ಬೇಲೂರು: ಕೊರೊನಾ ರೋಗಿಗಳಲ್ಲಿ ಹೃದಯಾಘಾತ ಮತ್ತು ಉಸಿರಾಟದ ಸಮಸ್ಯೆ ಉಂಟಾಗುವ ಸಂದರ್ಭ ನಿಯಮಿತ ವ್ಯಾಯಾಮ ಮಾಡುವುದರಿಂದ ಪ್ರಾಥಮಿಕ ತೊಂದರೆಯಿಂದ ದೂರವಾಗಬಹುದು ಎಂದು ಹಗರೆ ವೈದ್ಯಾಧಿಕಾರಿ ಡಾ.ಶಾಲಿನಿ ಹೇಳಿದರು.
ಹಗರೆಯ ಕೋವಿಡ್ ಕೇಂದ್ರದಲ್ಲಿ ಪ್ರತಿದಿನ ಯೋಗ ಮತ್ತು ಬೀತಿಂಗ್ ವ್ಯಾಯಾಮ ನಡೆಯುವ ಸಂದರ್ಭ ಮಾತನಾಡಿದ ಅವರು, ನಿಯಮಿತವಾದ ವ್ಯಾಯಾಮ ಶ್ವಾಸಕೋಶ ಹಾಗೂ ಹೃದಯದ ಆರೋಗ್ಯಕ್ಕೆ ಅನುಕೂಲ. ಪ್ರತಿನಿತ್ಯ ರೋಗಿಗಳ ತಪಾಸಣೆ ಮಾಡಿ ನಂತರ ನಾನೇ ಕುದ್ದಾಗಿ ನಿಂತು ರೋಗಿಗಳಿಗೆ ವ್ಯಾಯಾಮ ಹೇಳಿಕೊಟ್ಟು ಮಾಡಿಸುತ್ತಿರುವುದಾಗಿ ತಿಳಿಸಿದರು.
ಕೋವಿಡ್ ಕೇಂದ್ರದಿಂದ ಬಿಡುಗಡೆ ಆದನಂತರವೂ ವ್ಯಾಯಾಮ ನಿಲ್ಲಿಸದಂತೆ ಸೂಚಿಸಿದ್ದೇನೆ. ಕೋವಿಡ್ ರೋಗಿಗಳಷ್ಟೇ ಅಲ್ಲದೆ ಇತರರೂ ಸಹ ಲಘು ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ಹೇಳಿದರು.
Tags
ಬೇಲೂರು