ಆಲೂರು : ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬೈರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ತಿಮ್ಮನಹಳ್ಳಿ, ಬಸವೇಶ್ವರ ನಗರ, ಧರ್ಮಪುರಿ ಗ್ರಾಮಗಳಲ್ಲಿ ಸೋಂಕಿತರು ಹೆಚ್ಚಾಗಿರುವ ಕಾರಣ ಗ್ರಾಮಗಳನ್ನು " ನಿರ್ಬಂಧಿತ ಪ್ರದೇಶ " ವನ್ನಾಗಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ನಂತರ ಮಾತನಾಡಿದ ಅವರು, ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗಗಳಲ್ಲಿ ಕೊರೊನ ಸೋಂಕಿನ ಪ್ರಮಾಣ ಪ್ರತಿನಿತ್ಯ ಏರಿಕೆಯಾಗುತ್ತಿದೆ, ಕರೋನ ಸೊಂಕು ಹರಡದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು, ಸ್ವಚ್ಛತೆ ಹಾಗೂ ಅಂತರ ಕಾಪಾಡಿಕೊಳ್ಳುವುದರ ಜೊತೆಜೊತೆಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸುವುದರಿಂದ ಕರೋನದಿಂದ ಮುಕ್ತರಾಗಬಹುದು, ನಿರ್ಬಂಧಿತ ಪ್ರದೇಶ ವಾಗಿರುವ ಗ್ರಾಮಗಳಲ್ಲಿನ ಸೋಂಕಿತ ಕುಟುಂಬಗಳಿಗೆ ಈಗಾಗಲೇ ಆರೋಗ್ಯದ ಕಿಟ್ ಗಳನ್ನು ನೀಡಲಾಗಿದೆ , ಇನ್ನೂ ಹೆಚ್ಚಿನ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲು ಪ್ರಯತ್ನಿಸಲಾಗುವುದು ಎಂದ ಅವರು ಸೋಂಕಿತರು ಕರೋನಾಗೆ ಭಯಪಡದೆ ಆತ್ಮವಿಶ್ವಾಸದಿಂದ ಚೇತರಿಸಿಕೊಂಡು ಆರೋಗ್ಯವಂತರಾಗಿ ಮರಳುವಂತೆ ಹಾರೈಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ತಹಶೀಲ್ದಾರ್ ಶಿರೀನ್ ತಾಜ್, ಇಒ ಸತೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ. ತಿಮ್ಮಯ್ಯ, ಬೆಳಗೋಡು ಜಿ. ಪಂ ಮಾಜಿ ಸದಸ್ಯೆ ಚಂಚಲಾ ಕುಮಾರಸ್ವಾಮಿ, ಜಿಲ್ಲಾ ಎಪಿಎಂಸಿ ಮಾಜಿ ಅಧ್ಯಕ್ಷೆ ಕೆ.ಎಸ್ ಮಂಜೇಗೌಡ, ಬೈರಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆಂಚನಹಳ್ಳಿ ರವಿ, ಸದಸ್ಯ ಗಣೇಶ್, ಪಾಳ್ಯ ಗ್ರಾ.ಪಂ ಅಧ್ಯಕ್ಷ ಪ್ರಕಾಶ್, ಹುಣಸವಳ್ಳಿ ಗ್ರಾ.ಪಂ ಸದಸ್ಯ ತೇಜ್ ಪಾಲ್, ಭೈರಾಪುರ ಗ್ರಾ. ಪಂ ಪಿಡಿಒ ಭವ್ಯ ಸೇರಿದಂತೆ ಇತರರು ಇದ್ದರು.
Tags
ಆಲೂರು