. ಕಳೆದ ಒಮದು ವಾರಗಳಿಂದ ಕೊರೋನಕ್ಕೆ ಸಂಬAಧಿಸಿದAತೆ ಅನೇಕ ಸಭೆಗಳು ನಡೆದಿದೆ. ಇಲ್ಲಿಗೆ ಕೊರತೆ ಇರುವುದನ್ನು ಸರಿ ಮಾಡಲಾಗಿದೆ. ೧೦ ಕೋಟಿ ಹಣ ಕೊಡಲಾಗಿದೆ. ೪೦ ವೆಂಟಿಲೇಟರ್ ಕೊಡಲಾಗಿದೆ. ಹಿಮ್ಸ್ ನಲ್ಲಿ ಆಕ್ಸಿಜನ್ ಪ್ಲಾಂಟ್ ಈಗಾಗಲೇ ಆರಂಭವಾಗಿದೆ. ಕೇಂದ್ರ ಸರ್ಕಾರದಿಂದ ಚನ್ನರಾಯಪಟ್ಟಣ ಮತ್ತು ಸಕಲೇಶಪುರಕ್ಕೆ ಆಕ್ಸಿಜûನ್ ಪ್ಲಾಂಟ್ ಮಂಜೂರಾಗಿದೆ. ಉಳಿದಂತೆ ಎಲ್ಲಾ ತಾಲ್ಲೂಕಿನಲ್ಲಿ ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲಾಗಿದೆ.

     ವೈದ್ಯರ ತಂಡವು ಗ್ರಾಮಗಳಿಗೆ ಹೋಗಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಿದೆ ಎಂಬ ನಂಬಿಕೆ ಇದೆ. ಇಡೀ ತಾಲೂಕಿಗೆ ಒಟ್ಟು ೭೫ ಜನ ವೈದ್ಯರು ಪಾಲ್ಗೊಳ್ಳಲಿದ್ದಾರೆ. ಜೊತೆಯಲ್ಲಿ ೧೫೦ ಜನ ನರ್ಸ್ಗಳು ಇದ್ದಾರೆ. ಸ್ಟಾಪ್ ನರ್ಸಿಂಗ್ ೪೭ ಇದ್ದು, ಡಾಟ ಎಂಟ್ರಿ ಸೇರಿದಂತೆ ಇಡೀ ತಂಡವೇ ಹಳ್ಳಿಗಳಲ್ಲಿ ಇರಲಿದೆ. ಪ್ರತಿನಿತ್ಯ ಎರಡರಿಂದ ಮೂರು ಹಳ್ಳಿಗಳಿಗೆ ಭೇಟಿ ಮಾಡಲಿದೆ. ಇಂದಿನಿAದ ಪ್ರತಿ ಮನೆಯಲ್ಲಿಯೂ ಸೋಂಕಿತರು ಎಷ್ಟು ಇದ್ದಾರೆ ಎಂಬುದು ಗೊತ್ತಾಗಲಿದೆ. ಇನ್ನು ೮-೧೦ ದಿನದೊಳಗೆ ಸೊಂಕಿತರ ಪತ್ತೆ ಮಾಡಿ ಚಿಕಿತ್ಸೆ ನೀಡುತ್ತೇವೆ ಎಂದು ವಿಶ್ವಾಸವ್ಯಕ್ತಪಡಿಸಿದರು. ಸೋಮವಾರದಂದು ಹಾಸನದಲ್ಲಿ ಸೇಪ್ಟ್ ಡೌನ್ ಕೋವಿಡ್ ಸೆಂಟರ್ ಉದ್ಘಾಟನೆಯಾಗಲಿದ್ದು, ಜಿಲ್ಲೆಯಲ್ಲಿ ೭ ಬ್ಲಾಕ್ ಫಂಗಸ್ ಪತ್ತೆಯಲ್ಲಿ ೧ ಸಾವು. ಮೈಸೂರು ಮತ್ತು ಮಂಗಳೂರನಲ್ಲಿ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು. ಮೂರನೇ ಅಲೆಗೆ ಈಗಾಗಲೇ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಶಾಲಾ ಕಾಲೇಜು ಪ್ರಾರಂಭದ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರವಾಗುವುದರಿಮದ ಅಲ್ಲಿಯ ತನಕ ನಾನು ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.

       ಇದೆ ವೇಳೆ ಶಾಸಕ ಪ್ರೀತಮ್ ಜೆ. ಗೌಡ, ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕರ‍್ಯನಿರ್ವಹಣಾಧಿಕಾರಿ ಬಿ.ಎ. ಪರಮೇಶ್, ಉಪವಿಭಾಗದೀಕಾರಿ ಜಗದೀಶ್, ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ ಇತರರು ಪಾಲ್ಗೊಂಡಿದ್ದರು.


Post a Comment

Previous Post Next Post