ಅಕ್ರಮವಾಗಿ ಮರಳುಗಾರಿಕೆಗೆ ಮುಂದಾಗಿರುವುದನ್ನು ಖಂಡಿಸಿ

ಬೇಲೂರು ತಾಲೂಕಿನ ನರ‍್ವೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ  ಅಕ್ರಮವಾಗಿ ಮರಳುಗಾರಿಕೆ ನಡೆಸಲು ಹುನ್ನಾರ ಮಾಡುತ್ತಿರುವುದನ್ನು ಖಂಡಿಸಿ ಸುಳಗಳಲೆ ,ಹೆಗ್ಗದ್ದೆ,ನರ‍್ವೆ ಪೇಟೆ,ಹಾಗೂ ಉದ್ದಮನ ಹಳ್ಳಿ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.


ಈ ಸಂರ‍್ಭದಲ್ಲಿ ಮಾತನಾಡಿದ ಗ್ರಾಮಪಂಚಾಯಿತಿ ಸದಸ್ಯ ಚಿದಾನಂದ್ ಈ ಗ್ರಾಮಗಳಲ್ಲಿ ಸುಮಾರು ೧೫೦ ಕ್ಕೂ ಹೆಚ್ಚು ದಲಿತ ಕುಟುಂಬ ವಾಸವಾಗಿದ್ದು,ಚಿಕ್ಕದಾದ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗದ ಪರಿಸ್ಥಿತಿ ಇದ್ದು ಮರಳು ಲಾರಿಗಳು ಈ ಹಿಂದೆ ಓಡಾಡಿದ ಪರಿಣಾಮವಾಗಿ ಸುಮಾರು ೨೫ ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿದ್ದು,ಅವರಿಗೆ ಇಲ್ಲಿವರೆಗೂ ಯಾವುದೆ ಪರಿಹಾರ ಬಂದಿಲ್ಲ.ಅಲ್ಲದೆ ಈ ಮರಳು ಸಕಲೇಶಪುರ ಗ್ರಾಮದ ಹೆನ್ನಾಲೆ ಗ್ರಾಮದಲ್ಲಿ ಮರಳು ತೆಗೆಯಲು ಅನುಮತಿ ಸಿಕ್ಕಿದೆ ಆದರೆ ಇದನ್ನು ದುರುಪಯೋಗ ಪಡಿಸಿಕೊಂಡು ಕೆಲ ಜನಪ್ರತಿನಿಧಿಗಳು ಮರಳುಗಾರಿಕೆ ಜೊತೆ ಶಾಮೀಲಾಗಿದ್ದಾರೆ.ಈ ಜಾಗದಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಲ್ಲಿ ಉಘ್ರರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ ಈ ಭಾಗವನ್ನು ೨೦೦೮ ರಲ್ಲಿ ರೆಡ್ ಅಲರ‍್ಟ್ ಮರಳು ನಿಷೇಧ ಗ್ರಾಮವೆಂದು ನಿಷೇಧ ಮಾಡಿದ್ದರೂ ಸ್ಥಳೀಯ ಶಾಸಕರ ಬೆಂಬಲ ಇದೆ ಎಂದು ಇಲ್ಲಿಯ ಮಾಜಿ ತಾಲೂಕು ಪಂಚಾಯತಿ ಸದಸ್ಯ ಸೋಮಯ್ಯನವರು ಸ್ಥಳೀಯ ಗ್ರಾಮಸ್ಥರಿಗೆ ಯಾವುದೆ ಮಾಹಿತಿ,ಅನುಮತಿ ಪಡೆಯದೆ ಮರಳು ಗಾರಿಕೆಗೆ ಶಾಮೀಲಾಗಿದ್ದಾರೆ.ಅಲ್ಲದೆ ಇಲ್ಲಿ ಎಲ್ಲಾ ರ‍್ಗದ ಜನಾಂಗದವರಿದ್ದು,ಬಾರೀ ದೊಡ್ಡಗಾತ್ರದ ಟಿಪ್ಪರ್ ಗಳು ಓಡಾಡುವುದರಿಂದ ರಸ್ತೆಗಳು ಸಂಪರ‍್ಣ ಹಾಳಾಗಿದ್ದು ಸರ‍್ವಜನಿಕರು ರಸ್ತೆಯಲ್ಲಿ ಓಡಾಡುವಾಗ ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡುವಂತಹ ಸ್ಥಿತಿ ನರ‍್ಮಾಣವಾಗಿದೆ. ಅಲ್ಲದೆ ಸಕಲೇಶಪುರ ಕ್ಕೆ ಸಾಗಿಸಲು ಮರಳನ್ನು ನಮ್ಮ ಗ್ರಾಮದ ಮೂಲಕ ತೆಗೆದುಕೊಂಡು ಹೋಗಲು ಹುನ್ನಾರ ನಡೆಸುತ್ತಿದ್ದಾರೆ.ಇದರಿಂದ ರೈತರು ತಮ್ಮ ಜಮೀನಿಗೆ ಹೋಗಲು ಈ ರಸ್ತೆಯನ್ನು ಅವಲಂಭಿಸಿರುವುದರಿಂದ ಮರಳು ಗಾರಿಕೆಯಿಂದ ರಸ್ತೆ ಸಂಪರ‍್ಣ ಹಾಳಾಗಿದ್ದು ತಿವ್ರತರವಾದ ತೊಂದರೆಯಾಗುತ್ತಿರುವುದರಿಂದ,ನಮಗೆ ಇರುವ ಸಂರ‍್ಕ ಸೇತುವೆಯೂ ಸಹ ಮುರಿದು ಬೀಳುವ ಹಂತಕ್ಕೆ ಬಂದಿರುವುದರಿಂದ  ತಕ್ಷಣವೇ ಸಂಭಂದಪಟ್ಟ ಅಧಿಕಾರಿಗಳು ಯಾವುದೆ ಕಾರಣಕ್ಕೂ ಅನುಮತಿ ನೀಡಬಾರದು ನೀಡಿದ್ದು ಕಂಡುಬಂದಲ್ಲಿ ನಾವು ರಾಷ್ಟ್ರಪತಿಗಳಿಗೆ ದಯಾಮರಣದ ರ‍್ಜಿಯನ್ನು ಸಲ್ಲಿಸುವುದರ ಜೊತೆಗೆ ಸಂಬಂದಪಟ್ಟ ಇಲಾಖೆ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ತಿಳಿಸಿದರು.

