ಹಾಸನ: ಕೊರೋನಾ ಎಂಬ ಮಹಾಮಾರಿ ದಿನೆ ದಿನೆ ಹೆಚ್ಚಾಗುತ್ತಿದ್ದರೂ ರೋಗವನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಸೂಕ್ತವಾಗಿ ನಿಗಾವಹಿಸುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಕೀಲರ ಸಂಘದ ಮಾಜಿ ಅಧ್ಯಕ್ಷ ದೇವರಾಜೇಗೌಡ ಗಂಭೀರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರದಂದು ಮಾತನಾಡುತ್ತಾ, ಕೊರೋನ ಸಾಂಕ್ರಾಮಿಕ ರೋಗವು ದಿನೇ ದಿನೇ ಉಲ್ಬಣಗೊಳ್ಳುತ್ತಿದ್ದು, ಈ ರೋಗವನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ನಿಗಾವಹಿಸುತ್ತಿಲ್ಲ. ಸಕಾಲಕ್ಕೆ ಆಕ್ಸಿಜನ್, ಕೊವ್ಯಾಕ್ಸಿನ್, ಕೋವಿಶೀಲ್ಡ್ ಮತ್ತು ರೆಮಿಡಿಸಿವರ್ ಲಸಿಕೆಯನ್ನು ಕೂಡ ಒದಗಿಸಲು ಸರ್ಕಾರಗಳು ವಿಫಲವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೇಜವಬ್ದಾರಿ ಮತ್ತು ಉದಾಸೀನತೆಯಿಂದ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಇವರ ವೈಫಲ್ಯತೆಯನ್ನು ಕಂಡೂ ಕಾಣದಂತೆ ಕಣ್ಣುಮುಚ್ಚಿ ಕೈಕಟ್ಟಿ ಕುಳಿತಿರಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಸುಪ್ರೀಮ್ ಕೋರ್ಟ್ ಇದೆ ಎಂದರು.
ಕೊರೋನಾ ವಿಚಾರವಾಗಿ ಕೇಂದ್ರ ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ಇವರು ನ್ಯಾಯಾಲಯದ ಆದೇಶದ ಬಗ್ಗೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾ ಎಂದು ಹಗುರವಾಗಿ ಮಾತನಾಡಿದ್ದಾರೆ ಮತ್ತು ಬಿ.ಜೆ.ಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರು ಕೂಡ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರು ಸರ್ವಜ್ಞರಲ್ಲವೆಂದು ಹೇಳಿಕೆ ನೀಡಿದ್ದಾರೆ. ಭಾರತ ದೇಶದ ಇತಿಹಾಸವನ್ನು ಅವಲೋಕಿಸಿದಾಗ ಹಲವು ಸಂದರ್ಭಗಳಲ್ಲಿ ಸಮಯೋಚಿತವಾಗಿ ವಿವಿಧ ನ್ಯಾಯಾಲಯಗಳು ಸಲಹೆ ಸೂಚನೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೀಡಿರುತ್ತವೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಿಕೆ ಕೂಡ ಆಗಿರುತ್ತದೆ. ಆದರೆ ನ್ಯಾಯಾಲಯಗಳ ಆದೇಶವನ್ನು ಧಿಕ್ಕರಿಸುವ ರೀತಿಯಲ್ಲಿ ಈ ಇಬ್ಬರು ಮಾತನಾಡಿರುವುದು ನಾಚಿಕೆಗೇಡಿನ ವಿಚಾರವಾಗಿರುತ್ತದೆ. ಕೇಂದ್ರ ಮಂತ್ರಿಯಾಗಿರುವ ಡಿ.