ಬೇಲೂರಿನಲ್ಲಿ ಶ್ರೀವೀರಾಂಜನೇಯ ಸೇವಾಸಮಿತಿ ಹಾಗೂ ಮಾರುತಿ ಗೆಳೆಯರ ಬಳಗ ವತಿಯಿಂದ ರಕ್ತದಾನ ಶಿಬಿರ


ಬೇಲೂರಿನಲ್ಲಿ ಶ್ರೀವೀರಾಂಜನೇಯ ಸೇವಾಸಮಿತಿ ಹಾಗೂ ಮಾರುತಿ ಗೆಳೆಯರ ಬಳಗ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಕೊರೊನಾ ಸಂದರ್ಭ ವ್ಯಾಕ್ಸಿನ್ ಪಡೆಯುವುದು ಕಡ್ಡಾಯವಾಗಿರುವುದರಿಂದ ರಕ್ತದಾನ ಶಿಬಿರ ಏರ್ಪಡಿಸುವುದಕ್ಕೆ ಅಲ್ಪಮಟ್ಟಿನ ಹಿನ್ನಡೆಯಾಗಿದೆ. ಈ ನಡುವೆ ಶಿಬಿರ ಏರ್ಪಡಿಸಿರುವುದು ಸಂತೋಷವಾಗಿದೆ. ಇಂದು ರಕ್ತದ ಕೊರತೆ ಹೆಚ್ಚಾಗಿದೆ. 15 ರಿಂದ 65 ವರ್ಷದೊಳಗಿನವರು ಆರೋಗ್ಯದಿಂದ ಇರುವವರು ರಕ್ತದಾನ ಮಾಡಬಹುದು. ಶಸ್ತ್ರಚಿಕಿತ್ಸೆಗೊಳದಾವರು 1 ವರ್ಷ ರಕ್ತದಾನ ಮಾಡುವಂತಿಲ್ಲ.ಸರ್ಕಾರಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡು ಹೊಂದಿರುವವರಿಗೆ ಪುಕ್ಕಟೆಯಾಗಿ ರಕ್ತವನ್ನು ನೀಡಲಾಗುತ್ತಿದೆ. ಸಂಕಷ್ಟದ ಸಮಯದಲ್ಲಿ ವ್ಯಾಕ್ಸಿನೇಶನ್ ಪಡೆದವರು 15 ದಿನದ ನಂತರ ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಕೊಬ್ಬಿನ ಅಂಶ ಕಡಿಮೆಯಾಗಲಿದೆ. ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಯಲಿದೆ ಎಂದು ಹಾಸನದ ರಕ್ತನಿಧಿ ವೈದ್ಯಾಧಿಕಾರಿಯಾದ ನಾಗಲಕ್ಷ್ಮೀ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಮಾರುತಿ ಗೆಳೆಯರ ಬಳಗದ ಅಧ್ಯಕ್ಷ ಹೇಮಂತಕುಮಾರ್, ಕೊರೊನಾ ಸಂದರ್ಭ ರಕ್ತದಾನ ಶಿಬಿರ ಏರ್ಪಡಿಸುವುದು ಕಷ್ಟದ ಕೆಲಸವಾಗಿದೆ. ಕೆಲವೊಂದು ನಿಯಮಗಳ ಅಡಿಯಲ್ಲಿ ಶಿಬಿರ ಏರ್ಪಡಿಸಿ ರಕ್ತ ಪಡೆಯಬೇಕಿರುವುದರಿಂದ ಶಿಬಿರಗಳ ಆಯೋಜನೆ ಕಷ್ಟದ ಕೆಲಸವಾಗಿದೆ. ಇದರ ನಡುವೆಯೂ ಈ ಶಿಬಿರವನ್ನು ಸದಸ್ಯರ ಸಹಕಾರದಿಂದ ಏರ್ಪಡಿಸಿದ್ದೇವೆ. ಶಿಬಿರಕ್ಕೆ ರಕ್ತನಿಧಿ ಸಂಸ್ಥೆ ಬಳಗದವರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡವರಿಗೆ ಸರ್ಟಿಫೀಕೇಟ್ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಸಂದರ್ಭ ಸಮಿತಿಯ ಸುರೇಶ್, ಸುನಿಲ್, ಸಿದ್ದಾರ್ಥ, ಬ್ಲಡ್ ಬ್ಯಾಂಕಿನ ಶಿವಸ್ವಾಮಿ, ಸೀಮಾ, ಪುಷ್ಪ, ಸಂತೋಷ್, ವೆಂಕಟೇಶ್ ಇದ್ದರು.

Post a Comment

Previous Post Next Post