ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ರವರಿಗೆ ಶುಭಾಶಯ ತಿಳಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಶ್ರವಣಬೆಳಗೊಳ:  ಎಚ್.ಡಿ.ದೇವೇಗೌಡ ರವರು ದೇಶದ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಿದ ಬೆಳ್ಳಿಹಬ್ಬದ ಅಂಗವಾಗಿ ಶ್ರವಣಬೆಳಗೊಳ ಜೈನ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶುಭಾಶಯ  ತಿಳಿಸಿದರು.



     ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರವರು ಕಳೆದ ಆರು ದಶಕಗಳಿಂದ ವಿವಿಧ ಹಂತದ ರಾಜಕೀಯ ಪದವಿಗಳನ್ನು ಕಂಡು, ಕನ್ನಡ ನಾಡಿನ ಮೊದಲ ಪ್ರಧಾನಿಯಾಗಿ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ, ಅತ್ಯಂತ ಗೌರವದಿಂದ ದೇಶವೇ ಮೆಚ್ಚುವಂತೆ ಕರ್ತವ್ಯ ನಿರ್ವಹಿಸಿ ನಮ್ಮ ನಾಡಿಗೆ, ನಮ್ಮ ಜಿಲ್ಲೆಗೆ ಹೆಗ್ಗಳಿಕೆ ತಂದಿದ್ದಾರೆ.
      ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ರೈಲ್ವೆ ಸಂಪರ್ಕ ಕಲ್ಪಿಸುವ ಮೂಲಕ ಐತಿಹಾಸಿಕ ಸಾಧನೆಗೈದಿದ್ದಾರೆ. ಮಣ್ಣಿನಮಗ ಎನ್ನುವ ಹೆಸರಿಗೆ ಅನ್ವರ್ಥವಾಗಿ ದುಡಿದು, ಜನಪರ ಹಾಗೂ ರೈತಪರವಾದ ಕಾರ್ಯಸಾಧನೆಯು ಸದಾ ಅಭಿನಂದನೆಗೆ ಅರ್ಹವಾದುದು.
     ನಿಮ್ಮ ಈ ಸೇವೆ ನಮ್ಮ ದೇಶಕ್ಕೆ, ನಾಡಿಗೆ ನಿರಂತರವಾಗಿರಲಿ. ತಮಗೂ ಮತ್ತು ತಮ್ಮ ಕುಟುಂಬಕ್ಕೆ ಗೊಮ್ಮಟೇಶ್ವರ ಭಗವಾನ್ ಶ್ರೀಶ್ರೀಶ್ರೀ ಬಾಹುಬಲಿ ಸ್ವಾಮಿಯವರ ಆಶೀರ್ವಾದ ಇರಲೆಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

Previous Post Next Post