ಹಾಸನ: ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿದಿಂದ ಹೆಚ್ಚಾಗುತ್ತಿದ್ದು ಸಾವುನೋವುಗಳು ಕೂಡ ಎರಿಕೆಯಾಗುತ್ತಿದೆ ಇವುಗಳನ್ನು ತಡೆಯುವಲ್ಲಿ ಜಿಲ್ಲಾಡಳಿತ ಸಂಪರ‍್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಹಾಸನ ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆ ವ್ಯಾಪಾಕವಾಗಿದೆ.ನಗರದ ಹಿಮ್ಸ್ ನಲ್ಲಿ ( ಜಿಲ್ಲಾ ಆಸ್ಪತ್ರೆಯಲ್ಲಿ) ಆಕ್ಸಿಜನ್ ಕೊರತೆಯಿಂದ ಕೋವೀಡ್ ಸೋಂಕಿತರು ಸಾವಿಗೀಡಾಗುತ್ತಿದ್ದಾರೆ
ದಿನನಿತ್ಯ ೨೦ ರಿಂದ ೩೦ ಜನ ಸಾವನ್ನಪುತ್ತಿದ್ದಾರೆ ಎಂದು ರ‍್ಕಾರದ ಕರ‍್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸೋಂಕಿತರ ಸಂಖ್ಯೆ ದಿನಕ್ಕೆ ಎರಡು ಸಾವಿರ ಗಡಿ ದಾಟುತ್ತಿದೆ. ಇದು ಮೇಲ್ನೋಟಕ್ಕೆ ಕಂಡು ಬಂದರು ಇನ್ನು ಹೆಚ್ಚು ಜನರು ಸೋಂಕಿನಿಂದ ಬಳಲುತ್ತಿದ್ದಾರೆ.ಸಾವಿನ ಪ್ರಮಾಣವೂ ಕೂಡ ಹೆಚ್ಚುತ್ತಿದೆ. ಆದರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿಯನ್ನು ನೀಡುತ್ತಿಲ್ಲ. ಸುಳ್ಳು ಹಾಗೂ ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ದೂರಿದರು.
ಆಕ್ಸಿಜನ್ ಸಮಸ್ಯೆ ಬಗ್ಗೆ ಈವರೆಗೂ ಯಾರು ಮಾತನಾಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಜಿಲ್ಲಾಧಿಕಾರಿ ಆರ್ .ಗಿರೀಶ್ ಅವರು ಆಕ್ಸಿಜನ್ ಕೊರತೆ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ನನಗೆ ಈಗಾಗಲೇ ಹಲವು ಸೊಂಕಿತರ ಕುಟುಂಬದವರು ನನ್ನನ್ನು ಸಂರ‍್ಕಿಸಿ ಹೇಳಿದ್ದಾರೆ ಎಂದು ಹೇಳಿದರು.
ರಾಜ್ಯ ರ‍್ಕಾರ ಹಾಗೂ ಹಾಸನ ಜಿಲ್ಲಾಡಳಿತಕ್ಕೆ ಕನಿಷ್ಟ ಮಾನವೀಯತೆ ಇಲ್ಲದಂತೆ ರ‍್ತಿಸುತ್ತಿದ್ದಾರೆ. ಸಾಲುಸಾಲಾಗಿ ನಿತ್ಯ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದರು ಇವರಿಗೆ ಕರುಣೆಯೇ ಇಲ್ಲ. ಆಕ್ಸಿಜನ್ ಸಮರ‍್ಕವಾಗಿ ಪೂರೈಸುವ ಕಡೆ ರಾಜ್ಯ ರ‍್ಕಾರ ಗಮನಿಸಬೇಕು. ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಾಸನ ಜಿಲ್ಲೆಯತ್ತ ತರ‍್ತು ಗಮನಹರಿಸಬೇಕು ಎಂದು ಒತ್ತಾಯಿಸಿದರು.
