ಕೊರೋನಾ ನಿಯಂತ್ರಣ ಸೇವೆಗೆ ಖಾಸಗಿ ಶಾಲಾ ವಾಹನಗಳ ಬಳಕೆಗೆ ಕ್ರಮ

ಹಾಸನ ಮೇ೨೮:-ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಿಕರು ತಮ್ಮ ಶಾಲೆಗಳ ವಾಹನಗಳನ್ನು ನೀಡುವುದರ ಮೂಲಕ ಕೋವಿಡ್ ಸೋಂಕು ತಡೆಗಟ್ಟಲು  ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ ತಿಳಿಸಿದ್ದಾರೆ.  


ಎಸ್.ಆರ್.ಎಸ್ ಪ್ರಜ್ಞಾ ಶಾಲಾ ಸಭಾಂಗಣದಲ್ಲಿAದು ಖಾಸಗಿ ಶಾಲೆ ಆಡಳಿತ ಮಂಡಳಿಯ ಮಾಲಿಕರ  ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು ಪ್ರತಿಯೊಬ್ಬರು ಪ್ರಾಮಾಣಿಕವಾಗಿ  ಪ್ರಯತ್ನ ಪಟ್ಟರೆ ಕೋರೋನಾ  ನಿರ್ಮೂಲನೆ ಮಾಡಲು ಸಾಧ್ಯ ಎಂದರು.

ಸಾರ್ವಜನಿಕರೆಲ್ಲರೂ ಮನೆಯಲ್ಲಿಯೇ ಇದ್ದು ನಮ್ಮ ಸುತ್ತಮುತ್ತಲಿನ ಜನರಿಗೆ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ ಕೊರೋನಾದಿಂದ ರಕ್ಷಿಸಬೇಕು ಎಂದು ಹೇಳಿದರು. 

ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಲಸಿಕೆಯನ್ನು ಪಡೆದುಕೊಂಡು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದರ ಮೂಲಕ   ಕೋವಿಡ್ ತಡೆಗಟ್ಟಿ ಎಂದರು. 

ವೈದ್ಯರ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ವೈದ್ಯರುಗಳು ಗ್ರಾಮಗಳಲ್ಲಿ ಭೇಟಿ ನೀಡಿ ಕೊರೋನಾ ಸೋಂಕು ನಿಯಂತ್ರಣ ಮಾಡುವುದರ ಜೊತೆಗೆ ಇನ್ನಿತರ  ಆರೋಗ್ಯ  ಸಮಸ್ಯೆಗಳಿಗೂ ಸಲಹೆ, ಸೂಚನೆ, ಚಿಕಿತ್ಸೆ ನೀಡುವುದರ ಮೂಲಕ ಕೋವಿಡ್ ಹರಡುವುದನ್ನು ತಡೆಗಟ್ಟುತ್ತಿದ್ದಾರೆ ಎಂದು ಹೇಳಿದರು.

ಖಾಸಗಿ ಶಾಲೆಗಳ ಒಕ್ಕೂಟದ ಕಾರ್ಯದರ್ಶಿ ಗಂಗಾಧರ್ ಅವರು ಮಾತನಾಡಿ ಉತ್ತಮ ಸ್ಥಿತಿಯಲ್ಲಿ  ಶಾಲೆಗಳ ವಾಹನಗಳನ್ನು ನೀಡಲು ಸಮ್ಮತಿಸಿದರು.

ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪ್ರಕಾಶ್, ಡಿವೈಎಸ್ಪಿ ಪುಟ್ಟಸ್ವಾಮಿ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಶಿವರಾಮ್ ಗೌಡ, ವಿವಿಧ ಖಾಸಗಿ ಶಾಲೆಗಳ ಮುಖ್ಯಸ್ಥರುಗಳು ಮತ್ತಿತರರು ಹಾಜರಿದ್ದರು. 


Post a Comment

Previous Post Next Post