ನಾಗಮಂಗಲ : ಜಾನಪದ ಅಕಾಡಮಿ ಸಂಸ್ಥೆಯ ಜನಕ ತಾಲೂಕಿನ ಕದಬ ಹಳ್ಳಿ ಗ್ರಾಮದ ಜಾನಪದ ವಿದ್ವಾಂಸ ರಾದ ಕ.ರಾ.ಕೃಷ್ಣಸ್ವಾಮಿ ( 90 ) ವಯೋ ಸಹಜ ಖಾಯಿಲೆಯಿಂದ ಶನಿವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನ ರಾಗಿದ್ದಾರೆ . ತಾಲೂಕಿನ ಕದಬಹಳ್ಳಿ ಗ್ರಾಮದ ಪಟೇಲ್ ರಾಮೇಗೌಡ ಮತ್ತು ಚೆನ್ನಮ್ಮ ಅವರ ಪುತ್ರರಾಗಿ 1936 ರಲ್ಲಿ ಜನಿಸಿದ ಇವರು ಜಾನಪದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಯ ಮೈಲಿಗಲ್ಲು ಸ್ಥಾಪಿಸಿ ಕರಾಕೃ ಎಂದು ಪ್ರಸಿದ್ದಿ ಗೊಂಡರು . ಕಳೆದ 5 ದಶಕಗಳಿಂದ ಜಾನಪದ ಕಲೆಯ ಪೋಷಣೆಗೆ ಶ್ರಮಿಸಿರುವ ಇವರು ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದ ಸುಮಾರು 35 ಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ . ಜನಪದ ಸಾಹಿತ್ಯ ನಶಿಸುತ್ತಿರುವುದನ್ನು ಮನ ಗೊಂಡ ಇವರು ಕಾವೋದಯ ಪ್ರಕಾಶನವೆಂಬ ಸಂಸ್ಥೆಯನ್ನು ಆರಂಭಿಸಿ ನೂರಾರು ಜನಪದ ಸಂಕಲನಗಳನ್ನು ಹೊರ ತಂದಿದ್ದಾರೆ . ಕಾಮೋದಯ ಪ್ರಕಾಶನವೆಂಬ ಸಂಸ್ಥೆಯೇ ಇಂದು ಜನಪದ ಸಾಹಿತ್ಯ ಅಕಾಡಮಿಯಾಗಿ ಸೇವೆ ಸಲ್ಲಿಸು ತ್ತಿದೆ . ಜನಪದ ಸಾಹಿತ್ಯದ ಅನ್ವೇಷಣೆ , ಪ್ರಕಟಣೆ ಹಾಗೂ ಆಧುನಿಕ ವಿಧಾನಗಳನ್ನು ಬಳಸಿಕೊಂಡು ಜನಪದ ಗೀತೆಗಳ ಧ್ವನಿಮುದ್ರಣಗೊಳಿಸಿದ್ದಾರೆ . ಇವರು ನಾಗಮಂಗಲ ತಾಲೂಕು 2 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು . ಇವರು ಪತ್ನಿ ಲಲಿತಮ್ಮ ಹಾಗೂ ಓರ್ವ ಮಗ ಮತ್ತು ಮಗಳನ್ನು ಬಿಟ್ಟು ಅಗಲಿದ್ದಾರೆ . ಮೃತರ ಅಂತ್ಯಕ್ರಿಯೆಯು ಭಾನುವಾರ ಕದಬಹಳ್ಳಿಯಲ್ಲಿನ ತಮ್ಮ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ . ಮೃತರ ನಿಧನಕ್ಕೆ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಮಂಜೇಶ್ , ಶಾಸಕರಾದ ಸುರೇಶ್‌ಗೌಡ ಮತ್ತು ಅಪ್ಪಾಜಿಗೌಡ , ಮಾಜಿ ಸಚಿವ ಚಲುವ ರಾಯಸ್ವಾಮಿ , ಮಾಜಿ ಸಂಸದ ಶಿವರಾಮೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ .
Tags
ಮಂಡ್ಯ