ಸಿಸಿ ಕೇಂದ್ರಗಳಲ್ಲಿ ಕೋವೀಡ್ ಗೆದ್ದು ಮನೆಗೆ ಹಿಂದಿರುಗುತ್ತಿರುವ ಗ್ರಾಮಸ್ಥರಿಗೆ ಲಯನ್ಸ್ ಸಂಸ್ಥೆ ವತಿಯಿಂದ ಅವರನ್ನು ಬೀಳ್ಕೊಡಲಾಯಿತು.

ಸಿಸಿ ಕೇಂದ್ರಗಳಲ್ಲಿ ಕೋವೀಡ್ ಗೆದ್ದು ಮನೆಗೆ ಹಿಂದಿರುಗುತ್ತಿರುವ ಗ್ರಾಮಸ್ಥರಿಗೆ ರಸಮಂಜರಿ ಕರ‍್ಯಕ್ರಮವನ್ನು ನೀಡುವ ಮೂಲಕ  ತಾಲೂಕು ಆಡಳಿತ ಹಾಗೂ ಲಯನ್ಸ್ ಸಂಸ್ಥೆ ವತಿಯಿಂದ ಅವರನ್ನು ಬೀಳ್ಕೊಡಲಾಯಿತು.


ಪಟ್ಟಣದ ಹನುಮಂತ ನಗರದ ಸಿಸಿ ಕೇಂದ್ರದ ಬಳಿ ಇರುವ ಮುರರ‍್ಜಿ ಶಾಲೆಯಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಜನರಿಗೆ ತಾಲೂಕು ಆಡಳಿತ ವತಿಯಿಂದ ಆರೋಗ್ಯ ತಪಾಸಣೆ ನಡೆಸಲಾಗಿತ್ತು.ಅದರಲ್ಲಿ ಸುಮಾರು ೩೫ ಕ್ಕೂ ಹೆಚ್ಚು ಜನರು ಗುಣಮುಖರಾದ ಹಿನ್ನಲೆಯಲ್ಲಿ ಅವರಿಗೆ ಲಯನ್ಸ್ ಸಂಸ್ಥೆ ಹಾಗೂ ತಾಲೂಕು ಆಡಳಿತ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ರಸಮಂಜರಿ ಕರ‍್ಯಕ್ರಮ ನೀಡುವ ಮೂಲಕ ಸಿಪಿಐ ಯೋಗೇಶ್ ಹಾಗೂ ಡಾ ಚಂದ್ರಮೌಳಿ ನೃತ್ಯ ಮಾಡುವ ಮೂಲಕ ಸೊಂಕಿತರಿಗೆ ಧರ‍್ಯ ತುಂಬಿದರು.

ಕರ‍್ಯಕ್ರಮದಲ್ಲಿ ಮಾತನಾಡಿದ ವೃತ್ತ ನಿರೀಕ್ಷಕ ಶ್ರೀಕಾಂತ್ ಎಂತಹ ಸಂರ‍್ಭದಲ್ಲಿಯೂ ಅಂಜದೆ ಧರ‍್ಯದಿಂದಿದ್ದಾಗ ಯಾವ ರೋಗವನ್ನು ಗೆಲ್ಲಬಹುದು.ನಿಮ್ಮ ಬಗ್ಗೆ ತಾಲೂಕು ಆಡಳಿತ ತೆಗೆದುಕೊಂಡ ನರ‍್ಧಾರ ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ಹೊರತು ನಿಮ್ಮ ಮನಸ್ಸಿಗೆ ಘಾಸಿಯಾಗುವಂತದ್ದಲ್ಲ.ನೀವು ಇಲ್ಲಿಂದ ಗುಣಮುಖರಾಗಿ ಹೋದ ನಂತರವೂ ಸಹ ಸಾಮಾಜಿಕ ಅಂತರ,ಮಾಸ್ಕ್ ಹಾಗೂ ವೈಧ್ಯಾಧಿಕಾರಿ ಗಳು ನೀಡಿದ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಮನವಿ ಮಾಡಿದರು.

ಲಯನ್ಸ್ ಸಂಸ್ಥೆಯ ಅಧ್ಯಕ್ಷ ಪ್ರಭಾಕರ್ ಮಾತನಾಡಿ ಈದಿನ ವಿಶ್ವವೆಸ ಕೋವೀಡ್ ನಿಂದ ತತ್ತರಿಸಿ ಹೋಗುತ್ತಿದೆ.ಪ್ರತಿಯೊಬ್ಬ ನಾಗರೀಕರು ತಮ್ಮ ಜವಬ್ದಾರಿ ಅರಿತು ನಡೆಯಬೇಕಿದೆ.ಗೆಲ್ಲಲಾಗದ ರೋಗವಲ್ಲ ಈ ಕರೊನಾ ಆತ್ಮಸ್ರ‍್ಯ ಇದ್ದರೆ ಎಂತಹ ಕಠಿಣ ಸಂರ‍್ಬದಲ್ಲಿ ಕೂಡ ಖಾಯಿಲೆ ಗೆಲ್ಲಬಹುದು.ನಮ್ಮ ಸಂಸ್ಥೆಯಿಂದ ತಾಲೂಕಿನಲ್ಲಿ ಇರುವ ಎಲ್ಲಾ ಕೋವೀಡ್ ಕೇರ್ ಸೆಂಟರಿಗೆ ತೆರಳಿ ಅವರಿಗೆ ಆತ್ಮಸ್ಥ್ರ‍್ಯ ನೀಡುವ ಮೂಲಕ ಅವರಿಗೆ ದರ‍್ಯ ತುಂಬಲಿದ್ದು ಅವರನ್ನು ಸಂತೋಷವಾಗಿ ಮನೆಗೆ ಕಳುಹಿಸಲಾಗುತ್ತಿದೆ.ಇದಕ್ಕೆ ಸಹಕಾರ ನೀಡಿದ ತಾಲೂಕು ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಬೇಲೂರು ಸಿಪಿಐ ಯೋಗೇಶ್ ಹಾಡು ಹೇಳುವ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ರಸಮಂಜರಿ ಕರ‍್ಯಕ್ರಮವನ್ನು ಚಂದನ್ ಮೆಲೋಡೀಸ್ ವತಿಯಿಂದ ಆಯೋಜಿಸಲಾಗಿತ್ತು.

ಈ ಸಂರ‍್ಭದಲ್ಲಿ ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ,ಚಂದ್ರಮೌಳಿ,ರಮೇಶ್,

ಪೂವಯ್ಯ,ಕರ‍್ಯರ‍್ಶಿ ಲತೀಫ್,ನರಸಿಂಹಮರ‍್ತಿ,ಮಹೇಶ್,ಡಾ ನರಸೇಗೌಡ,ನೌಷದ್,ಚಂದನ್,ಮಲ್ಲಿಕರ‍್ಜುನ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು

Post a Comment

Previous Post Next Post