ಬೆಂಗಳೂರು : ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಹಿನ್ನಲೆ ಮತ್ತಷ್ಟು ವರ್ಗದ ಜನರಿಗೆ ನೆರವು ನೀಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಇಂದು ₹ 500 ಕೋಟಿ ಮೊತ್ತದ ಎರಡನೇ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.
ಇಂದು ವಿಧಾನಸೌಧದಲ್ಲಿ ಲಾಕ್ಡೌನ್ ವಿಸ್ತರಣೆ ಘೋಷಣೆ ಬಳಿಕ ಅವರು ಎರಡನೇ ಪ್ಯಾಕೇಜ್ ಘೋಷಣೆ ಮಾಡಿದರು. ಇದರಲ್ಲಿ ಮೀನುಗಾರರು, ಅರ್ಚಕರು, ಇಮಾಮ್‌ಗಳು, ಆಶಾ ಕಾರ್ಯಕರ್ತೆಯರು ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರಿಗೆ ನೆರವು ನೀಡಲಾಗಿದೆ.
ಎರಡನೇ ಪ್ಯಾಕೇಜ್ ನಲ್ಲಿ ಮೀನುಗಾರರಿಗೆ 3000, ಮುಜರಾಯಿ ದೇಗುಲಗಳ ಸಿ ವರ್ಗದ ಅರ್ಚಕರು, ಅಡುಗೆ ಕೆಲಸದವರು, ಸಿಬ್ಬಂದಿಗೆ ತಲಾ 3 ಸಾವಿರ, ಮಸೀದಿಗಳ ಪೇಶ್ ಇಮಾಮ್ ಮತ್ತು ಮೌಸಿನ್ ಗಳಿಗೆ 3 ಸಾವಿರ, ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ, ಅಂಗನವಾಡಿ ಸಹಾಯಕರಿಗೆ ತಲಾ 2 ಸಾವಿರ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಅನುದಾನ ರಹಿತ ಶಿಕ್ಷಕರಿಗ 5 ಸಾವಿರ ನೆರವು ಘೋಷಣೆ ಮಾಡಲಾಗಿದೆ.
ಎಂಎಸ್ಎಂಇ ಹೊರತುಪಡಿಸಿ ಉಳಿದ ಕೈಗಾರಿಕೆಗಳು ಮೇ , ಜೂನ್ ಗಳಲ್ಲಿ ಮಾಸಿಕ ವಿದ್ಯುತ್ ಬಿಲ್ ಕಟ್ಟುವುದನ್ನು ಸರ್ಕಾರ ಮುಂದೂಡಿದೆ. ಶಾಲಾ ಮಕ್ಕಳಿಗೆ ಅರ್ಧ ಕೆಜಿ ಹಾಲುಪುಡಿ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ.