ಜಿಲ್ಲಾ ಆಸ್ಪತ್ರೆಯಲ್ಲೆ ಆಕ್ಸಿಜನ್ ಉತ್ಪಾದನ ಘಟಕ ಪ್ರಾರಂಭ.

ಹಾಸನ: ಬೇರೆ ಕಡೆ ಅಲೆಯುವ ಬದಲು ಜಿಲ್ಲಾ ಆಸ್ಪತ್ರೆಯಲ್ಲೆ ಆಕ್ಸಿಜನ್ ಉತ್ಪಾದನ ಘಟಕ ಪ್ರಾರಂಭಿಸಿ ನನ್ನ ಸಂಸದ ನಿಧಿಯಿಂದ ೩೫ ಲಕ್ಷ ರೂಗಳನು ಕೊಡುತ್ತೇನೆ. ಇನ್ನು ಎರಡನೇ ಅಲೆ ಗೊತ್ತಿದ್ದರೂ ಮೊದಲೆ ಏಕೆ ಸಿದ್ಧತೆ ಮಾಡಿಕೊಂಡಿಲ್ಲ ಎಂದು ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಪ್ರಶ್ನೆ ಮಾಡಿದರು.


      ನಗರದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಹಿಮ್ಸ್ ನಿರ್ದೇಶಕರು, ಆರೋಗ್ಯಾಧಿಕಾರಿಗಳೊಂದಿಗೆ ಸಭೆ ಕೊರೋನಾದ ಅಂಕಿ-ಅAಶ, ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆ, ರೋಗಿಗಳ ಊಟದ ವ್ಯವಸ್ಥೆ ಹಾಗೂ ಮೆಡಿಸನ್ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು. ಕೊರೋನಾ ಹರಡುವ ಮುನ್ಸೂಚನೆ ಇದ್ದಾಗಲೆ ಸಭೆ ಮಾಡಿದ್ದರೇ ಉತ್ತಮವಾಗಿರುತಿತ್ತು. ಪ್ರಾರಂಭದಲ್ಲಿ ೭೦೦ ರಿಂದ ೮೦೦ ಪಾಸಿಟಿವ್ ಪ್ರಕರಣ ಪತ್ತೆಯಾಗುತಿತ್ತು. ಆದರೇ ಕಳೆದ ನಾಲ್ಕು ದಿವಸಗಳಿಂದ ೧೪೦೦ ರಿಂದ ೨೫೦೦ ಮೇಲೆ ದಾಟಿದೆ. ಪರಿಸ್ಥಿತಿ ನೋಡಿದರೇ ಇನ್ನು ಹೆಚ್ಚಾಗುವ ಸಾಧ್ಯತೆ ಇದ್ದು, ಇದರಲ್ಲಿ ಶೇಕಡ ೧೦ ರಷ್ಟು ತುಂಬ ಸಿರಿಯೆಸ್ ಕೇಸುಗಳಿವೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ಇರುವುದೆ ೪೦೦ ಮಾತ್ರ. ಇದೆ ರೀತಿ ಪಾಸಿಟಿವ್ ಹೆಚ್ಚಾಗುತ್ತಿದ್ರೆ ಹಾಸಿಗೆ ಕೊರತೆ ಕಂಡು ಬರುತ್ತದೆ. ಕಳೆದ ವರ್ಷದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಬಂದಾಗ ಸಭೆಯಲ್ಲಿ ನಾನು ಮಾತನಾಡಿದ್ದೇನು. ಕೊರೋನಾ ಸೋಂಕು ಹೆಚ್ಚಾದರೇ ನಮಗೆ ಆಕ್ಸಿಜನ್ ಕೊರತೆ ಬರುತ್ತದೆ. ನನ್ನ ಸಂಸದರ ನಿಧಿಯಿಂದಲೇ ೩೫ ಲಕ್ಷ ರೂಗಳನ್ನು ಕೊಡುತ್ತೇನೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲೆ ಆಕ್ಸಿಜನ್ ಜನರೇಟರ್ ನ ಸೌಲಭ್ಯ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದೇನು ಆಗ ಇದೆ ಜಿಲ್ಲಾಧಿಕಾರಿಗಳು ನಮ್ಮ ಮಾತಿಗೆ ಉದಾಸೀನ ಮಾಡಿದ್ದರು ಎಂದು ಅಸಮಧಾನವ್ಯಕ್ತಪಡಿಸಿದರು. ಕೂಡಲೇ ಆಕ್ಸಿಜನ್ ಘಟಕವನ್ನು ಇಲ್ಲೆ ನಿರ್ಮಾಣ ಮಾಡಲೇಬೇಕು. ಅದಕ್ಕೆ ಬೇಕಾದ ಹಣವನ್ನು ಕೊಡುವುದಾಗಿ ಹೇಳಿದರು. ನಾವುಗಳು ತುರ್ತು ಸಂದರ್ಭದ ಬಗ್ಗೆ ಮೊದಲೆ ಸಿದ್ಧತೆ ಮಾಡಿಕೊಳ್ಳದೇ ಇವತ್ತು ತೊಂದರೆ ಕಂಡರೆ ಇವತ್ತೆ ಹೋರಾಟ ಮಾಡುತ್ತಿದ್ದೀವಿ. ನಮ್ಮ ಜಿಲ್ಲೆಯ ವೈದ್ಯರ ಬಗ್ಗೆ ನನಗೆ ಅಭಿಮಾನವಿದೆ. ಅನೇಕರನ್ನು ಬದುಕಿಸಿ ಕಳುಹಿಸುತ್ತಿದ್ದೀರಾ ಅದನ್ನು ಅಭಿನಂದಿಸುತ್ತೇನೆ. ಆದರೇ ಇಂದಿನ ಪರಿಸ್ಥಿತಿ ಗಮನಿಸಬೇಕಾಗಿದೆ. ಚಾಮರಾಜ ನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನಪ್ಪಿದ ಘಟನೆ ಹಾಸನ ಜಿಲ್ಲೆಯಲ್ಲಿ ಮರುಕಳಿಸಬಾರದು ಅಷ್ಟೆ. ಕೊರತೆ ಆಗುವ ಮೊದಲೆ ಆಕ್ಸೀಜನ್ ಮತ್ತು ಹಾಸಿಗೆ ಹಾಗೂ ಮೆಡಿಸನ್ ಎಲ್ಲಾವನ್ನು ಮೊದಲೆ ಸಿದ್ಧತೆ ಮಾಡಿಕೊಳ್ಳಬೇಕು. ಇರುವ ರೋಗಿಗಳಿಗೆೆ ಸೌಲಭ್ಯ ಕೊಡಲು ಏಕೆ ಆಗುತ್ತಿಲ್ಲ. ಮತ್ತೆ ರೋಗಿಗಳು ದಾಖಲಾದರೇ ಮುಂದೆ ಎದುರಿಸಬೇಕಾದ ಪರಿಸ್ಥಿತಿ ಬಗ್ಗೆ ಯೋಚನೆ ಮಾಡಬೇಕು ಎಂದು ಪ್ರಶ್ನೆ ಮಾಡಿದರು. 

