ಕೊರೋನಾ ಸೋಂಕಿಗೆ ಪತ್ರಕರ್ತರ ಸ್ವಾಮಿಗೌಡ ಬಲಿ

ಹಾಸನ: ಕೊರೋನಾ ಸೋಂಕಿಗೆ ಸಾವನಪ್ಪಿದ ಹಿರಿಯ ಪತ್ರಕರ್ತ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಸ್ವಾಮೀಗೌಡರವರಿಗೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.


      ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಅಧ್ಯಕ್ಷರಾದ ಪ್ರಸನ್ನಕುಮಾರ್ ರವರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆದ ಸಂತಾಪ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷರಾದ ಪ್ರಸನ್ನಕುಮಾರ್ ರವರು, ಹಿರಿಯ ಪತ್ರಕರ್ತರು, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ವರ್ಷ ಸೇವೆ ಸಲ್ಲಿಸಬೇಕಿದ್ದ ಸ್ವಾಮೀಗೌಡ ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದರು.

      ಮಾಜಿ ಅಧ್ಯಕ್ಷ ಕೆ.ಆರ್. ಮಂಜುನಾಥ್ ಮಾತನಾಡಿ, ಪತ್ರಕರ್ತ ಜೊತೆಗೆ ಉತ್ತಮ ಸಂಘಟಕರಾಗಿಯೂ ಉತ್ತಮ ಕೆಲಸ ಮಾಡುತ್ತಿದ್ದ ಸ್ವಾಮೀಗೌಡ ಅವರು ಸ್ನೇಹಜೀವಿಯಾಗಿದ್ದರು. ಮಹಾಮಾರಿಗೆ ಅವರು ಬಲಿಯಾಗಿದ್ದು ಅತೀವ ನೋವು ತಂದಿದೆ ಎಂದರು.

     ಕ್ರೀಯಾಶೀಲರಾಗಿ ಪತ್ರಕರ್ತರ ಸಂಘದ ಎಲ್ಲಾ ಚಟುವಟಿಕೆಗಳಲ್ಲೂ ಅತ್ಯುತ್ಸಾಹದಿಂದ ತೊಡಗಿಸಿಕೊಳ್ಳುತ್ತಿದ್ದರು ಎಂದು ಹಿರಿಯ ಪತ್ರಕರ್ತ ಬಾಳ್ಳುಗೋಪಾಲ್ ಹೇಳಿದರು.

     ರಾಜ್ಯ ಕರ‍್ಯಕಾರಿ ಸಮಿತಿ ಸದಸ್ಯ ರವಿ ನಾಕಲಗೂಡು ಮಾತನಾಡಿ, ಚನ್ನರಾಯಪಟ್ಟಣ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸಾಲು ಸಾಲು ಕಾರ್ಯಕ್ರಮ ಮಾಡಿದ್ದ ಸ್ವಾಮೀಗೌಡ ಅವರು, ಸಾಮಾಜಿಕ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದರು.

    ಜನತಾಮಾಧ್ಯಮ ಪತ್ರಿಕೆ ಸಂಪಾದಕರಾದ ಆರ್.ಪಿ. ವೆಂಕಟೇಶ್ ಮೂರ್ತಿ ಅವರು, ಧೈರ್ಯಶಾಲಿಯಾಗಿದ್ದ ಸ್ವಾಮೀಗೌಡರು ಅನೇಕರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಇವರ ಸಾವು ನಮ್ಮೆಲ್ಲರಿಗೂ ಪಾಠವಾಗಬೇಕು. ಪತ್ರಕರ್ತರೆಲ್ಲರೂ ಕೊರೊನಾ ವಿಚಾರದಲ್ಲಿ ನಿರ್ಲಕ್ಷ÷್ಯವಹಿಸದೆ, ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು. ಈ ಬಗ್ಗೆ ಜನರಲ್ಲೂ ಭಯ ಮೂಡಿಸದೆ, ಅರಿವು ಮೂಡಿಸಿ ಅವರಲ್ಲಿ ಆತ್ಮಸ್ಥೆöÊರ್ಯ ತುಂಬುವ ಕೆಲಸ ಮಾಡೋಣ ಎಂದರು.

ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಸ್.ಆರ್.ಪ್ರಸನ್ನ ಕುಮಾರ್ ಮಾತನಾಡಿ, ವೈಯಕ್ತಿಕವಾಗಿ ನಾನು ಉತ್ತಮ ಗೆಳೆಯನನ್ನು ಕಳೆದುಕೊಂಡಿದ್ದೇನೆ. ಅವರು ಆಸ್ಪತ್ರೆಗೆ ಸೇರಿದ ದಿನದಿಂದಲೂ ಅವರಿಗೆ ಸಾಕಷ್ಟು ಧೈರ್ಯ ಹೇಳಿದ್ದೆ. ಆದರೂ ಬದುಕಿ ಬರಲಿಲ್ಲ ಎಂದು ಭಾವುಕರಾದರು. ಸ್ವಾಮೀಗೌಡ ಅವರ ಸಾವು ಎಲ್ಲಾ ಪತ್ರಕರ್ತರಲ್ಲೂ ಭಯ ಮೂಡಿಸಿರುವುದು ಸಹಜ.

    ರಾಷ್ಟಿçÃಯ ಮಂಡಳಿ ಸದಸ್ಯ ಅತೀಖುರ್ ರೆಹಮಾನ್, ಉಪಾಧ್ಯಕ್ಷ ಹಿಂದೂ ಪ್ರಕಾಶ್, ಪತ್ರಕರ್ತ ಚೌಡಹಳ್ಳಿ ಜಗದೀಶ್ ಮಾತನಾಡಿ, ಸ್ವಾಮೀಗೌಡ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಜಿ.ಸುರೇಶ್ ಸೇರಿದಂತೆ ವಿವಿಧ ಪತ್ರಿಕೆಗಳ ಸಂಪಾದಕರು, ಪತ್ರಕರ್ತರು ಹಾಜರಿದ್ದರು.

    ಇದಕ್ಕೂ ಮುನ್ನ ಸ್ವಾಮೀಗೌಡ ಅವರ ಅಗಲಿಕೆಗೆ ಒಂದು ನಿಮಿಷ ಮೌನ ಆಚರಿಸಿ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.


Post a Comment

Previous Post Next Post