ಬಾಕ್ಸ್ ನ್ಯೂಸ್.....

ಮನೆ ಕಳೆದುಕೊಂಡು ಕಣ್ಣೀರು ಹಾಕಿದ ಗ್ರಾಮಸ್ಥ .

ಮರಳು ಲಾರಿಗಳು ಸಂಚರಿಸುತ್ತಿರುವುದರಿಂದ ರಸ್ತೆಯ ಪಕ್ಕದಲ್ಲಿ ಇದ್ದಂತ ಮನೆ ಸಂಪರ‍್ಣ ಬಿರುಕು ಬಿಟ್ಟಿದ್ದು ಮಳೆ ಬಂದಾಗ ಸಂಪರ‍್ಣ ಹಾನಿಯಾಗಿದ್ದು ಇದಕ್ಕೆ ಯಾರು ಹೊಣೆ ನಮಗೆ ಮನೆ ಕೊಡಿ ಇಲ್ಲ ವಿಷಕೊಡಿ ಎಂದು ಗ್ರಾಮಸ್ಥರಾದ ಕುಮಾರ್ ಹಾಗೂ ಭೋಜೇಗೌಡ ಅಳಲು ತೋಡಿಕೊಂಡರು.

ಈ ಸಂರ‍್ಭದಲ್ಲಿ ಮಾಜಿ ಗ್ರಾಮಪಂಚಾಯಿತಿ ಸದಸ್ಯ ಗುರುಶಾಂತ್,ಮೊಗಣ್ಣಗೌಡ,ಪರಮೇಶ್,ರವಿಕುಮಾರ್, ವಿಜಿಕುಮಾರ್,ಚಂದ್ರು,ನಾಗರಾಜೇಗೌಡ,ಶಿವಣ್ಣ ಸೇರಿದಂತೆ ಇತರರು ಹಾಜರಿದ್ದರು

Post a Comment

Previous Post Next Post