ಬೇಲೂರಿನಲ್ಲಿ ಕೊರೊನಾ ಆತಂಕ-ಭಯವಿಲ್ಲದೆ ಜನಸಂಚಾರ ವಾಹನ-ಜನ ದಟ್ಟಣೆಯ ನಡುವೆ ನಡೆದ ವ್ಯಾಪಾರ ವಹಿವಾಟು

 


ಬೇಲೂರು: ಕೊರೊನಾ ಹಿನ್ನಲೆಯಲ್ಲಿ ಸರ್ಕಾರ ಜಾರಗೆ ತಂದಿರುವ ನಿಯಮದಂತೆ ಸೋಮವಾರ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರಗಿನ ಅವಧಿಯಲ್ಲಿ ದಿನಬಳಕೆ ವಸ್ತುಗಳ ಖರೀದಿಗೆ ದಶಕಗಳ ಇತಿಹಾಸದಲ್ಲಿ ನೋಡಿರದಷ್ಟು ವಾಹನ ಹಾಗೂ ಸಾರ್ವಜನಿಕರ ಸಂಚಾರವಿತ್ತು. ಪಟ್ಟಣದ ನೆಹರೂನಗರದಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲದವರಗೆ ಮತ್ತು ಡಾ.ಅಂಬೇಡ್ಕರ್ ನಗರ ಹಾಗೂ ಹೊಳೆಬೀದಿ ರಸ್ತೆಯಲ್ಲಿ ಸಾವಿರಾರು ವಾಹನಗಳು ಇದ್ದವು.ರಸ್ತೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ಅಡಚಣೆಯಾಯಿತು. ವಾಹನದ ಚಾಲಕರೆ ರಸ್ತೆಯಲ್ಲಿ ನಿಂತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು.ವಾಹನಕ್ಕೆ ತಕ್ಕುನಾಗಿ ಸಾರ್ವಜನಿಕರೂ ಇದ್ದರು. ಇವರಾರಿಗೂ ಕೊರೊನಾ ಭಯ, ಆತಂಕ ಇದ್ದಂತೆ ಕಂಡುಬರಲಿಲ್ಲ. ಜಾತ್ರೋಪಾದಿಯಲ್ಲಿ ಮುಗಿಬಿದ್ದು ವಸ್ತುಗಳ ಖರೀದಿಸಿದರು. ಬಸ್ ನಿಲ್ದಾಣದೊಳಗೆ ವಾರದ ಸಂತೆಗೆ ಅನುಗುಣವಾಗಿ ಜನಜಂಗುಳಿಯ ನಡುವೆಯೆ ವರ್ತಕರು ತರಕಾರಿ ಇನ್ನಿತರ ವ್ಯಾಪಾರ ವಹಿವಾಟು ನಡೆಸಿದರು. ಅಂಗಡಿ ಮುಂಗಟ್ಟು ಮುಂದೆ ನೂಗುಕುಗ್ಗಲಿನ ನಡುವೆಯೇ ವಸ್ತುಗಳ ಖರೀದಿಸುತ್ತಿದ್ದದು ಕಂಡುಬಂತು.ರಸ್ತೆಯ ಎರಡೂ ಬದಿಯಲ್ಲಿ ವಾಹನಗಳಲ್ಲಿ ಹಣ್ಣು ಇನ್ನಿತರ ವಸ್ತುಗಳ ಇಟ್ಟು ಮಾರಾಟ ಮಾಡುತ್ತಿದ್ದದು ಸುಗಮ ವಾಹನ ಸಂಚಾರಕ್ಕೆ ಮತ್ತಷ್ಟು ಅಡ್ಡಿಯಾಯಿತು. 

10 ಗಂಟೆಯ ನಂತರ ಪೊಲೀಸರು ಅಂಗಡಿಗಳ ಬಾಗಿಲು ಮುಚ್ಚಿಸಿದರು. ನಂತರ ವಾಹನಗಳ ಸಂಖ್ಯೆ ಇಳಿಮುಖವಾಯಿತು. ಶನಿವಾರ ಹಾಗೂ ಭಾನುವಾರ ಎರಡು ದಿನ ಪೂರ್ಣ ಪ್ರಮಾಣದಲ್ಲಿ ಲಾಕ್‍ಡೌನ್ ಇದ್ದುದರಿಂದ ಇಂದು ಒತ್ತಡ ಹೆಚ್ಚಾಯಿತು ಎನ್ನುವುದು ಕೆಲವರ ವಾದವಾದರೆ, ಮಳೆ ಬಂದ ಹಿನ್ನಲೆಯಲ್ಲಿ ರೈತರು ಕೃಷಿ ಚಟುವಟಿಕೆಗೆ ಅನುಕೂಲ ಆಗುವಂತೆ ಬಿತ್ತನೆಬೀಜ, ಗೊಬ್ಬರ, ಕ್ರಿಮಿನಾಶಕ ಇತ್ತಾದಿಗಳ ಖರೀದಿಗೆ ಪಟ್ಟಣಕ್ಕೆ ಆಗಮಿಸಿದ್ದು ವಾಹನದಟ್ಟಣೆ ಹೆಚ್ಚಲು ಕಾರಣ ಎನ್ನುವುದು ಚರ್ಚೆಯ ವಿಷಯವಾಗಿತ್ತು.

ಟ್ಟಿನಲ್ಲಿ ಹತ್ತಾರು ವರ್ಷದಿಂದ ಯಾವುದೆ ಜಾತ್ರೆ ಇನ್ನಿತರ ಸಂದರ್ಭದಲ್ಲು ಕಾಣದಷ್ಟು ವಾಹನ ಮತ್ತು ಜನರ ಕೊರೊನಾ ಸಂದರ್ಭದಲ್ಲಿನ ಈ ನಡೆ ಜೀವದ ಮೇಲೆ ಭಯವಿಲ್ಲದಂತೆ ಇತ್ತು ಎಂಬುದು ಸ್ಪಷ್ಟವಾಗಿತ್ತು. ಪೊಲೀಸರು ಹಾಗೂ ಆರೋಗ್ಯ ಇಲಾಖೆಯವರ ಮನವಿ, ಶ್ರಮ, ಜಾಗೃತಿ ಇದಾವುದಕ್ಕೂ ಜನರಿಂದ ಸ್ಪಂಧನೆ ಇಲ್ಲದ್ದು ಬೇಸರದ ಸಂಗತಿಯೇ ಸರಿ.

 ಇಂದಿನ ಜನ ಹಾಗೂ ವಾಹನ ದಟ್ಟಣೆಯನ್ನು ಕಂಡ ಹಲವರು ಮುಂದೇನು ಎಂಬ ಪ್ರಶ್ನೆ ಮಾಡುತ್ತಿದ್ದರು.



1) ಬೇಲೂರಿನಲ್ಲಿ ಸೋಮವಾರ ಒತ್ತಡದ ನಡುವೆ ವಾಹನ ಸಂಚಾರ ಇತ್ತು.



) ಬೇಲೂರಿನ ಬಸ್ ನಿಲ್ದಾಣದಲ್ಲಿ ವಾರದ ಸಂತೆಯ ದಿನವಾದ ಸೋಮವಾರ ಸಂತೆಗೆ ಪರ್ಯಾಯವಾಗಿ ವ್ಯಾಪಾರ ನಡೆಯಿತು


Post a Comment

Previous Post Next Post