ಹಾಸನ: ಕೊರೋನಾ ಮಹಾಮಾರಿ ಬಡ ಜನರ ಜೀವ ಹಾಗೂ ಜೀವನದ ಮೇಲೆ ಅಟ್ಟಹಾಸ ಮೆರೆಯುತ್ತಿದೆ.ಇದನ್ನು ನಿಯಂತ್ರಿಸಲು ಸರ್ಕಾರ ಲಾಕ್ ಡಾನ್ ನಿಯಮ ಜಾರಿಗೆ ತಂದಿದ್ದು ಇದರಿಂದ ಬಡ ಜೀವಗಳು ಕೆಲಸ ಇಲ್ಲದೆ ಅನ್ನಕ್ಕಾಗಿ ಹಾತುತೋರೆಯುತ್ತಿವೆ. ಇದನ್ನು ಸರಿಪಡಿಸಲು ಸರ್ಕಾರ ಏನೇ ಕ್ರಮಗಳನ್ನು ತೆಗೆದುಕೊಂಡರೂ ಬಡಪಾಯಿಗಳ ಹಸಿವು ನೀಗಿಸಲು ಸಾಧ್ಯವಾಗುತ್ತಿಲ್ಲ.ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಹಸಿದವರಿಗೆ ಆಹಾರ ವಿತರಣೆ ಮಾಡಲು ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಹಾಸನ ನಗರದ ಸುತ್ತಮುತ್ತ ಬಡವರು ಇರುವ ಜಾಗವನ್ನು ಗುರುತಿಸಿಕೊಂಡು ಅವರಿಗೆ ಆಹಾರ ವಿತರಣೆ ಮಾಡುತ್ತಿದ್ದಾರೆ .ಹತ್ತಾರು ದಿನಗಳಿಂದ ಸುಮಾರು 15 ಹೆಚ್ಚು ಯುವಕರ ತಂಡವನ್ನು ಕಟ್ಟಿಕೊಂಡು ಮಂಜೇಗೌಡ ಅವರು ಕಾರ್ಮಿಕರಿಗೆ, ಸಹಾಹಕರಿಗೆ,ಆಸ್ಪತ್ರೆ ರೋಗಿಗಳ ಸಂಬಂಧಿಕರಿಗೆ, ತುರ್ತು ವಾಹನ ಚಾಲಕರಿಗೆ,ಬಡವರಿಗೆ, ಭೀಕ್ಷುಕರಿಗೆ ಆಹಾರ ವಿತರಣೆ ಮಾಡುವ ಕಾಯಕದಲ್ಲಿ ತೊಡಗಿರುವುದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಸ್ ಹಾಗೂ ರೈಲ್ವೆ ನಿಲ್ದಾಣ,ಎಪಿಎಂಸಿ ಮಾರುಕಟ್ಟೆ ಆವರಣ , ಆಸ್ಪತ್ರೆಗಳ ಬಳಿ, ಮಾರುಕಟ್ಟೆ ಹೀಗೆ ಎಲ್ಲಿ ಬಡವರು ಹಾಗೂ ಕೂಲಿಕಾರ್ಮಿಕರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಪಡೆದುಕೊಂಡು ನಿತ್ಯ ಊಟ ವಿತರಿಸುವ ಮೂಲಕ ಬಡವರ ಹಸಿವು ನೀಗಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಕಾಂಗೈ ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ಲಾಕ್ ಡೌನ್ ನಿಂದ ಬಡಜನರು ಕೆಲಸ ಕಳೆದುಕೊಂಡು ಊಟ ಮಾಡಲು ಕಷ್ಟ ಪಡುತ್ತಿದ್ದಾರೆ. ಇನ್ನು ಕೊರೋನಾ ನಿಯಂತ್ರಣಕ್ಕೆ ಬಾರದಿರುವುದು ಆತಂಕಗೊಂಡಿದ್ದಾರೆ.ಇಂತಹ ಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವಾಗುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದ್ದು ನಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದೇವೆ ಎಂದರು.
ಬಡವರ ,ಅಹಾಯಕರು ಹಸಿವು ನೀಗಿಲೆಂದು ನಮ್ಮ ತಂಡ ಆಹಾರ ವಿತರಣೆ ಮಾಡುತ್ತಿದೆ.ನಾನು ಕೂಡ ಹೋಗುತ್ತೇನೆ.ಸರ್ಕಾರಬಡಜನರ ನೆರವಿಗೆ ಬರಬೇಕು.ಬರಿ ಲಾಕ್ ಡೌನ್ ಮಾಡುವುದು ಮುಖ್ಯವಲ್ಲ ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಮುಖ್ಯವಾಗಿದೆ ಎಂದರು. ಕಳೆದ ಲಾಕ್ ಡೌನ್ ಸಂದರ್ಭದಲ್ಲಿಯೂ ನಾನುಜನರ ನೆರವಿಗೆ ಬಂದಿದೆ.ಅದರಂತೆ ಎರಡನೇ ಲಾಕ್ ಡೌನ್ ನಲ್ಲಿಯೂ ಬಡವರ ನೆರವಾಗುತ್ತಿದ್ದೇನೆ. ಕೊರೋನಾ ಸೊಂಕಿನ ಬಗ್ಗೆ ಜನರು ಭಯಪಡದೆ ಎಚ್ಚರಿಕೆ ವಹಿಸಿದರೆ ಕೋವಿಡ್ ನಿಯಂತ್ರ ಸಾಧ್ಯ ಎಂದ ಅವರು ಜನರು ಆದಷ್ಟು ಕೋವಿಡ್ ನಿಯಮ ಪಾಲಿಸಿ ವೈರಸ್ ಓಡಿಸಲು ಸಹಕಾರ ನೀಡಬೇಕು ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
Tags
ಹಾಸನ