ಶಾಸಕ ಪ್ರೀತಂ ಜೆ. ಗೌಡರ ಶ್ರಮಕ್ಕೆ ೪೦ ವೆಂಟಿಲೇಟರ್, ಆಕ್ಸಿಜನ್ ಹಾಸನಕ್ಕೆ ಬಂದಿದೆ: ಕೆ. ಗೋಪಾಲಯ್ಯ ಹೇಳಿಕೆ

ಹಾಸನ: ಕ್ಷೇತ್ರದ ಶಾಸಕರಾದ ಪ್ರೀತಮ್ ಜೆ. ಗೌಡರ ಶ್ರಮಕ್ಕೆ ೪೦ ವೆಂಟಿಲೇಟರ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಶನ್ ತಂದಿರುವುದಕ್ಕೆ ನಾನು ಕೃತಜ್ಞತೆ ಹೇಳುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯರವರು ಶ್ಲಾಘಿಸಿದರು.


       ವೈದ್ಯರ ನಡೆ ಹಳ್ಳಿಯ ಕಡೆ ಕ್ರಾರ್ಯಕ್ರಮಕ್ಕೆ ಚಾಲನೆ ಕೊಟ್ಟ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ವೆಂಟಿಲೇಟರ್ ಮತ್ತು ಆಕ್ಸಿಜನ್ ಇಲ್ಲಿಗೆ ಬರಲು ಸ್ಥಳೀಯ ಶಾಸಕರಾದ ಪ್ರೀತಮ್ ಜೆ. ಗೌಡರು ಹೆಚ್ಚು ಒತ್ತಾಯ ಮಾಡಿದ ಹಿನ್ನಲೆಯಲ್ಲಿ ಬಂದಿದೆ. ಆಗೇ ಎಲ್ಲಾ ತಾಲೂಕಿನ ಶಾಸಕರು ಆಯಾ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ತಾಲೂಕಿಗೂ ವೈದ್ಯ ಸಿಬ್ಬಂದಿ ತಂಡ ಕಳುಹಿಸುವ ಕೆಲಸವನ್ನು ಮಾಡಲಾಗಿದೆ. 

ಜಿಲ್ಲೆಗೆ ಇನ್ನು ಹೆಚ್ಚಿನ ಹಣ ಬಿಡುಗಡೆ ಬಗ್ಗೆ ಒತ್ತಾಯ ಮಾಡಿದ್ದು, ಅದನ್ನು ಕೂಡ ಬಿಡುಗಡೆ ಮಾಡಲಾಗುವುದು. ಹಾಸನಕ್ಕೆ ಬೇಕಾಗಿರುವ ವೈದ್ಯರ ಕೊರತೆಯನ್ನು ನಿವಾರಿಸುವುದಾಗಿ ಆರೋಗ್ಯ ಸಚಿವರು ಹೇಳಿದ್ದು, ನಾವು ಕೂಡ ಒತ್ತಾಡವನ್ನು ತರಲಾಗುವುದು ಎಂದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಾಯಕ್ವತದಲ್ಲಿ ನಾವೆಲ್ಲಾ ಒಳ್ಳೆ ಕೆಲಸ ಮಾಡುತ್ತಿದ್ದೇವೆ. ಯಡ್ಡಿಯವರೆ ಸಾರ್ವಬೌಮತ್ವದ ನಾಯಕರು. ಇದಕ್ಕೆ ಬೇರೆ ಪ್ರಶ್ನೆಯೆ ಇಲ್ಲ, ೫ ವರ್ಷದ ಅವಧಿಯನ್ನು ಅವರೆ ಪೂರೈಸಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


Post a Comment

Previous Post Next Post