ಹಾಸನವನ್ನು ನಂ.1 ಸಿಟಿ ಮಾಡಲು ಕೈಜೋಡಿಸಿ : ನಗರಸಭೆ ಅಧ್ಯಕ್ಷ ಮೋಹನ್


ಹಾಸನ: ನಗರ ಆರೋಗ್ಯವಾಗಿರಲು ಶ್ರಮಿಸುತ್ತಿರು ಪೌರಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದ ಅವರು, ಹಾಸನ ನಗರವನ್ನು ನಂ.1 ಸಿಟಿ ಮಾಡಲು ಕಾರ್ಮಿಕರು ಕೈಜೋಡಿಸಬೇಕು ಎಂದು ನೂತನ ನಗರಸಭೆ ಅಧ್ಯಕ್ಷ ಮೋಹನ್ ಕೋರಿದರು.

 ನಗರದ ನಗರಸಭೆ ಕುವೆಂಪು ಸಂಭಾAಗಣದಲ್ಲಿ ಪೌರಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಅನೇಕ ಪೌರಕಾರ್ಮಿಕರಿಗೆ ಮನೆಗಳಿಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.ಇದರ ಜೊತೆಗೆ ಅನೇಕರಿಗೆ ಕೆಲಸ ಖಾಯಂಗೊಳಿಸುವ ಕುರಿತು ಬೇಡಿಕೆ ಇಟ್ಟಿದ್ದಾರೆ. ಇನ್ನು ಮೂಲಭೂತ ಸೌಕರ್ಯಗಳ ಸಮಸ್ಯೆ ಕಲ್ಪಿಸಿಕೊಡಲು ಪೌರಕಾರ್ಮಿಕರ ಸಂಘದಿAದ ತಿಳಿಸಿದ್ದು ಇವೆಲ್ಲ ಬೇಡಿಗಳನ್ನು ಶಾಸಕರಾದ ಪ್ರೀತಮ್ ಗೌಡರ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು. 

 ಪೌರಕಾರ್ಮಿಕ ಸಂಘದ ಗೌರವ ಅಧ್ಯಕ್ಷ ನಾಗರಾಜ್ ಹೆತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ, ಪೌರಕಾರ್ಮಿಕರಿಗೆ ನಗರವನ್ನು ಸ್ವಚ್ಚವಾಗಿಡಲು ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮಾರ್ಗದರ್ಶದಲ್ಲಿ ಶ್ರಮಿಸುತ್ತಿದ್ದಾರೆ.ಕೊವೀಡ್ ಸಂದರ್ಭದಲ್ಲಿ ಪ್ರಾಣಬದಿಗೊತ್ತಿ ಕೆಲಸ ಮಾಡಿರುವುದು ಶ್ಲಾಘನೀಯ. ನಗರವನ್ನು ಆರೋಗ್ಯ ವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಗಳಿಲ್ಲದೆ ಪರಿತಪಿಸುತ್ತಿದ್ದಾರೆ. ಅನೇಕರು ಗುತ್ತಿಗೆಆದಾರದಲ್ಲಿ ದುಡಿದು ನಿವೃತ್ತಿ ಹೊಂದುತ್ತಿದ್ದಾರೆ. ಇವರನ್ನು ಖಾಯಂಗೊಳಿಸಬೇಕು. ಪೌರಕಾರ್ಮಿಕರು ಇವರು ಕಡೆಗಳಲ್ಲಿ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಹೋರಾಟಗಳೇ ಮುಖ್ಯವಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದರೆ ಪೌರಕಾರ್ಮಿಕರ ಬೇಡಿಕೆ ಈಡೇರಿಸಲು ಸಾಧ್ಯವಾಗುತ್ತದೆ.ಪೌರಕಾರ್ಮಿಕರು ನಿಮ್ಮ ಒಳ್ಳೆಯ ಕೆಲಸಗಳಿಗೆ ಬೆಂಬಲವಾಗಿರುತ್ತಾರೆ ಎಂದರು.

 ಪೌರಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಯೋಗೇಶ್ ಗೌಡ ಪೌರಕಾರ್ಮಿಕರ ಬೇಡಿಕೆಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಪಂದಿಸಿ ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಿದರು. ನಂತರ ಅಧ್ಯಕ್ಷ ಮೋಹನ್ ಹಾಗೂ ಉಪಾಧ್ಯಕ್ಷ ರಾದ ಮಂಗಳಪ್ರದೀಪ್ ಅವರಿಗೆ ಹೂಮಾಲೆ ಹಾಕುವ ಮೂಲಕ ಪೌರಕಾರ್ಮಿಕರು ಅಭಿನಂದಿಸಿದರು.

 ಸಭೆಯಲ್ಲಿ ಉಪಾಧ್ಯಕ್ಷರಾದ ಮಂಗಳ ಪ್ರದೀಪ್, ಪೌರಾಯುಕ್ತರಾದ ಕೃಷ್ಣ ಮೂರ್ತಿ, ಎಇಇ ರಂಗಸ್ವಾಮಿ, ವ್ಯವಸ್ಥಾಪಕ ಪ್ರಕಾಶ್, ಸಂಘದ ಉಪಾಧ್ಯಕ್ಣ ನಲ್ಲಪ್ಪ, ಕಾರ್ಯದರ್ಶಿ ಪರಶುರಾಮ್,ಆರೋಗ್ಯ ನಿರೀಕ್ಷ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಪೌರಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Post a Comment

Previous Post Next Post