ಶಿವಂಲಿAಗೇಗೌಡ ಸತ್ತ ಬಡ ಕುಟುಂಬಗಳಿಗೆ ಕನಿಷ್ಠ ೧ ಲಕ್ಷ ಪರಿಹಾರ ನೀಡುವಂತೆ ಒತ್ತಾಯ

ಹಾಸನ: ಕೊರೋನಾ ಖಾಯಿಲೆಗೆ ರಾಷ್ಟಿçÃಯ ವಿಪತ್ತು ಎಂದು ಡಿಕ್ಲೇರ್ ಮಾಡಿದ ಮೇಲೆ ಪಾಸಿಟಿವ್ ಬಂದು ಸಾವನಪ್ಪಿದ ಬಡ ಕುಟುಂಬಗಳಿಗೆ ಕೂಡಲೇ ಕನಿಷ್ಠ ೧ ಲಕ್ಷ ರೂಗಳ ಘೋಷಣೆ ಮಾಡಿ ಪರಿಹಾರ ತಕ್ಷಣ ನೀಡಬೇಕೆಂದು ಒತ್ತಾಯಿಸಿದರು


.

      ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೊರೋನಾ ಎರಡನೇ ಅಲೆಯಲ್ಲಿ ಯಾರು ಮೃತಪಟ್ಟಿದ್ದಾರೆ ಅವರಿಗೆ ಆತ್ಮಸ್ಥೆöÊರ್ಯ ತುಂಬುವ ಕೆಲಸವನ್ನು ನಾನು ನನ್ನ ಅರಸೀಕೆರೆ ಕ್ಷೇತ್ರದಲ್ಲಿ ಮಾಡಬೇಕೆಂದು ಜೆಡಿಎಸ್ ಮುಖಂಡರೊAದಿಗೆ ತೀರ್ಮಾನ ಮಾಡಿದ್ದೇನೆ. ಪ್ರತಿ ಮನೆಗಳಿಗೆ ಭೇಟಿ ನೀಡಿ ಅವರಿಗೆ ಪುಡ್ ಕಿಟ್ ನೀಡಿ ೧೦ ಸಾವಿರ ರೂಗಳ ಕೊಡುವ ಕೆಲಸ ಮಾಡಿದ್ದೇವೆ. ಈವೇಳೆ ಕೆಲ ಮಾಹಿತಿಗಳು ನಮಗೆ ದೊರಕಿದ್ದು, ಕೊರೋನಾ ಪಾಸಿಟಿವ್ ಬಂದು ಸಾವನಪ್ಪಿರುವ ಬಹುತೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಮುಂದೆ ಜೀವನ ನಡೆಸುವುದೆ ಕಷ್ಟವಾಗಿದೆ. ಸಂಕಷ್ಟದಲ್ಲಿರುವ ಇಂತಹ ಬಡ ಕುಟುಂಬಗಳ ಬಗ್ಗೆ ಅಧ್ಯಾಯನ ಮಾಡಿ ಆರ್ಥಿಕ ನೆರವು ನೀಡಲು ಸರಕಾರವು ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಎಂದು ಅರಸೀಕೆರೆ ಜನತೆ ಪರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರದ ಗಮನಸೆಳೆಯುವ ಕೆಲಸವನ್ನು ನಾನು ಮಾಡುತ್ತಿರುವುದಾಗಿ ಹೇಳಿದರು. 

       ಕೊರೋನಾ ಸೋಂಕು ವನ್ನು ರಾಷ್ಟಿçÃಯ ವಿಪತ್ತು ಎಂದು ಕೇಂದ್ರವೇ ಘೋಷಣೆ ಮಾಡಿರುವುದರಿಂದ ಕೇಂದ್ರ ಮತ್ತು ರಾಜ್ಯ ಸರಕಾರ ಇಬ್ಬರೂ ಸೇರಿ ಕೊರೋನಾದಿಂದ ಮೃತಪಟ್ಟ ಬಡ ಕುಟುಂಬಗಳಿಗೆ  ಮಾನವಿಯತೆ ದೃಷ್ಠಿಯಲ್ಲಿ ಕನಿಷ್ಟ ೧ ಲಕ್ಷ ರೂಗಳ ಪರಿಹಾರವನ್ನು ಕೊಡಬೇಕು ಎಂಬುದು ಒತ್ತಾಯವಾಗಿದೆ. ಅರಸೀಕೆರೆ ತಾಲೂಕಿನಲ್ಲಿ ಯಾರು ಹೋಂ ಕ್ವಾರೇಂಟನ್ ಆಗಿದ್ದದ್ದವರನ್ನು ರದ್ದು ಮಾಡಿ ಕೊರೋನಾ ಕೇಂದ್ರಕ್ಕೆ ಕರೆದೊಯ್ಯಲು ನಾನು ಸಭೆಯಲ್ಲಿ ಗಮನಸೆಳೆದಂತೆ ಕೊರೋನಾ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಿದ ಪರಿಣಾಮ ಹಂತ-ಹAತವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದರು.

