ಹಾಸನ: ಅಲೋಪತಿ ಮತ್ತು ದಂತ ವೈದ್ಯರಿಗೆ ಕೋವಿಡ್-೧೯ ವಿಶೇಷ ಭತ್ಯೆಯನ್ನು ನೀಡುವಂತೆ ಆಯುಷ್ ವೈದ್ಯರಿಗೂ ವಿಸ್ತರಿಸಲು ಆಗ್ರಹಿಸಿ ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ವೈದ್ಯರುಗಳೂ ಮಂಗಳವಾರದAದು ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾದರು.
ನಗರದ ಹೊಸಲೈನ್ ರಸ್ತೆ ಬಳಿ ಇರುವ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಡಾ|| ಲಕ್ಷಿö್ಮಕಾಂತ್ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯಾಧ್ಯಂತ ಸರಕಾರಿ ಅಯುಷ್ ಅಧಿಕಾರಿಗಳು ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಧರಣಿ ಮಾಡಲಾಗುತ್ತಿದೆ. ಕಳೆದ ವರ್ಷದಿಂದ ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಟದ ಸಮಯದಲ್ಲಿ ನಾವು ಕೂಡ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದೇವೆ. ಅಲೋಪತಿ ಮತ್ತು ದಂತ ವೈದ್ಯರಿಗೆ ಕೋವಿಡ್-೧೯ ವಿಶೇಷ ಭತ್ಯೆಯನ್ನು ನೀಡಲಾಗುತ್ತಿದೆ. ಅಯುಷ್ ಅಧಿಕಾರಿಗಳು ಕೂಡ ಕೊರೋನಾ ಎಲ್ಲಾ ಸಂದರ್ಭದಲ್ಲೂ ನಾವು ಕೂಡ ಕೆಲಸ ನಿರ್ವಹಿಸುತ್ತಿದ್ದರೂ ಕೂಡ ನಮಗೆ ವಿಶೇಷ ಭತ್ಯೆಯನ್ನು ನೀಡಿರುವುದಿಲ್ಲ ಎಂದು ದೂರಿದರು. ಅಯುಷ್ ಇಲಾಖೆ ಅಧಿಕಾರಿಗಳಿಗೆ ಭತ್ಯೆ ನೀಡುವಲ್ಲಿ ತಾರತಮ್ಯ ಎಸಗಿದ್ದು, ಕೂಡಲೇ ನಮಗೂ ಕೂಡ ವಿಶೇಷ ಭತ್ಯೆಯನ್ನು ವಿಸ್ತರಣೆ ಮಾಡುವಂತೆ ಒತ್ತಾಯಿಸಿ ಕಪ್ಪು ಪಟ್ಟಿ ಧರಿಸಿ ನಮ್ಮ ಮನವಿಯನ್ನು ಸರಕಾರದ ಮುಂದೆ ಇಡಲಾಗುತ್ತಿದೆ ಎಂದರು. ಈ ಹಿಂದೆ ಎರಡು ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಆಯಾ ಆಯುಷ್ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ. ಸರಕಾರವು ಕೂಡಲೇ ನಮ್ಮ ನ್ಯಾಯಯುತ ಬೇಡಿಕೆಯನ್ನು ಈಡೇರಿಸುವ ಮೂಲಕ ನಮಗೂ ಕೂಡ ಸಮಾನ ವೇತನ ನೀಡುವಂತೆ ಕೋರಿದರು.