ರೆಮ್ಡಿಸಿವಿರ್ ಔಷಧಿಯ ಸಮಸ್ಯೆ ಇದ್ದರೂ ರ‍್ಕಾರ ನಿಗಾವಹಿಸುತ್ತಿಲ್ಲ. ಇನ್ನು ಲಸಿಕೆ ನೀಡುವಲ್ಲಿ ವಿಫಲವಾಗಿದೆ.ಮೊದಲ ಡೋಸ್ ಲಸಿಕೆ ತೆಗೆದುಕೊಂಡವರಿಗೆ ಎರಡನೇ ಬಾರಿಗೆ ಇಲ್ಲವಾಗಿ ಆತಂಕಗೊಂಡಿದ್ದಾರೆ. ರ‍್ಕಾರ ಜನರ ಪ್ರಾಣ ಉಳಿಸಲು ನರ‍್ಲಕ್ಷ್ಯ ವಹಿಸಿದೆ ಎಂದರು
ಹಾಸನದ ಆಸ್ಪತ್ರೆಗೆ ೧೩ ಸಾವಿರ ಟನ್( ಐಒಔ)ದ್ರವ ರೂಪದ ಆಕ್ಸಿಜನ್ ಬಂದಿದೆ ಎಂದು ಆಸ್ಪತ್ರೆಯ ಮುಖ್ಯಸ್ಥರು ಹೇಳಿದ್ದರೂ ಸಾವು ಏಕೆ ಹೆಚ್ಚುತ್ತಿದೆ ಎಂದು ಪ್ರಶ್ನಿಸಿದ ಅವರು ಆಕ್ಸಿಜನ್ ,ವೆಂಟಿಲೇಟರ್ ಕೊರತೆ ಹೆಚ್ಚಾಗಿದೆ. ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಕೂಡ ಆಕ್ಸಿಜನ್ ಕೊರತೆ ಇದೆ ಎಂದು ತಿಳಿಸಿದರು.
ಇನ್ನು ಹಾಸನ ಕ್ಷೇತ್ರದ ಶಾಸಕ ಪ್ರೀತಮ್ ಗೌಡ ಅವರು ಮಸ್ಕಿ ಉಪಚುನಾವಣೆ ಪ್ರಚಾರಕ್ಕೆ ಹೋಗಿ ಕೊರೋನಾ ಅಂಟಿಸಿಕೊಂಡು ಬಂದು ತಮ್ಮ ಕುಟುಂಬದ ಸ್ನೇಹಿತರಿಗೂ ಹರಡಿದರು. ಈಗ ಆರೋಗ್ಯ ಸುಧಾರಿಸಿಕೊಂಡಿದ್ದರೂ ಆಕ್ಸಿಜನ್ ಕೊಡಿಸುವತ್ತ ಗಮನಹರಿಸಲೇ ಇಲ್ಲ
ಹಾಗಾಗಿ ಆಕ್ಸಿಜನ್ ಕೊರತೆ ಹೆಚ್ಚಾಗಿದೆ.
ಈ ಸಂರ‍್ಭದಲ್ಲಿ ರ‍್ಕಾರ ಹಾಸನ ವಿಧಾನಸಭಾ ಕ್ಷೇತ್ರ ಹಾಗೂ ಜಿಲ್ಲೆಯ ಬಗ್ಗೆ ತಾತ್ಸರಧೋರಣೆ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ಜಿಲ್ಲೆಯ ಬಗ್ಗೆ ಮಲತಾಯಿಧೋರಣೆ ಮಾಡದೆ ಹಾಸನ ಜಿಲ್ಲೆಗೆ ಆಕ್ಸಿಜನ ನೀಡುವ ಮೂಲಕ ಹಾಸನ ಜಿಲ್ಲೆಯ ಜನರ ಪ್ರಾಣ ಉಳಿಸಲು ಸಹಕಾರ ನೀಡಬೇಕು ಎಂದು ರ‍್ಕಾರಕ್ಕೆ ಮನವಿ ಮಾಡಿಕೊಂಡರು.
