ಹೆಚ್.ಆರ್.ಪಿ. ಪ್ರಕರಣ ಕೊರೋನಾ ಹಿನ್ನಲೆ ೭ ದಿನ ಮತೊಮ್ಮೆ ಕಾಲಾವಕಾಶ ಡಿಸಿ ಆರ್. ಗಿರೀಶ್

 ಹಾಸನ: ಹೆಚ್.ಆರ್.ಪಿ. ಹಗರಣದ ವಿಚಾರವಾಗಿ ಈ ಹಿಂದೆ ನೋಟಿಸ್ ಜಾರಿ ಮಾಡಲಾಗಿದ್ದರೂ ಕೊರೋನಾ ಹಿನ್ನಲೆಯಲ್ಲಿ ಮತ್ತೊಂದು ವಾರಗಳ ಕಾಲ ಕಾಲಾವಕಾಶ ಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.


     ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, ಹೆಚ್.ಆರ್.ಪಿ. ಹಗರಣ ವಿಚಾರವಾಗಿ ಜೂನ್ ೨೧ ರಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅವರು ತನಿಖೆಗಾಗಿ ಹಾಸನಕ್ಕೆ ಆಗಮಿಸಿ ಎಲ್ಲ ಮಾಹಿತಿಯನ್ನು ಅವರು ಪಡೆದು ಕೊಂಡಿದ್ದು, ಪ್ರಕರಣ ಸಂಬAಧ ೨೩೭೦ ನೋಟಿಸ್ ಜಾರಿ ಮಾಡಲಾಗಿದ್ದು, ೪೯೦ ಮಂದಿ ನೋಟಿಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೊರೋನಾ ಸಂಬAಧವಾಗಿ ಮತ್ತೊಮ್ಮೆ ಅವರಿಗೆ ೭ ದಿನಗಳ ಕಾಲ ಕಾಲಾವಕಾಶ ಕೊಟ್ಟು ಅಗತ್ಯ ದಾಖಲೆ ನೀಡಲು ತಿಳಿಸಲಾಗಿದೆ ಎಂದರು. ನಿಜವಾದ ಫಲಾನುಭವಿಗಳೆ ಎಂದು ತಿಳಿಯಲು ದಾಖಲೆ ಕೇಳಲಾಗಿದೆ. ಮೂಲ ಕಡತವನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುತ್ತಿದ್ದು, ಇನ್ನೊಂದು ವಾರದಲ್ಲಿ ವರದಿಗಳು ನಮಗೆ ಲಭ್ಯವಾಗಲಿದೆ. ಅರಣ್ಯ ಇಲಾಖೆಯಿಂದ ಅಂತಿಮ ವರದಿ ನಿರೀಕ್ಷೆ ಮಾಡುತ್ತೇವೆ. ಎಚ್.ಆರ್.ಪಿ. ಪ್ರಕರಣ ಸಂಬAಧ ೪೧೪ ಕಡತಗಳು ಸರ್ಕಾರಿ ಕಚೇರಿಗಳಿಂದ ನಾಪತ್ತೆಯಾಗಿರುವ ಸಂಬAಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, ಪೊಲೀಸ್ ಇಲಾಖೆಯಿಂದ ಸ್ಥಳ ನೋಡಿ ತನಿಖೆ ಮೂಲಕ ತಿಳಿಯಲಿದೆ. ೫೦ ಪ್ರಕರಣಗಳಲ್ಲಿ ಸಹಿ ನಮ್ಮದಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಕೆಲ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈಬಗ್ಗೆ ಹೆಚ್ಚಿನ ತನಿಖೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.


