ಭಾರತ ಸೇವಾದಳದಿಂದ ಆನ್ ಲೈನ್ ಮೂಲಕ ಯೋಗ ದಿನಾಚರಣೆ

ಹಾಸನ: ನಗರದ ಕಸಾಪ ಭವನದಲ್ಲಿ ಭಾರತ ಸೇವಾದಳ ಮತ್ತು  ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ.


ಸಹಯೋಗದಲ್ಲಿ ಸೋಮವಾರ ಬೆಳಿಗೆ ವಿಶ್ವ ಯೋಗ ದಿನಾಚರಣೆಯನ್ನು ಆನ್ ಲೈನ್ ನಲ್ಲಿ ವಿಶೇಷವಾಗಿ ಆಚರಿಸಿದರು. 

     ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ಧೆಶಕರು ಆದ ಕೆ.ಎಸ್. ಪ್ರಕಾಶ್ ಮಾತನಾಡಿ, ಯೋಗ ದಿನದ ಸಮಯದಲ್ಲಿ ಮಾತ್ರವಲ್ಲದೆ ಪ್ರತಿನಿತ್ಯವೂ ಪ್ರತಿಯೊಬ್ಬರೂ ಯೋಗವನ್ನು ಅಳವಡಿಸಿಕೊಳ್ಳಬೇಕು. ಶಾಲೆಯಲ್ಲಿ ಇಂದಿನ ಪರಿಸ್ಥಿತಿ ಯಲ್ಲಿ ಪ್ರತಿ ಮಗುವಿಗೂ ಯೋಗದ ಅವಶ್ಯಕತೆ ಇರುವುದರಿಂದ ಪ್ರತಿ ಶಾಲೆಯಲ್ಲಿ ನಾವು ಅಳವಡಿಸಬೇಕೆಂದು ಸಲಹೆ ನೀಡಿದರು.

      ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ ಅವರು ಮಾತನಾಡಿ, ಹಾಸನ ಜಿಲ್ಲೆಯಲ್ಲಿ ೨೦೨೧ ಜೂನ್ ೧೩ ರಲ್ಲಿ ಉದ್ಘಾಟನೆಗೊಂಡAತಹ ಶಿಬಿರದಲ್ಲಿ ನಾವು ಪ್ರತಿ ನಿತ್ಯ ನಾವು ಬೆಳಿಗ್ಗೆ ೬ ರಿಂದ ೮ ರವರೆಗೆ ಸತತವಾಗಿ ೨ ಗಂಟೆಗಳು ಅಬ್ಯಾಸ ಮಾಡುತ್ತಾ ಬರುತ್ತಿದ್ದೇವೆ. ವಿಶ್ವ ಯೋಗ ದಿನಾಚರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಗೈಡ್ ಲೈನ್ ಪ್ರಕಾರ ಪಠ್ಯಕ್ರಮವನ್ನು ಅಳವಡಿಸಿಕೊಂಡು ಯೋಗ ಅಬ್ಯಾಸ ಮಾಡಿದ್ದೇವೆ ಎಂದರು. ಇದನ್ನು ಪ್ರತಿ ನಿತ್ಯ ಸಾರ್ವಜನಿಕರಿಗೆ ಅಬ್ಯಾಸ ಮಾಡಿಸುವ ಮೂಲಕ ಯೋಗದ ಮಹತ್ವವನ್ನು ತಿಳಿಸಿಕೊಡೋಣ ಎಂದು ಹೇಳಿದರು. ಜೊತೆಗೆ ಯೋಗದ ತರಬೇತಿ ಆಯೋಜಿಸಿದ ಭಾರತ ಸೇವಾದಳ ಸಂಸ್ಥೆ ಗೆ ವಿಶೇಷ ವಾದ ಅಭಿನಂದನೆಯನ್ನು ತಿಳಿಸಿದರು .

      ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿಕೊಂಡ ಭಾರತ ಸೇವಾದಳ ಜಿಲ್ಲಾ ಅದ್ಯಕ್ಷರಾದ ಎಂ.ಕೆ. ಕಮಲ್ ಕುಮಾರ್ ರವರು    ಮಾತನಾಡಿ, ಸೇವಾದಳ ದ್ಯೆಯ ಪ್ರತಿ ಶಾಲೆಯ ಶಿಕ್ಷಕರು ಮತ್ತು ಮಕ್ಕಳಿಗೆ ಯೋಗ ಮತ್ತು ಆರೋಗ್ಯದ ಮಹತ್ವವನ್ನು ತಿಳಿಸಲು ಸಿದ್ದರಿದ್ದೇವೆ. ಪ್ರತಿ ಶಾಲಾ ಕಾಲೇಜುಗಳಿಗೆ ಭಾರತ ಸೇವಾದಳದ ತತ್ವ ಸಿದ್ದಾಂತಗಳು ತಲುಪುವಂತಾಗಲಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರ ನಮಗೆ ಸಂಪೂರ್ಣವಾಗಿ ಸಿಗುತ್ತಿರುವ ಕಾರಣ ಸೇವಾದಳ ಚಟುವಟಿಕೆಗಳು ಜಿಲ್ಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ನಡೆಯಲು ಸಾದ್ಯವಾಗಿದೆ ಎಂದು ತಿಳಿಸಿದರು.

       ಪ್ರಾಸ್ತಾವಿಕವಾಗಿ ಭಾರತ್ ಸೇವಾದಳದ ವಲಯ ಸಂಘಟಕಿ ವಿ.ಎಸ್. ರಾಣಿ, ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ  ದೀಪಾ ಜಿ ಹಾಗೂ ಮಹೇಶ್ ಹೆಚ್. ಶಿಕ್ಷಕರು ಚನ್ನರಾಯಪಟ್ಟಣ ಇವರು ಭಾಗವಹಿಸಿ ತರಬೇತಿ ನೀಡಿದರು. ಪ್ರತಿ ನಿತ್ಯ ತರಬೇತಿ ನೀಡುತ್ತಾ ಬರುತ್ತಿದ್ದಾರೆ.

ಕಾರ್ಯಕ್ರಮಕ್ಕೆ ಸ್ವಾಗತವನ್ನು ಚೈತ್ರ ನಾಯಕರಹಳ್ಳಿ ಮಂಜೇಗೌಡ ನೆಡೆಸಿಕೊಟ್ಟರು. ವಿಷ್ಣುವರ್ಧನ್ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳು   ಇವರು ಕಾರ್ಯಕ್ರಮ ನಿರೂಪಣೆ ಮಾಡಿ ಎಲ್ಲರನ್ನು ವಂದಿಸಿದರು .


Post a Comment

Previous Post Next Post