ಹಾಸನ: ಶುಭ-ಸಮಾರಂಭಗಳಿಗೆ ಲೈಟಿಂಗ್ಸ್ ಬಿಡುವ ಮಾಲೀಕರಿಗೆ ಜೆಡಿಎಸ್ ನಗರದ ಶ್ರೀಸೀತರಾಮಾಂಜನೇಯ ದೇವಸ್ಥಾನದ ಆವರಣದಲ್ಲಿ ಮುಖಂಡರಾದ ಅಗಿಲೆ ಯೋಗೀಶ್ ರವರು ಪ್ರತಿನಿತ್ಯ ಬಳಸುವ ಆಹಾರದ ಕಿಟ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೊರೋನಾ ಮಹಾಮಾರಿ ಆವರಿಸಿ ಲಾಕ್ ಡೌನ್ ಕಾನೂನು ಜಾರಿಗೆ ಬಂದಿರುವುದರಿAದ ಜನರು ಯಾವ ಕೆಲಸ ಮಾಡಲಾಗದೆ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಅವರಲ್ಲಿ ಶುಭ-ಸಮಾರಂಭಗಳಿಗೆ ಲೈಟಿಂಗ್ಸ್ ಡೆಕೋರೆಟ್ ಮಾಡುವವರಂತು ಬೀದಿಗೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಅಗೀಲೆ ಯೋಗೀಶ್ ರವರು ದಿನನಿತ್ಯ ಬಳಸುವ ಆಹಾರ ಪದಾರ್ಥಗಳನ್ನು ವಿತರಿಸಿದರು.
ಇದೆ ವೇಳೆ ನಗರಸಭೆ ಅಧ್ಯಕ್ಷರಾದ ರಫೀಕ್, ಮಾಜಿ ಸದಸ್ಯ ಹೆಚ್.ಬಿ. ಗೋಪಾಲ್, ಜೆಡಿಎಸ್ ಮುಖಂಡ ದಸ್ತಾಗಿರ್, ಮನುಕುಮಾರ್ ಇತರರು ಪಾಲ್ಗೊಂಡಿದ್ದರು.
Tags
ಹಾಸನ