ಅಧಿಕಾರಿಗಳು ಕೊಣನೂರು ಆಸ್ಪತ್ರೆ ಪರಿಶೀಲನೆ

ಹಾಸನ ಮೇ 27 : ಜಿಲ್ಲಾಧಿಕಾರಿಗಳ ನಿರ್ದೇಶನದಂತೆ Doctors for you (NGO) ವತಿಯಿಂದ ಅರಕಲಗೂಡು ತಾಲ್ಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರವನ್ನು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳುವ ಕುರಿತು ಇಂದು ಅಧಿಕಾರಿಗಳು ಪರಿಶೀಲನೆ ನಡೆಸಿದರು. 



ಈ ಸಂದರ್ಭದಲ್ಲಿ ತಹಶಿಲ್ದಾರ್ ವೈ.ಎನ್.ರೇಣುಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾಮಿಗೌಡ, ತಾಲ್ಲೂಕು ನೋಡಲ್ ಅಧಿಕಾರಿ ಡಾ.ಎಂ.ಡಿ.ಸುದರ್ಶನ್, ಹಾಸನ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ಎಂ.ವಿಜಯ್, ಡಾಕ್ಟರ್ಸ್ ಫಾರ್ ಯೂ ಎನ್.ಜಿ.ಓ ದ

ಡಾ.ಅಖಿಲೇಶ್ ಒಡೆಯರ್ ಹಾಗೂ ಇನ್ನತರ ಅಧಿಕಾರಿಗಳು ಉಪಸ್ಥಿತರಿದ್ದರು.

Post a Comment

Previous Post Next Post