ಇಂದಿನಿಂದ ನಾಲ್ಕು ದಿನ ಮಂಡ್ಯ ಸಂಪೂರ್ಣ ಲಾಕ್ ಡೌನ್

 ಮಂಡ್ಯ: ಜಿಲ್ಲೆಯಲ್ಲಿ ಇಂದಿನಿಂದ (ಮೇ 25, 26, 28, 29 ) ನಾಲ್ಕು ದಿನ ಪೂರ್ತಿ ಬ್ಯಾಂಕ್ ವ್ಯವಹಾರ ನಿರ್ಬಂಧಿಸಿ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿ ಡಿಸಿ ಅಸ್ವತಿ ಆದೇಶ ಹೊರಡಿಸಿದ್ದಾರೆ.


ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದು ವೈದ್ಯಕೀಯ ಸೇವೆ, ಹಾಲಿನ ಬೂತ್, ನ್ಯಾಯ ಬೆಲೆ ಅಂಗಡಿ ಹಾಗೂ ಕೃಷಿ ಚಟುವಟಿಕೆಗಳಿಗೆ ಪೂರಕ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಎಲ್ಲವೂ ಸ್ತಬ್ಧ. ದಿನಸಿ, ತರಕಾರಿ ಖರೀದಿಗೂ ಅವಕಾಶ ಇಲ್ಲ. ಹೊಟೆಲ್ ಗಳು, ಮದ್ಯದಂಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗುತ್ತದೆ. ಓಡಾಡಿದ್ರೆ ಕಠಿಣ ಕ್ರಮದ ಎಚ್ಚರಿಕೆಯನ್ನು ಡಿಸಿ ನೀಡಿದ್ದಾರೆ.

Post a Comment

Previous Post Next Post