ಮಟ್ಟನವಿಲೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ|| ಅರುಣ್‌ಕುಮಾರ್ ಅಪ್ಪಟ ಗ್ರಾಮೀಣ ವೈದ್ಯ.

      ಜನರ, ರೋಗಿಗಳ ಸೇವೆ ಮಾಡುತ್ತಾ, ಬಡವರ-ರೋಗಿಗಳ ಸೇವೆ ಮಾಡುತ್ತಾ , ರೋಗಿಗಳ ಪಾಲಿಗೆ ದೇವರಾಗಿ ಕಾಣುವ ಮಟ್ಟನವಿಲೆ ಸಕಾರಿ ಆಸ್ಪತ್ರೆ ವೈದ್ಯ ಡಾ|| ಅರುಣ್ಕುಮಾರ್ ವಿಶೇಷ ವ್ಯಕ್ತಿ, ಮೊದಲ ನೌಕರಿ ಸ್ಥಳ ಮಟ್ಟನವಿಲೆಯಲ್ಲಿ ಸುಮಾರು 25 ವರ್ಷಗಳಿಂದ ಸೇವೆ ಮಾಡುತ್ತಿದ್ದು, ರೋಗಿಗಳ ಸಹಾಯಕ್ಕೆ ಆಪದ್ಬಾವರಾಗಿದ್ದಾರೆ. ಗ್ರಾಮೀಣ ಭಾಗದಜನರಿಗೆ ರಾತ್ರಿ ಹಗಲು ಎನ್ನದೇ ಸದಾ ದೊರೆಯುವ, ಚಿಕಿತ್ಸೆ ವೈದ್ಯ ಎಂದು ಧರ್ಮರಾಜ್ ತಮ್ಮ ಅನುಭವ ಹಾಗೂ ವೈದ್ಯರ ಸೇವೆ ಬಗ್ಗೆ ಪ್ರಶಂಶೀಯ ಮಾತುಗಳಾಗಿದೆ.



15 ವರ್ಷಗಳ ಹಿಂದೆ ಹಿಂದುಳಿದ ಕುಟುಂಬದ ಹೆಣ್ಣು ಮಗಳಿಗೆ ಹೆರಿಗೆ ನೋವು ಕಂಡು ಬಂತು. ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ವಿದ್ಯುತ್ ಇರಲಿಲ್ಲ. ವಾಹನ, ಬಸ್ಸಿನ ಸೌರ್ಯವಿಲ್ಲದೆ, ಮಟ್ಟನವಿಲೆ ಬಳಿಯ ಜಗಲಿಯ ಮೇಲೆ ಹೆರಿಗೆ ಆಗಿತ್ತು.ತಕ್ಷಣ ವಿಷಯ ತಿಳಿದ ವೈದ್ಯ ಡಾ|| ಅರುಣ್ಕುಮಾರ್ ಚಿಕಿತ್ಸೆ ನೀಡಿ, ಮಗು-ತಾಯಿಯನ್ನು ಉಳಿಸಿದ್ದರು. ರಕ್ತಹರಿದು ನಿತ್ರಾಣವಾಗಿದ್ದ ತಾಯಿಗೆ, ಆರೈಕೆ ಮಾಡಿದ್ದರು. ಈಗಾಗಲೇ ಕುಟುಂಬದ ಇವರನ್ನು ದೇವರೆಂದು ಕೈಮುಗಿಯುತ್ತಾರೆ. ಎಂದು ಡಾ|| ಅರುಣ್ತಮ್ಮ ಮರೆಯಲಾಗದಘಟನೆ ಮೆಲುಕು ಹಾಕುತ್ತಾರೆ.

