ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತಷ್ಟು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಲಾಕ್ಡೌನ್ ಅವಧಿಯನ್ನು ವಿಸ್ತರಿಸಿದೆ. ಸಂಜೆ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಿಎಂ.ಬಿ.ಎಸ್ ಯಡಿಯೂರಪ್ಪ ಜೂನ್ 14 ವರೆಗೂ ಲಾಕ್ಡೌನ್ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.
ರಾಜ್ಯದಲ್ಲಿ ನಿತ್ಯ ಸುಮಾರು 15000 ಪ್ರಕರಣಗಳು ಪತ್ತೆಯಾಗುತ್ತಿದೆ. ಗ್ರಾಮೀಣ ಭಾಗಗಳಿಗೆ ಸೋಂಕು ಹಚ್ಚಿದೆ. ಪಾಸಿಟಿವಿಟಿ 11.22% ರಷ್ಟಿದ್ದು ಸಾವಿನ ಪ್ರಮಾಣಪ್ರಮಾಣ 2.82% ರಷ್ಟಿದೆ. ಪರಿಣಾಮ ರಾಜ್ಯದಲ್ಲಿ ನಿತ್ಯ 400 ಅಧಿಕ ಮಂದಿ ಸಾವನ್ನಪ್ಪುತ್ತಿದ್ದಾರೆ.
ರಾಜ್ಯದಲ್ಲಿ ಪಾಸಿಟಿವಿಟಿ ಪ್ರಮಾಣದ ಜೊತೆಗೆ ಸಾವಿನ ಪ್ರಮಾಣದ ನಿಯಂತ್ರಣಕ್ಕೆ ತರುವ ದೃಷ್ಟಿಯಿಂದ ಲಾಕ್ಡೌನ್ ವಿಸ್ತರಿಸುವಂತೆ ಹಲವು ಸಚಿವರು ಸಿಎಂ ಬಿಎಸ್‌ವೈ ಗೆ ಮನವಿ ಮಾಡಿದ್ದರು. ತಜ್ಞರ ಜೊತೆಗೆ ಚರ್ಚಿಸಿದ್ದ ಸಿಎಂ ಇಂದು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಲಾಕ್ಡೌನ್ ನಿಯಮಗಳಲ್ಲಿ ಯಾವುದೇ ವ್ಯತಾಸಗಳಿಲ್ಲದೇ ಈ ಹಿಂದಿನ ಎಲ್ಲ ನಿಯಮಗಳನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.