ದಿನಾಂಕ 11.04.2021 ರಂದು ಸಕಲೇಶಪುರ ತಾಲ್ಲೂಕು ಅಲೇಕೆರೆ ಗ್ರಾಮದ ಚಂದ್ರಶೇಖರ್ ರವರು ಆನೆ ದಾಳಿಗೆ ಒಳಗಾಗಿದ್ದು ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿದ್ದು ಸದರಿಯವರು ಆರ್ಥಿಕವಾಗಿ ಹಿಂದುಳಿದವರಾಗಿರುವುದರಿಂದ ಸಂಜೀವಿನಿ ಸಹಕಾರಿ ಆಸ್ಪತ್ರೆ ವತಿಯಿಂದ ಅಧ್ಯಕ್ಷರಾದ ಶ್ರೀ ಸ್ವರೂಪ್ ರವರು ರೂ. 25,000/- ಸಹಾಯ ಧನವನ್ನು ನೀಡಿದರು. ಉಪಾಧ್ಯಕ್ಷರಾದ ಸುರೇಶ್ ರವರು, ಕಾರ್ಯನಿರ್ವಹಣಾಧಿಕಾರಿ ಮಹೇಂದ್ರಪ್ಪ ರವರು ಉಪಸ್ಥಿತರಿದ್ದರು.
Tags
ಹಾಸನ