27ನೇ ವಾರ್ಡಿನಲ್ಲಿ ಕಳಪೆ ಚರಂಡಿ ಕಾಮಗಾರಿ ನಿವಾಸಿಗಳ ಆಕ್ರೋಶ

ಹಾಸನ: ನಗರದ ವಲ್ಲಬಾಯಿ ರಸ್ತೆ, 27ನೇ ವಾರ್ಡಿನಲ್ಲಿ ಕಳಪೆ ಚರಂಡಿ ಕಾಮಗಾರಿ ನಿರ್ಮಾಣ ಮಾಡಲಾಗುತ್ತಿದ್ದು, ಇದನ್ನು ಖಂಡಿಸಿ ಇಲ್ಲಿನ ನಿವಾಸಿಗಳು ಆಕ್ರೋಶವ್ಯಕ್ತಪಡಿಸಿದ್ದಾರೆ.




 ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮತ್ತು ನಗರಸಭೆ ಮಾಜಿ ಸದಸ್ಯ ಚಂದ್ರು ರವರು, ನಗರದ 27ನೇ ವಾರ್ಡಿನಲ್ಲಿ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು, ಹಳೆ ಚರಂಡಿ ಹಾಳಾಗಿರುವುದರಿಂದ ಹೊಸ ಚರಂಡಿ ಮಾಡಲು ಸರಕಾರದ ಹಣದಲ್ಲಿ ನಿರ್ಮಿಸಲಾಗುತ್ತಿದೆ. ಹಳೆ ಚರಂಡಿ ಹೊಡೆದು ಮಾಡಬೇಕು. ಆದರೇ ಹಳೆಯದನು ಹೊಡೆಯದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದನ್ನು ಖಂಡಿಸಿ ಕೆಲಸ ಮಾಡದಂತೆ ನಾವುಗಳು ತಡೆ ಹಿಡಿದಿದ್ದೇವೆ. ಈಬಗ್ಗೆ ಕಳೆದ ಮೂರು ದಿನಗಳಿಂದ ಸಂಬAಧಪಟ್ಟವರಿಗೆ ತಿಳಿಸಿ ತೋರಿಸಿದರೂ ಗಮನ ನೀಡದೇ ಹಳೆಯದಕ್ಕೆ ಡ್ರೆöÊನೆಜ್ ಮಾಡಲು ಹೊರಟಿದ್ದಾರೆ ಎಂದು ದೂರಿದರು. ಈ ಕಳಪೆ ಕಾಮಗಾರಿ ನಡೆಸುತ್ತಿರುವುದನ್ನು ನೋಡಿದರೇ ಇದರಲ್ಲಿ ಇಂಜಿನಿಯರ್, ನಗರಸಭೆ ಕಮಿಷನರ್ ಶಾಮೀಲಾಗಿದ್ದಾರೆ ಎಂದು ಗಂಬೀರವಾಗಿ ಆರೋಪಿಸಿದರು. ಕೂಡಲೇ ಹಳೆ ಡ್ರೆöÊನೆಜ್ ಏನಿದೆ ಕೆಡವಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.

 ಈಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪುನೀತ್, ಪ್ರದೀಪ್ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.

Post a Comment

Previous Post Next Post