ಹಾಸನ: ನಗರ ಮತ್ತು ಸುತ್ತ ಮುತ್ತ ರಸ್ತೆಗಳೆಲ್ಲಾ ಭಾನುವಾರದಂದು ಖಾಲಿ ಖಾಲಿ ಕಂಡು ಬಂದ ಹಿನ್ನಲೆಯಲ್ಲಿ ಜಾರಿಗೆ ತಂದಿರುವ ಲಾಕ್ ಡೌನ್ ಬಹುತೇಕ ಯಶಸ್ವಿಯಾದಂತೆ ಕಂಡು ಬಂದಿತು.
ಕೊರೋನಾದಿಂದ ಸಂಭವಿಸುತ್ತಿರುವ ಸಾವು-ನೋವುಗಳನ್ನು ಕಡಿಮೆ ಮಾಡಲು ಮತ್ತು ಜಾಗೃತಿ ತರಲು ರಾಜ್ಯ ಸರಕಾರ ಜಾರಿಗೆ ತಂದಿರುವ ಲಾಕ್ ಡೌನ್ ಮತ್ತೆ ಜೂನ್.೭ರ ವರೆಗೂ ವಿಸ್ತರಣೆ ಮಾಡಿದೆ. ವಾರದ ಸೋಮವಾರ-ಬುಧವಾರ-ಶುಕ್ರವಾರ ಮೂರು ದಿನಗಳ ಕಾಲ ಮಾತ್ರ ಬೆಳಿಗ್ಗೆ ೬ ರಿಂದ ೧೦ರ ವರೆಗೂ ಅಗತ್ಯವಸ್ತುಗಳ ಮಾರಾಟಕ್ಕೆ ಮತ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಮಂಗಳವಾರ-ಗುರುವಾರ-ಶನಿವಾರ-ಭಾನುವಾರದAದು ಯಾರು ಹೊರಗೆ ಕಾಲಿಡುವಂತಿಲ್ಲ. ಮನೆಯಲ್ಲೆ ಇದ್ದು, ಕೊರೋನಾ ವಿರುದ್ಧ ಹೋರಾಡಬೇಕು ಎಂಬ ನಿಯಮವಿದ್ದು, ಉಳಿದಂತೆ ಆಸ್ಪತ್ರೆ, ಮೆಡಿಕಲ್ ಸೇವೆಗಳಿಗೆ ಹೋಗಿ ಬರಲು ಮಾತ್ರ ಅವಕಾಶ ಕೊಡಲಾಗಿದ್ದರೂ ಲಾಕ್ ಡೌನ್ ಜಾರಿಯಾದ ಕೆಲ ದಿನಗಳು ಮಾತ್ರ ಸಾರ್ವಜನಿಕರು ಪಾಲನೆ ಮಾಡಲಿಲ್ಲ. ಹೀಗ ಬಹುತೇಕ ಜನರು ಪಾಲನೆ ಮಾಡಲು ಮುಂದಾಗಿದ್ದಾರೆ. ಆದರೂ ಅಲ್ಲಲ್ಲಿ ಕದ್ದಿಮುಚ್ಚಿ ವ್ಯಾಪಾರಗಳು ನಿರಂತರವಾಗಿ ನಡೆಯುತ್ತಲೆ ಇದ್ದರೂ ಭಾನುವಾರದಂದು ಅಷ್ಟೊಂದು ಜನರು ರಸ್ತೆಗೆ ಇಳಿಯಲಿಲ್ಲ. ವಾಹನಗಳ ಓಡಾಟದಲ್ಲೂ ಕೂಡ ಗಣನೀಯವಾಗಿ ಇಳಿಮುಖ ಕಂಡು ಬಂದಿತು