ಹಾಸನ ಜಿಲ್ಲೆಯ ಪುರಾತತ್ವ ಸ್ಮಾರಕಗಳಿಗೆ 28/6/2021ರ ವರೆಗೆ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ

 


ಹಾಸನ ಜಿಲ್ಲೆಯ ಪುರಾತತ್ವ ಸ್ಮಾರಕಗಳಿಗೆ 28/6/2021ರ ವರೆಗೆ ಸಾರ್ವಜನಿಕರಿಗೆ ನಿಷೇಧಿಸಲಾಗಿದೆ.

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವುದರಿಂದ ಪುರಾತತ್ವ ಸಮೀಕ್ಷೆಯಿಂದ ಸಂರಕ್ಷಿಸುತ್ತಿರುವ ಸ್ಮಾರಕಗಳು ಹಾಗೂ ಸಂಗ್ರಹಾಲಯ ಪ್ರದೇಶಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಅದೇಶಿಸಿದ್ದಾರೆ.

ಕೋವಿಡ್ ಹಿನ್ನೆಲೆ ಮುಚ್ಚಲಾಗಿದ್ದ ಸ್ಮಾರಕಗಳು ಹಾಗೂ ಸಂಗ್ರಹಾಲಯ ಪ್ರದೇಶಗಳಿಗೆ ಸಾರ್ವಜನಿಕರಿಗೆ ಪ್ರವೇಶ ನೀಡಲು ಕೇಂದ್ರ ಪುರಾತತ್ವ ಸಮೀಕ್ಷೆ ಇಲಾಖೆಯಿಂದ ಆದೇಶಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕೊರೊನಾ ಸೋಂಕು ಕಡಿಮೆಯಾಗದ ಹಿನ್ನೆಲೆ ಜೂ. 21ರ ವರೆಗೆ ಜಿಲ್ಲಾದ್ಯಂತ ಲಾಕ್‌ಡೌನ್ ವಿಸ್ತರಣೆ ಮಾಡಿರುವುದರಿಂದ ಪುರಾತತ್ವ ಇಲಾಖೆಯಿಂದ ಸಂರಕ್ಷಣೆ ಮಾಡುತ್ತಿರುವ ಸ್ಮಾರಕಗಳು ಹಾಗೂ ಸಂಗ್ರಹಾಲಯಗಳಿಗೆ ಜೂ. 28 ರ ವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್ ಆದೇಶ ಹೊರಡಿಸಿದ್ದಾರೆ.

Post a Comment

Previous Post Next Post