ಹಾಸನ: 18 ವರ್ಷ ಮೇಲ್ಪಟ್ಟ ಎಲ್ಲಾ ಕಲಾವಿದರಿಗೂ ಪರಿಹಾರ ಧನ ನೀಡಬೇಕು ಎಂದು ಅಖಿಲ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಬಿ.ಟಿ. ಮಾನವ ಮತ್ತು ಕಾರ್ಯದರ್ಶಿ ವಸಂತಕುಮಾರ್ ಸರಕಾರಕ್ಕೆ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳವಾರದAದು ಮಾತನಾಡಿ, ಸಂಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗಲು ರಾಜ್ಯ ಸರಕಾರವು 3 ಸಾವಿರ ರೂಗಳನ್ನು ಘೋಷಣೆ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಆದರೇ ಈ ಪರಿಹಾರ ಹಣ ಪಡೆಯಲು 15 ನಿಯಮಗಳನ್ನು ಪಾಲಿಸಲು ಸೂಚಿಸಿದೆ. ಇದರಲ್ಲಿ ಕೆಲ ನಿಯಮಗಳು ಕಲಾವಿದರನ್ನು ಅಡ್ಡ ಕತ್ತರಿಯಲ್ಲಿ ಸಿಲುಕಿಸುವಂತೆ ಮಾಡಿದೆ ಎಂದು ದೂರಿದರು. ಸರಕಾರದ ಸಹಾಯಧನ ಪಡೆಯಲು ಕೆಲವೊಂದು ಮಾನದಂಡಗಳನ್ನು ಜಾರಿಗೆ ತಂದಿದ್ದು, ಅದರಲ್ಲಿ 35 ವರ್ಷ ಮೇಲ್ಪಟ್ಟ ಕಲಾವಿದರಿಗೆ ಈ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸರಕಾರದ ಆದೇಶದಲ್ಲಿ ತಿಳಿಸಿದೆ. ಆದರೇ ಇದನ್ನು 18 ವರ್ಷದಿಂದ 34 ವರ್ಷದವರಗೆ ಇರುವ ಕಲಾವಿದರು ವಂಚಿತರಾಗುತ್ತಾರೆ ಎಂದು ಆತಂಕವ್ಯಕ್ತಪಡಿಸಿದರು. ಪರಿಹಾರ ಧನ ಪಡೆಯುವ ಕಲಾವಿದರು ಕಡ್ಡಾಯವಾಗಿ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಿರಬೇಕು ಎಂಬ ಆದೇಶವಿದ್ದು, ಲಸಿಕೆಯು 45 ವರ್ಷ ಮೇಲ್ಪಟ್ಟವರಿಗೆ ಎಂದು ಸೂಚನೆ ಇರುವುರಿಂದ ಬಹುತೇಕ ಕಲಾವಿದರಿಗೆ ಲಸಿಕೆಯೇ ಲಭ್ಯವಾಗಿರುವುದಿಲ್ಲ. 10 ವರ್ಷದ ಅನುಭವವನ್ನು 5 ವರ್ಷಕ್ಕೆ ಇಳಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 20 ದಿನಗಳ ಕಾಲ ವಿಸ್ತರಣೆ ಮಾಡಬೇಕು ಹಾಗೂ ಕೂಡಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಧ್ಯ ಪ್ರವೇಶ ಮಾಡಿ ಕೆಲ ಮಾನದಂಡಗಳನ್ನು ಸಡಿಲಿಕೆ ಮಾಡಿ, ಇಲಾಖೆಯೆ ಅರ್ಹ ಕಲಾವಿದರನ್ನು ಗುರುತಿಸಿ ಎಲ್ಲಾ ಕಲಾವಿದರಿಗೂ ಸಹಾಯ ಧನ ಸಿಗುವಂತಾಗಬೇಕು ಎಂದು ಕೋರಿದರು.