      ನಾವು ಬೆಟ್ಟಕ್ಕೆ ಕಲ್ಲು ಹೊಡೆಯುತ್ತಿದ್ದೇವೆ ಎಷ್ಟು ಆಗುತ್ತೆ ಅಷ್ಟು ಹೊಡೆಯೋಣ, ಕೊಡುವುದು ಬಿಡುವುದು ಸರಕಾರಕ್ಕೆ ಸೇರಿದ್ದು, ಎರಡುವರೆ ಸಾವಿರ ಕೇಸು ಒಂದು ದಿನದಲ್ಲಿ ಬರುತ್ತಿದೆ. ದಿನೆ ದಿನೆ ಕಡಿಮೆ ಆಗುತ್ತಿಲ್ಲ. ಹೆಚ್ಚಾಗುತ್ತಿದೆ. ಸದ್ಯಕ್ಕೆ ನಮ್ಮಲ್ಲಿ ರೆಮಿಡಿಸಿವರ್ ಮೆಡಿಸನ್ ಒಂದೆ ತೊಂದರೆ ಕಾಡುತ್ತಿರುವುದು. ಅದನ್ನು ಪೂರೈಸುವ ಕೆಲಸ ಮಾಡಬೇಕು ಎಂದರು. ಶವ ಎತ್ತುಕೊಂಡು ಹೋಗಲು ಅಂಬ್ಯುಲೆನ್ಸ್ ಬಳಸುವುದಲ್ಲ. ಬೆಂಗಳೂರಲ್ಲಿ ಇದೆ ಸಮಸ್ಯೆ ಕಂಡು ಬಂದಿದೆ. ಜಿಲ್ಲೆಯಲ್ಲಿ ರೋಗಿಗಳ ಉಳಿಸಲು ತುರ್ತು ವಾಹನ ಬಳಸಬೇಕು. ಬೇಕಾದರೇ ಶ್ರದ್ಧಾಂಜಲಿಗೆ ನಗರಸಭೆಯಿಂದ ಇನ್ನೆರಡು ವಾಹನ ಹೆಚ್ಚು ಮಾಡೋಣ, ಬೆಂಗಳೂರಲ್ಲಿ ಶವವನ್ನು ಎತ್ತಿಕೊಂಡು ಹೋಗಲು ದಂಧೆ ನಡೆಸುತ್ತಿದ್ದಾರೆ. ಹಾಸನದಲ್ಲಿ ನಡೆಯಬಾರದು. ಇರುವ ಜೀವವನ್ನು ಉಳಿಸುವುದು ನಮ್ಮ ಉದ್ದೇಶವಾಗಬೇಕು ಎಂದು ವೈದ್ಯಾಧಿಕಾರಿಗಳಿಗೆ ಮತ್ತು ವೈದ್ಯರಿಗೆ ಸಲಹೆ ನೀಡಿದರು. 

     ರೋಗಿಗಳಿಗೆ ಊಟದ ವ್ಯವಸ್ಥೆ ಕುರಿತು ಮಾಹಿತಿ ಕೇಳಿ ನಂತರ ಮಾತನಾಡಿದ ಅವರು, ಕಲ್ಲಂಗರೆ ಹಣ್ಣು ಬದಲು ಡ್ರೆöÊಪುಡ್, ಆರೆಂಜ್, ಮೂಸುಂಬೆ ನೀಡಿ, ನಿಂಬೆಹಣ್ಣು ಜ್ಯೂಸ್ ಬೇಕಾದರೆ ನೀಡಿ. ಇನು ಊಟದ ವ್ಯವಸ್ಥೆ ಸರಿಯಾಗಿದೆ ಎಂದರು. ೧೭ ಖಾಸಗಿ ಆಸ್ಪತ್ರೆಯಲ್ಲಿ ಒಂದು ಆಸ್ಪತ್ರೆಯನ್ನು ಜನರಲ್ ಆಸ್ಪತ್ರೆಯಾಗಿ ಮಾಡಿ, ಊಳಿದ ಆಸ್ಪತ್ರೆಯನ್ನು ಕೊರೋನಾ ರೋಗಿಗಳಿಗೆ ಮೀಸಲಿಡಿ. ಹಾಸನದಲ್ಲೆ ಆಕ್ಸಿಜನ್ ಕೊರತೆ ಇರುವಾಗ ಚಿಕ್ಕಮಗಳೂರಿಗೆ ಆಕ್ಸಿಜನ್ ಇಲ್ಲಿಂದ ಕಳುಹಿಸುವುದು ಬೇಡ ಎಂದು ಹೇಳಿದರು. ಸೆಕ್ಯುರಿಟಿ ಇವರನ್ನು ಕೊರೋನಾ ವಾರಿರ‍್ಸ್ ಎಂದು ಪರಿಗಣಿಸಿ ಅವರಿಗೆ ಸೌಲಭ್ಯ ನೀಡಬೇಕು. ಹಣಕೊಟ್ಟ ಅಧಿಕಾರಿಗಳನ್ನು ಕರೆತರುವ ಬದಲು ಒಳ್ಳೆ ಅಧಿಕಾರಿಗಳಿದ್ದು, ಅವರನ್ನು ತಂದು ಕೂರಿಸಿ ಕೆಲಸ ಮಾಡುತ್ತಾರೆ ಎಂದು ಸಲಹೆ ಕೊಟ್ಟರು.

       ಇದೆ ವೇಳೆ ಹಿಮ್ಸ್ ನಿರ್ದೇಶಕ ಬಿ.ಸಿ. ರವಿಕುಮಾರ್, ಜಿಲ್ಲಾ ಸರ್ಜನ್ ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಇತರರು ಉಪಸ್ಥಿತರಿದ್ದರು.


Post a Comment

Previous Post Next Post