ತಮಿಳುನಾಡಿನ ಚೋಳ ಸಾಮ್ರಾಜ್ಯ ಜೈನ ಧರ್ಮವನ್ನು ಸಹಿಸುತ್ತಿರಲಿಲ್ಲ, ಆದರೆ ಮಧುರೈ ಪಾಂಡ್ಯ ಸಾಮ್ರಾಜ್ಯದ ಅರಸರು ಜೈನಧರ್ಮ ಬೆಳೆಯಲು ಅನುವು ಮಾಡಿಕೊಟ್ಟಿದ್ದರು.
7ನೇ ಶತಮಾನದಲ್ಲಿ ಮಧುರೈ ರಾಜನನ್ನು ಶೈವ ಧರ್ಮಕ್ಕೆ ತಮಿಳು ಶೈವ ಸಂತ ಸಂಬಂದರ್ ಮತಾಂತರಿಸಿದ್ದರು.ಇದರ ಹೊರತಾಗಿಯೂ ರಾಜಮನೆತನದ ಸದಸ್ಯರು ಜೈನರಾಗಿಯೇ ಉಳಿದಿದ್ದರು.ಮತ್ತು ಮಲಿಕ್ ಕಾಫುರನ ಆಕ್ರಮಣದವರೆಗೂ ಮಧುರೈನಲ್ಲಿ ಜೈನ ಧರ್ಮ ಉಳಿದುಕೊಂಡಿರುವುದಕ್ಕೆ ಪುರಾವೆಗಳಿವೆ.
ಮಧುರೈನ ಪಶ್ಚಿಮಕ್ಕೆ 10 ಕಿಲೋಮೀಟರ್ ದೂರದಲ್ಲಿರುವ ಸಮನಾರ್ ಬೆಟ್ಟದಲ್ಲಿ ಜೈನ ಧರ್ಮ ಶ್ರೀಮಂತವಾಗಿ ಬೆಳೆದಿತ್ತು.ಇಲ್ಲಿರುವ ಬಾಹುಬಲಿ ಮತ್ತು ಮಹಾವೀರರ ಪ್ರತಿಮೆಗಳು ಸುಮಾರು 2500 ವರ್ಷಗಳಷ್ಟು ಹಳೆಯವು ಎಂದು ಅಂದಾಜಿಸಲಾಗಿದೆ.ಅಲ್ಲಿರುವ ಬ್ರಾಹ್ಮಿ ಶಾಸನಗಳು ಸುಮಾರು 2000 ವರ್ಷಗಳಷ್ಟು ಹಳೆಯವು.
8ನೇ ಶತಮಾನದ ಕನ್ನಡ ಶಾಸನಗಳೂ ಇವೆ.
ಗಂಗರ ಸಾಮ್ರಾಜ್ಯದ ಜೈನ ಧಾರ್ಮಿಕ ಕೇಂದ್ರ ಶ್ರವಣಬೆಳಗೊಳದಿಂದ ತಮಿಳುನಾಡಿಗೆ ಜೈನ ಸನ್ಯಾಸಿಗಳು ಬಂದುದರ ಬಗ್ಗೆ ಬರೆಯಲಾಗಿದೆ.
ಈ ಕೆಳಗಿನ ಶಿಲಾ ಶಾಸನದಲ್ಲಿ ಒಡೆದುಹೋಗಿರುವ ಮಹಾವೀರನ ಮೂರ್ತಿಯ ಕೆಳಗೆ ಕನ್ನಡ ಹಾಗೂ ತಮಿಳು ಬ್ರಾಹ್ಮೀ ಲಿಪಿ ಎರಡನ್ನೂ ಬಳಸಿರುವುದು ಕಾಣಿಸುತ್ತದೆ.
Tags
ಪ್ರವಾಸ