     ಅರಸೀಕೆರೆ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಸಾವನಪ್ಪಿಸಿದವರು ತಹಸೀಲ್ದಾರ್ ಪಟ್ಟಿಯಲ್ಲಿ ಇರುವುದಿಲ್ಲ ಎಂದು ವಿಚಾರಿಸಿದಾಗ ತಿಳಿದು ಬಂದಿದೆ. ಪರಿಹಾರ ಕೊಡುವಾಗ ಸರಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಯ ಬಗ್ಗೆ ಅಂಕಿ-ಅAಶವನ್ನು ಹೇಗೆ ಪಡೆಯಬಹುದು? ಖಾಸಗಿ ವಲಯದಲ್ಲಿ ಚಿಕಿತ್ಸೆ ಪಡೆದವರೇ ಹಣ ಕಳೆದುಕೊಂಡವರು. ಸಾವನಪ್ಪಿದರೂ ಹಣ ನೀಡಬೇಕು. ನಂತರ ಸತ್ತ ಬಗ್ಗೆ ದಾಖಲೆಯನ್ನು ತಹಸೀಲ್ದಾರ್ ಕಛೇರಿಗೆ ಕೊಡಬೇಕು ಎಂಬುದು ಗೊತ್ತಿಲ್ಲ. ಕೊರೋನಾದಿಂದ ಸತ್ತ ಬಗ್ಗೆ ದಾಖಲೆ ಪಡೆದು ಪಟ್ಟಿಗೆ ಸೇರಿಸಿ ಅಂಕಿ-ಅಮಶವನ್ನು ಬಹಿರಂಗಪಡಿಸಿ ಪರಿಹಾರ ಕೊಡಬೇಕೆಂದು ಎಂದು ಆಗ್ರಹಿಸಿದರು. ಹಾಸನ ನಗರ ವ್ಯಾಪ್ತಿಯಲ್ಲಿ ಹೆಸರು ಬಿಟ್ಟಿರುವುದು ಅಂದಾಜು ೨೦ ಜನರರಿಬಹುದು. ಇನ್ನು ಗ್ರಾಮೀಣ ಭಾಗದಲ್ಲೂ ಇರುವ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದರು. ರಾಷ್ಟಿçà ವಿಫತ್ತು ಖಾಯಿಲೆ ಎಂದು ಘೋಷಣೆ ಮಾಡಿರುವಾಗ ಕೇಂದ್ರ ಮತ್ತು ರಾಜ್ಯ ಸರಕಾರ ಎರಡು ಕೂಡ ಪರಿಹಾರವನ್ನು ಶೀಘ್ರವೇ ಘೋಷಿಸಿ ಕೊಡಬೇಕು ಎಂದರು.

    ಹೈಕಮಾಂಡ್ ಹೇಳುತ್ತಾ, ಕೇಳುತ್ತಾ ನನಗೆ ಗೊತ್ತಿಲ್ಲ. ಅದು ಪಕ್ಷದ ಆಂತರಿಕ ವಿಚಾರ ಎಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಇರುತ್ತಾರಾ, ಇಲ್ಲವಾ ಎಂಬ ಮಾಧ್ಯಮದವರ ಪ್ರಶ್ನೆಗೆ ಶಾಸಕರು ಉತ್ತರಿಸಿದರು. ಹೊರ ದೇಶದಲ್ಲಿ ಹಣ ಇಟ್ಟಿದ್ದಾರೆ ಎಂದು ಬಸವರಾಜು ಯತ್ನಾಳ್ ಹೇಳಿರುವುದು ದೊಡ್ಡ ವಿಚಾರ. ಇದು ಆಂತರಿಕವಾಗಿರುವುದರಿAದ ನಾನು ಮಾತನಾಡುವುದಿಲ್ಲ. ಈ ವಿಚಾರಕ್ಕಿಂತ ಸರಕಾರವು ಕೂಡಲೇ ಮೃತ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಹತಾಶೆ ಮಾಡಬಾರದು. ಇನ್ನು ಅರಸೀಕೆರೆ ಕ್ಷೇತ್ರದಲ್ಲಿ ವೈದ್ಯರ ಹುದ್ದೆ ವಿಚಾರವಾಗಿ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಎದುರು ಗಮನಸೆಳೆದು ಬೇಸರ ಮಾಡಿಕೊಂಡಿದ್ದೆ. ಅಂದೆ ವೈದ್ಯರ ನೆಮಕ ಮಾಡಿದ್ರು. ಆದರೆ ಇದುವರೆಗೂ ವೈದ್ಯರು ಬಂದಿರುವುದಿಲ್ಲ ಎಂದರು. ಅರಸೀಕೆರೆಯಲ್ಲಿ ಇಂಜಿನಿಯರ್ ಕನ್ಸ್ಕ್ಟçಷೇನ್ ಕೆಲಸ ನಡೆಯುತ್ತಿದ್ದು, ಈಗ ಸ್ಟೆö್ಯÃ ಆಗಿದೆ. ಕಾಣದ ಕೈಗಳ ಕೈವಾಡದಿಂದ ಒಂದು ಗುಂಪು ನ್ಯಾಯಾಲಯದ ಮೊರೆ ಹೋಗಿದೆ ಎಂದು ಹೇಳಿದರು.

    ಇದೆ ವೇಳೆ ಜೆಡಿಎಸ್ ಮುಖಂಡರದ ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.


Post a Comment

Previous Post Next Post