ಬೇಲೂರು : ವಿದ್ಯುತ್ ಶಾಕ್ ಇಂದ ಹಾಲು ಕೊಡುತ್ತಿದ್ದ ಸತ್ಯನಾರಾಯಣ ಎಂಬುವರಿಗೆ ಹಸುವೊಂದು ಮೃತಪಟ್ಟಿದೆ.
ಸಂಜೆ 4 ಗಂಟೆ ಸಮಯದಲ್ಲಿ ಪಟ್ಟಣದ ದುರ್ಗಮ್ಮ
ದೇಗುಲಕ್ಕೆ ತೆರಳುವ ಮಾರ್ಗದಲ್ಲಿರುವ ಕಟ್ಟೆಯೊಂದರ
ನಡುವೆ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ ಹಸು ಹೋಗಿದ್ದಾಗ ಜೋರಾಗಿ ಕೂಗಿಕೊಂಡಿದೆ. ಕೆಲವೆ ನಿಮಿಷದಲ್ಲಿ ಒದ್ದಾಡಿ ಕೆರೆಯ ನಡುವೆಯೇ ಮೃತಪಟ್ಟಿದೆ. ಟಿ.ಸಿ. ಬಳಿ ವಿದ್ಯುತ್
ಪ್ರಹರಿಸಿರಬಹುದೆಂಬ ಶಂಕೆಯನ್ನು ವ್ಯಕ್ತಪಡಿಸಿರುವ ಹಸು
ಮಾಲೀಕರು, ಪ್ರತಿನಿತ್ಯ 16 ಲೀಟರ್ ಹಾಲು ಕೊಡುತ್ತಿತ್ತು. ಇದೀಗ ವಿದ್ಯುತ್ ಇಲಾಖೆಯವರ ನಿರ್ಲಕ್ಷ್ಯದಿಂದ ಹಸು ಸತ್ತಿದೆ.
ಟ್ರಾನ್ಸ್‍ಫಾರ್ಮರ್ ಬಳಿ ಯಾವುದೆ ರೀತಿಯ ರಕ್ಷಣಾ ವ್ಯವಸ್ಥೆ
ಮಾಡಿಲ್ಲದ ಕಾರಣ ಮೂಕಪ್ರಾಣಿಗಳು ಕೆರೆಯಲ್ಲಿ ನೀರು
ಕುಡಿಯಲು ಹೋದ ಸಂದರ್ಭ ವಿದ್ಯುತ್ ಶಾಕ್‍ಗೆ ಒಳಗಾಗುತ್ತಿವೆ
ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ಸೆಸ್ಕ್ ಎಂಜಿನಿಯರ್ ಎಂ.ಡಿ.ಕುಮಾರ್
ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು.
ಆನಂತರ ಸಾರ್ವಜನಿಕರೊಂದಿಗೆ ಮಾತನಾಡಿದ ಎಂಜಿನಿಯರ್ ಹಸು ಸತ್ತಿರುವ ಬಗ್ಗೆ ಇಲಾಖೆಯ ತಂತ್ರಜ್ಞರೊಂದಿಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