ಇದೇ ರೀತಿ ರಾತ್ರಿ ವೇಳೆ ತುಂಬು ಗರ್ಬಿಣಿ-ಆಕೆಯ ತಾಯಿಯ ಸಂಗಡ ಬಂದು ಮಟ್ಟನವಿಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾದರು. ಹೆರಿಗೆ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ರಾತ್ರಿ ವೇಳೆ ವೈದ್ಯರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಆಸ್ಪತ್ರೆಯಿಂದ ಹೊರಟು, ಮಗುವನ್ನು ಬೇಲಿಯಲ್ಲಿ ವಿಸಾಕಿ ಹೋಗಿದ್ದರು. ಗ್ರಾಮದಲ್ಲಿ ಬೆಳ್ಳಂ ಬೆಳಗ್ಗೆಯೇ ಗಲಾಟೆ-ದ್ದಲ ಆಸ್ಪತ್ರೆ ಮುಂದೆ ,ಅನೈತಿಕ ಹೆರಿಗೆ ಮಾಡಿದ್ದಾರೆಂದರು. ನಾನು ವೈದ್ಯ, ರೋಗಿ ಬಂದಾಗಚಿಕಿತ್ಸೆ ನೀಡಿಕೆ ನನ್ನ ಕರ್ತವ್ಯವಾಗಿದೆ ಎಂದರು.ಮಗು ಇಂದಿಗೂ ಬೆಳೆದು ದೊಡ್ಡವನಾಗಾದ್ದಾನೆ. ತಂದೆ-ತಾಯಿ ಮಾತ್ರಯಾರೆಂದು ತಿಳಿಯದು ಎಂಬ 14 ವರ್ಷಗಳ ಹಿಂದಿನ ಘಟನೆ ತಿಳಿಸುತ್ತಾರೆ.





ಸಕಾರಿ ಆಸ್ಪತ್ರೆಗೆ ಬರುವ 150 ರಿಂದ 200 ರೋಗಿಗಳಿಗೆ ಕಾಲ ನಿಗದಿ ಮಾಡದೇ ಚಿಕಿತ್ಸೆ ನೀಡುತ್ತಿರುವ ಅಪ್ಪಟ ಗ್ರಾಮೀಣ ವೈದ್ಯ. ಅನಾರೋಗ್ಯದಿಂದ ಬಳಲುವ, ವೈದ್ಯರು, ಅಂಗವಿಕರು ಅಸಹಾಯಕರ ಗ್ರಾಮಕ್ಕೆ ಹೋಗಿ, ಚಿಕಿತ್ಸೆ ನೀಡುವ ಹೃದಯವಂತರು.

ಇವರ ಕೈಗುಣ ಚೆನ್ನಾಗಿದೆ. 2-3 ಹೆರಿಗೆಯನ್ನು ಇಲ್ಲೇ ಮಾಡಿಸಿದೆ. ಇವರನ್ನು ಹುಡುಕಿ ತಾಲ್ಲೂಕಿನ ಹಾಗೂ ಪಕ್ಕದ ತಾಲ್ಲೂಕಿನ ಅನೇಕ ಗ್ರಾಮಗಳ ರೋಗಿಗಳು ಇಲ್ಲಿಗೆ ಬರುವುದು ನಿರಂತರವಾಗಿದೆ ಎಂದು ಕುಮಾರ್ ಹೇಳುತ್ತಾರೆ. 6 ಹಾಸಿಗೆ ಉಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಗೆ ವಸತಿ ವ್ಯವಸ್ಥೆ ಇಲ್ಲವಾಗಿದೆ.ಸಿಬ್ಬಂದಿ, ಗ್ರೂಪ್ ಡಿ ನೌಕರರ ಕೊರತೆ ಇದೆ.2 ಬಾರಿ ವರ್ಗಾವಣೆ ಯಾದರೂ ಗ್ರಾಮದ ಹಾಗೂ ಸುತ್ತಲ ಜನರೇ ವರ್ಗಾವಣೆರದ್ದು ಮಾಡಿಸಿದ ಘಟನೆ ಇದೆ.ರಾಷ್ಟಿçà ಹೆದ್ದಾರಿಯ ಬಳಿ ಇರುವ ಆಸ್ಪತ್ರೆ 24*7 ಪಿ.ಹೆಚ್.ಸಿ. ಗೆ 24*7ಸದಾ ಕಾಲ ಇರುವ ವೈದ್ಯ ಡಾ|| ಕಿರಣ್ಕುಮಾರ್ ಜನಪ್ರಿಯ ವೈದ್ಯರು.

Post a Comment

Previous Post Next Post