ವಿ. ಸದಾನಂದಗೌಡರು ಕೇಂದ್ರ ಕಾನೂನು ಸಚಿವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಆಗಿರುತ್ತಾರೆ ಅಲ್ಲದೆ ವಕೀಲರಾಗಿಯು ಕೂಡ ಸೇವೆ ಸಲ್ಲಿಸಿರುತ್ತಾರೆ. ಇಂತಹ ಜವಬ್ದಾರಿಯುತ ವ್ಯಕ್ತಿ ನ್ಯಾಯಾಲಯದ ಬಗ್ಗೆ ಹಗುರವಾಗಿ ಮಾತನಾಡಿರುವುದು ಸಮಾಜ ವಿರೋಧಿಯಾಗಿರುತ್ತದೆ ಎಂದು ದೂರಿದರು. ಈ ವ್ಯಕ್ತಿ ಅಸಂಬದ್ದ ಪದಗಳನ್ನು ನ್ಯಾಯಾಧೀಶರುಗಳ ವಿರುದ್ಧ ಉಪಯೋಗಿಸಿರುವುದು ಖಂಡನೀಯ. ತನ್ನ ನೀಚ ಕೃತ್ಯಗಳಿಂದಲೇ ಹೆಸರುವಾಸಿಯಾಗಿರುವ ಇವರ ಮತ್ತು ಕೇಂದ್ರ ಸಚಿವ ಸದಾನಂದಗೌಡರ ವಿರುದ್ಧ ಸರ್ವೋಚ್ಚ ನ್ಯಾಯಾಲಯವು `` ಸುಮೋಟೋ ( ಸ್ವಯಂಪ್ರೇರಿತ ) ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಂಗ ನಿಂದನೆ ಪ್ರಕರಣದ ಅಡಿಯಲ್ಲಿ ಶಿಕ್ಷಿಸುವ ಮೂಲಕ ನ್ಯಾಯಾಲಯದ ಮುಂದೆ ಖುದ್ದು ಕರೆಸಿ ಛೀಮಾರಿ ಹಾಕಬೇಕಾಗಿರುವುದು ಅತ್ಯವಶ್ಯಕವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರದಲ್ಲಿ ಬಿ.ಜೆ.ಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವು ಸಂದರ್ಭಗಳಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡಿ ತನ್ನ ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸಿದ ಉದಾಹರಣೆಗಳು ಸಾಕಷ್ಟಿವೆ. ಇದಕ್ಕೆ ಪುರಾವ ಎಂದರ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿ ವಿಚಾರವಾಗಿ ಜಾರಿಯಲ್ಲಿರುವ `` ಕೊಲೇಜಿಯಮ್ ಪದ್ಧತಿಯನ್ನು ರದ್ದು ಮಾಡುವ ಮೂಲಕ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿತ್ತು . ಆದರೇ ಸುಪ್ರೀಮ್ ಕೋರ್ಟ್ ವಿಫಲಗೊಳಿಸಿತ್ತು. ನಂತರ ಕೇಂದ್ರ ಬಿ.ಜೆ.ಪಿ ಸರ್ಕಾರವು ಏನಾದರೂ ನ್ಯಾಯಾಂಗದ ಮೇಲೆ ನಿಯಂತ್ರಣ ಸಾಧಿಸಲೇಬೇಕೆಂಬ ದೋರಣೆಯಿಂದ `` ನ್ಯಾಷನಲ್ ಜ್ಯೂಡಿಷಿಯಲ್ ಅಪಾಯಿಂಟ್‌ಮೆAಟ್ ಕಮಿಷನ್ '' ತರುವ ಉದ್ದೇಶದಿಂದ ಬಿಲ್ ಪಾಸ್ ಮಾಡಿತ್ತು ಈ ಬಿಲ್‌ನ್ನು ಕೂಡ ಸುಪ್ರೀಮ್ ಕೋರ್ಟ್ ರದ್ದುಪಡಿಸಿರುತ್ತದೆ. ಅಲ್ಲದೆ ಮೀಸಲಾತಿಯನ್ನು ರದ್ದುಪಡಿಸಲು ಪ್ರಯತ್ನಿಸಿರುವ ಕೇಂದ್ರ ಸರ್ಕಾರದ ಉದ್ದೇಶವನ್ನು ಕೂಡ ಸುಪ್ರೀಮ್ ಕೋರ್ಟ್ ವಿಫಲಗೊಳಿಸಿರುತ್ತದೆ ಎಂದರು. ವಿರೋಧ ಪಕ್ಷಗಳು ತನ್ನ ನಡೆಯನ್ನು ವಿರೋಧಿಸುತ್ತವೆ ಎಂಬ ಉದ್ದೇಶದಿಂದ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಬೇಕೆಂಬ ಉದ್ಘಾರ ಹೊಂದಿರುವ ಕೇಂದ್ರ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯನ್ನು ಕೂಡ ನಿಯಂತ್ರಣಕ್ಕೆ ಪಡೆದು ತನ್ನ ಪಾರುಪತ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿರುತ್ತದೆ ಇದು ಖಂಡನೀಯ ಮತ್ತು ಕಾನೂನು ವಿರೋಧಿ ಚಟುವಟಿಯಾಗಿರುತ್ತದೆ . ಬಿ.ಜೆ.ಪಿ. ಸರ್ಕಾರದ ನಡೆ ಅಸಂವಿಧಾನಿಕ ಕೂಡ ಆಗಿರುತ್ತದೆ ಎಂದು ವಿರೋಧಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ವಕೀಲರಾದ ಅಪ್ಪಣ್ಣಗೌಡ, ಕಾಂಗ್ರೆಸ್ ಮುಖಂಡರಾದ ತಮ್ಮೇಗೌಡ ಇತರರು ಉಪಸ್ಥಿತರಿದ್ದರು.