ಕೋವಿಡ್ ಕೇರ್ ಸೆಂಟರ್ ಬಗ್ಗೆ ನಿಗಾವಹಿಸುವಂತೆ ಟಾಸ್ಕ್ ಫರ‍್ಸ್ ಸಭೆಯನ್ನು ಕರೆಯಲಾಗಿತ್ತು

ತಾಲೂಕು ಕಚೇರಿ ಸಭಾಂಗಣದಲ್ಲಿ  ಟಾಸ್ಕ್ ಫರ‍್ಸ್ ಸಭೆಯನ್ನು ಶಾಸಕ ಲಿಂಗೇಶ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ನಂತರ  ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಾಲೂಕು ಕೇಂದ್ರದಲ್ಲಿರುವ ಪ್ರತಿಯೊಂದು ಆಸ್ಪತ್ರೆ ಹಾಗೂ ಸಮುದಾಯ ಆಸ್ಪತ್ರೆಗಳಿಗೆ ಒಂದೊಂದು ಅಂಬುಲೆನ್ಸ್ ಸೇವೆಗಳನ್ನು ಮಾಡಲಾಗಿದ್ದು, ಕೊವಿಡ್ ಕೇರ್ ಸೆಂಟರ್ ಕೇಂದ್ರಕ್ಕೆ ಹೆಚ್ಚಿನ ನಿಗಾವಹಿಸಲು ಸೂಚಿಸಲಾಗಿದ್ದು, ತಾಲೂಕಿನಾದ್ಯಂತ ಆರು ಕಡೆ ಕೋವಿಡ್ ಕೆರ್ ಸೆಂಟರ್ ಗಳನ್ನು  ತರಲಾಗಿದ್ದು ಎಲ್ಲಾ ಗ್ರಾಮಗಳಿಗೆ ವೈದ್ಯರು ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಪಾಸಿಟಿವ್ ಬಂದ  ವ್ಯಕ್ತಿಯನ್ನು ಕೂವಿಡ್  ಸೆಂಟರಿಗೆ ಕಡ್ಡಾಯವಾಗಿ ರ‍್ಗಾಯಿಸಲಾಗುವುದು ಅಲ್ಲದೆ ಸಂಬಂಧಪಟ್ಟ  ಕುಟುಂಬಕ್ಕೆ  ಕೂರೂನಾ  ಬಗ್ಗೆ ಅರಿವು  ಮೂಡಿಸುವ ಕರ‍್ಯವನ್ನು ಮಾಡಬೇಕೆಂದರು.


ಜಿಲ್ಲಾ ಪಂಚಾಯತಿ ಯೋಜನಾ ನರ‍್ದೇಶಕ ಚಂದ್ರಶೇಖರ್ ಮಾತನಾಡಿ ಜಿಲ್ಲಾಡಳಿತ ಆದೇಶದಂತೆ ವಾರಕ್ಕೆ ಮೂರು ದಿನ ವ್ಯಾಪಾರ ಮತ್ತು ವಹಿವಾಟಿಗೆ ಸರ‍್ವಜನಿಕರಿಗೆ ಮುಕ್ತ ಅವಕಾಶವಿದ್ದು ಬೆಳಿಗ್ಗೆ ೬ರಿಂದ ೧೦ ತನಕ ಮಾತ್ರ  ಸಮಯ  ನೀಡಲಾಗಿದೆ ಸಮಯ ಹೊರತುಪಡಿಸಿ ಅನಾವಶ್ಯಕವಾಗಿ ಓಡಾಡುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಅಲ್ಲದೆ ಅಗತ್ಯವಸ್ತುಗಳನ್ನು ಆಯಾ ಬೀದಿಯಲ್ಲಿ ಪಡೆದುಕೊಳ್ಳಬೇಕೆಂದು ಸೂಚಿಸಲಾಗಿದೆ ಹೆದ್ದಾರಿ ಹೊರತುಪಡಿಸಿ  ಎಲ್ಲಾ ಬೀದಿಗಳ ರಸ್ತೆಗಳನ್ನು ಬ್ಯಾರಿಕೇಡ್ ಗಳನ್ನು ಹಾಕಿ ಬಂದ್  ಮಾಡಲಾಗಿದ್ದು, ಇದಕ್ಕೆ ಸರ‍್ವಜನಿಕರು ಸಹಕರಿಸಬೇಕೆಂದು ತಿಳಿಸಿದರು

ತಾಲೂಕು ದಂಡಾಧಿಕಾರಿ ಎಂವಿ ನಟೇಶ್ ಮಾತನಾಡಿ ೩೦ ಗ್ರಾಮಗಳನ್ನು ಕಂಟೋನ್ಮೆಂಟ್ ಜೋನ್ ಎಂದು ಗುರುತಿಸಲಾಗಿದ್ದು ಅತಿ ಹೆಚ್ಚು ಪ್ರಕರಣ ಕಂಡುಬಂದಿರುವ ಇಬ್ಬಿಡ್, ಅಂಗಡಿಹಳ್ಳಿ, ಹಗರೆ ಇನ್ನು ಮುಂತಾದ ಗ್ರಾಮಗಳನ್ನು ಸೀಲ್ಟೋನ್ ಮಾಡಲಾಗಿತ್ತು ಆ ಗ್ರಾಮಗಳನ್ನು ಮೈಕ್ರೋ ಕಂಟೋನ್ಮೆಂಟ್ ಎಂದು ಗುರುತಿಸಲಾಗಿದೆ ಅಡ್ಡಾದಿಡ್ಡಿ ಅವರ ವಿರುದ್ಧ  ಕ್ರಮ ಜರುಗಿಸಲಾಗುವುದು ಅಲ್ಲದೆ ಅಲ್ಲಲ್ಲಿ ಬ್ಯಾರಿಕೇಡ್ ಗಳನ್ನು ಹಾಕಿ ಸಂರ‍್ಕ ರಸ್ತೆಗಳನ್ನು ಬಂದ್ ಮಾಡಲಾಗಿದೆ ಜಿಲ್ಲಾ ಆದೇಶದಂತೆ ರಾಜ್ಯ ಸರಕಾರಗಳ ಕೋವಿಡ್ ನಿಯಮಗಳನ್ನು ಮೀರುವ ಯಾರೇ ವ್ಯಕ್ತಿಯಾಗಿರಲಿ ಅವರ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕರ‍್ಯನರ‍್ವಹಣಾಧಿಕಾರಿ ರವಿಕುಮಾರ್ ವಿವಿದ ಇಲಾಖೆಯ ಅಧಿಕಾರಿಗಳು ನೋಡಲ್ ಅಧಿಕಾರಿಗಳು ಇತರರು ಇದ್ದರು

Post a Comment

Previous Post Next Post