ಕೋವಿಡ್ ಲಸಿಕೆ ಸಮರ್ಪಕವಾಗಿ ಸರಬರಾಜಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ :ಶಿವಲಿಂಗೇಗೌಡ

ಅರಸೀಕೆರೆ :- ಕೋವಿಡ್ ಲಸಿಕೆ ಸಮರ್ಪಕವಾಗಿತಾಲ್ಲೂಕಿಗೆ ಸರಬರಾಜಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉತ್ತರಿಸುವುದು ಕಷ್ಟವಾಗುತ್ತಿದೆ ಎಂದು ಶಾಸಕ ಕೆ ಎಂ ಶಿವಲಿಂಗೇಗೌಡ ಮಾಧ್ಯಮ ಪ್ರತಿನಿಽಗಳ ಮುಂದೆ ಅಳಲು ತೋಡಿಕೊಂಡರು.

ನಗರದ ಸರ್ಕಾರಿ ಜೆ.ಸಿ ಆಸ್ಪತ್ರೆಯಕೋವಿಡ್ ಲಸಿಕಾ ಕೇಂದ್ರದ ಬಳಿ ಸುದ್ದಿಗಾರರೋಂದಿಗೆ ಮಾತನಾಡಿ ಲಸಿಕೆ ಅಭಿಯಾನ ಯಶಸ್ವಿಗೊಳಿಸಬೇಕೆಂದು ರಾಜ್ಯ ಮತ್ತುಕೇಂದ್ರ ಸರ್ಕಾರಗಳು ಆಶಯ ವ್ಯಕ್ತಪಡಿಸಿದರೆ ಸಾಲದುಅಗತ್ಯಕ್ಕೆಅನುಸಾರವಾಗಿ ಲಸಿಕೆ ಪೂರೈಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.


ಜಾವಗಲ್ ಹೋಬಳಿ ಸೇರಿದಂತೆತಾಲ್ಲೂಕು ಮೂರೂಕಾಲು ಲಕ್ಷಜನಸಂಖ್ಯೆ ಹೊಂದಿದ್ದು ಈ ಪೈಕಿ ಹದಿನೆಂಟು ವರ್ಷದ ಒಳಗಿನ ಎಪ್ಪತ್ತೆöÊದು ಸಾವಿರ ಮಕ್ಕಳು ಇದ್ದು ಉಳಿದ ಎರಡೂವರೆ ಲಕ್ಷ ಮಂದಿಗೆ ಲಸಿಕೆ ಕೊಡಬೇಕಿದೆ ಮೊದಲ ಹಾಗೂ ಎರಡನೇ ಹಂತದ ಲಸಿಕೆ ಸೇರಿಒಟ್ಟು 5ಲಕ್ಷ ಚುಚ್ಚುಮದ್ದುತಾಲ್ಲೂಕಿಗೆ ಪೂರೈಕೆಯಾಗಬೇಕು ಈ ನಿಟ್ಟಿನಲ್ಲಿ ಕೊ ವ್ಯಾಕ್ಸಿನ್ ಹಾಗೂ ಕೋವಿಡ್ ಸೀಲ್ಡ್ ಎರಡೂ ಸೇರಿ ಮೊದಲು ಹಾಗೂ ಎರಡನೇ ಹಂತ ದಿಂದಒಟ್ಟುಅರುವತ್ತಒAದು ಸಾವಿರದಒಂಬೈನೂರ ಇಪ್ಪತ್ತೇಳು ಲಸಿಕೆಗಳನ್ನು ನೀಡಲಾಗಿದೆ 4 ಲಕ್ಷದ 38ಸಾವಿರ ಲಸಿಕೆ ಸರಬರಾಜಾಗಬೇಕಿದೆಎಂದು ಅಂಕಿ ಅಂಶಗಳ ಸಹಿತ ವಿವರಿಸಿದರು.

ಅಲ್ಲದೆ ಈಗಾಗಲೇ ಮೊದಲ ಹಂತದಲ್ಲಿ ಕೋ ವ್ಯಾಕ್ಸಿನ್ ಪಡೆದಿದ್ದ 3 ಸಾವಿರ ಮಂದಿಗೆ ಎರಡನೇ ಹಂತದ ಕೊ ವ್ಯಾಕ್ಸಿನ್ ಲಸಿಕೆ ನೀಡಬೇಕಿದೆಆದರೆ ಲಸಿಕೆ ಪೂರೈಕೆಯಾಗುತ್ತಿಲ್ಲಇದರಿಂದಾಗಿಜನತೆಆಸ್ಪತ್ರೆಗೆ ಬಂದುಚುಚ್ಚುಮದ್ದುಇಲ್ಲದೆ ವೈದ್ಯರು ಹಾಗೂ ಜನಪ್ರತಿನಿಽಗಳನ್ನು ಶಪಿಸುವಂತಾಗಿದೆ ಸರ್ಕಾರ ಈ ನಿಟ್ಟಿನಲ್ಲಿಗಂಭೀರವಾಗಿಚಿAತನೆ ನಡೆಸಿ ಲಸಿಕೆ ಪೂರೈಕೆಯಲ್ಲಿಆಗುತ್ತಿರುವ ವಿಳಂಬವನ್ನು ತಪ್ಪಿಸಿ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ಲಸಿಕೆ ಪೂರೈಕೆ ಸಮಸ್ಯೆತಾಲ್ಲೂಕಿನಲ್ಲಷ್ಟೆಅಲ್ಲರಾಜ್ಯ ಹಾಗೂ ದೇಶಾದ್ಯಂತಇದ್ದುಕ್ಷೇತ್ರದಜನತೆ ಈ ನಿಟ್ಟಲ್ಲಿ ಆತಂಕಗೊಳ್ಳುವುದು ಬೇಡ ಸಂಬAಧಪಟ್ಟ ಸಚಿವರು ಹಾಗೂ ಹಿರಿಯ ಅಽಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಲಸಿಕೆ ಪೂರೈಕೆಯಲ್ಲಾಗುತ್ತಿರುವ ವಿಳಂಬವನ್ನು ಸರಿಪಡಿಸುವ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯೋನ್ಮುಖ ನಾಗಿದ್ದೇನೆಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆಯಉಪಾಧ್ಯಕ್ಷಕಾಂತೇಶ್.ಜೆಡಿಎಸ್ ಮುಖಂಡರಾದ ಎಂ.ವೈ. ಖಾನ್.ರಘು.ಹರೀಶ್.ಮತ್ತಿತರರು ಉಪಸ್ಥಿತರಿದ್ದರು.

Post a Comment

Previous Post Next Post