ಕೊರೊನಾದಲ್ಲಿ ಇಳಿಮುಖ ಕಂಡು ಬರುತ್ತಿದ್ದು, ಇನ್ನು ಕಡಿಮೆ ಆಗುವವರೆಗೂ ನಿಗಾವಹಿಸಬೇಕು. ಜನರು ಕೂಡ ಜಾಗೃತರಾಗಿರಬೇಕು. ಅದರಂತೆ ಲಾಕ್ ಡೌನ್ ಜುಲೈ ೫ರ ವರೆಗೂ ಮುಂದುವರೆಯಲಿದೆ. ಹಿಂದಿನAತೆ ಸೋಮವಾರ- ಬುಧವಾರ-ಶುಕ್ರವಾರ ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧ರವರೆಗೆ ಸರ್ಕಾರದ ನಿರ್ದೇಶ ನದಂತೆ ಎಲ್ಲ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಉಳಿದಂತೆ ಲಾಕ್ಡೌನ್ ಹಾಗೂ ವೀಕೆಂಡ್ ಕರ್ಫ್ಯ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಜೂನ್ ೨೧ ರಂದು ಬೃಹತ್ ಲಸಿಕಾ ಆಂದೋಲನವನ್ನು ಮಾಡಲಾಗಿತ್ತು. ಹಾಸನ ಜಿಲ್ಲೆಯಲ್ಲಿ ೩೪ ಸಾವಿರ ಜನರಿಗೆ ಲಸಿಕೆ ಕೊಡಲಾಗಿದೆ. ಬುಧವಾರದಂದು ೧೦ ಸಾವಿರ ಲಸಿಕೆ ನೀಡಲಾಗಿದೆ. ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಕೊಡಲಾಗುತ್ತಿದ್ದು, ಮೂರನೇ ಅಲೆಗೆ ಸುರಕ್ಷತಿವಾಗಿ ಇರಬೇಕೆಂದರೇ ಎರಡು ಡೋಸ್ ಲಸಿಕೆ ಪಡೆಯುವುದು ಮುಖ್ಯವಾಗಿದೆ ಎಂದರು. ೩೭ ಸಿಸಿ ಕೇಂದ್ರಗಳು ಕೂಡ ಚಾಲನೆಯಲ್ಲಿದ್ದು, ೧೫೦೦ ಜನ ಸಿಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೇಲೂರು ಮತ್ತು ಅರಕಲಗೂಡು ತಾಲ್ಲೂಕಿನಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದು, ಇಲ್ಲಿ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ವೈದ್ಯರ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಸದ್ಯ ೪ ತಾಲೂಕಿನಲ್ಲಿ ನಡೆಸಲಾಗುತ್ತಿದೆ ಉಳಿದ ತಾಲೂಕುಗಳಲ್ಲಿ ಅಗತ್ಯವಿದ್ದರೆ ಮರುಚಾಲನೆ ಮಾಡಲಾ ಗುವುದು ಎಂದರು. ಜಿಲ್ಲೆಯಲ್ಲಿ ಎರಡನೆಯ ಅಲೆಯಲ್ಲಿ ೭೪೦೦ ಮಕ್ಕಳು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇವರಲ್ಲಿ ನಾಲ್ಕು ಸಾವಿರ ಮಕ್ಕಳು ೧೧ ವರ್ಷದ ಕೆಳಗಿನ ವರಾಗಿದ್ದು ೬೦೦೦ ಮಕ್ಕಳು ಹನ್ನೊಂದರಿAದ ೧೮ ವಯೋಮಿತಿಯವರಾಗಿದ್ದಾರೆ. ಇವರಲ್ಲಿ ಗುಣಮುಖರಾಗದೆ ಮೂರು ಮಕ್ಕಳು ಸಾವಿಗೀಡಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ೪೬೧೨ ಸಕ್ರಿಯ ಸೋಂಕಿತರು ಇದ್ದಾರೆ.

ಜಿಲ್ಲೆಯಲ್ಲಿ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು,ಜಿಲ್ಲಾ ಆಸ್ಪತ್ರೆಯಲ್ಲಿ ೧೦೦ ಬೆಡ್ ಮಕ್ಕಳಿಗೆ ಮೀಸಲಿಡಲು ಹಾಗೂ ತುರ್ತು ನಿಗಾ ಘಟಕ ಸ್ಥಾಪಿಸಲು ಮತ್ತು ವೆಂಟಿಲೇಟರ್ ಗಳಿಗೆ ಸರ್ಕಾರಕ್ಕೆ

ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು. 


Post a Comment

Previous Post Next Post