ಹಾಸನ: ಕಳೆದ ಮರ‍್ನಲ್ಕು ದಿನದಿಂದ ಸತತ ಮಳೆಯೂ ಹಾಸನದಲ್ಲಿ ಸುರಿಯುತಿದ್ದು, ರಸ್ತೆಯಲ್ಲೆಲ್ಲಾ ನೀರು ತುಂಬಿತ್ತು.
ಹಲವಾರು ದಿನಗಳಿಂದ ಮಳೆ ಬರುತಿದ್ದು, ಮೋಡದ ವಾತವರಣ ನಿರ್ಮಾಣವಾಗಿದೆ. ಆಗಾಗ್ಗೆ ಬರುವ ಮಳೆಯೂ ಕರ್ತವ್ಯದಲ್ಲಿರುವವರಿಗೆ ಸಲ್ಪ ಅಡಚಣೆ ಆದರೂ ಅಷ್ಟೊಂದು ಸಮಸ್ಯೆ ಉಂಟಾಗಲಿಲ್ಲ. ಕೊರೋನಾ ಎಂಬ ಮಹಾಮಾರಿ ಆವರಿಸಿ ಲಾಕ್ ಡೌನ್ ಆಗಿ ಜನರು ಮನೆಯಿಂದ ಹೊರಗೆ ಬಾರದೆ ಇರುವದರಿಂದ ಮಳೆಯಿಂದ ಯಾರಿಗೂ ನಷ್ಟವಾಗಲಿಲ್ಲ. ವಿವಿಧ ಬೆಳೆಗಳನ್ನು ಬಿತ್ತನೆ ಮಾಡುವ ಸಮಯವಾಗಿರುವುದರಿಂದ ರೈತರಿಗೆ ಈಗ ಮಳೆಯ ಅವಶ್ಯಕತೆ ಇದೆ. ಹಾಸನದಲ್ಲಿ ಸೋಮವಾರ ಸುರಿದ ಮಳೆಯಿಂದ ರಸ್ತೆಯಲ್ಲಿರುವ ಗುಂಡಿಗಳಲ್ಲಿ ನೀರು ನಿಂತಿರುವುದು ಕಂಡು ಬಂದಿತು.
Tags
ಹಾಸನ