ಮಾನವ ಹಕ್ಕುಗಳ ವೇದಿಕೆಯಿಂದ ಸ್ಕೌಟ್ ಅಂಡ್ ಗೈಡ್ಸ್ ಶ್ರಮಿಕರಿಗೆ ಪುಡ್ ಕಿಟ್ ವಿತರಣೆ

ಹಾಸನ: ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಮಾನವ ಬಂಧುತ್ವ ವೇದಿಕೆಯ ಸಭಾಂಗಣದಲ್ಲಿ ಮಲಬಾರ್ ಚಾರಿಟಬಲ್ ಟ್ರಸ್ಟ್ ಸಹಕಾರದೊಂದಿಗೆ ಅಂತರಾಷ್ಟ್ರೀಯಮಾನವ ಹಕ್ಕುಗಳ ಸಮಿತಿವತಿಯಿಂದ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ಸೇವೆ ಸಲ್ಲಿಸುವ ಶ್ರಮಿಕರಿಗೆ ಪ್ರತಿನಿತ್ಯ ಉಪಯೋಗಿಸುವ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.


      ನಂತರ ಮಾತನಾಡಿದ ಸ್ಕೌಟ್ ಅಂಡ್ ಗೈಡ್ಸ್ ಹಿರಿಯರಾದ ಕಾಂಚನಾ ಮಾಲಾ ಮತ್ತು ಎಕ್ಸಲ್ ಲೈಫ್ ಇನ್ಸ್ ರೆನ್ಸ್ ಬ್ರಾಂಚ್ ಮ್ಯಾನೇಜರ್ ರಘುನಂದನ್ ಅವರು, ಕೊರೋನಾ ಇರುವುದರಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ಬಡವರು ಮತ್ತು ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟ ಮಾಡುವುದಕ್ಕೂ ಸಮಸ್ಯೆ ಎದುರಿಸುವಂತಾಗಿದೆ. ಈ ನಿಟ್ಟಿನಲ್ಲಿ ಮಲ್ಬಾರ್ ಗೋಲ್ಡ್ ಸಹಕಾರದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಮಿತಿಯಿಂದ ಇದುವರೆಗೂ ೨ ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆೆ ಎಂದರು. ಜೊತೆಗೆ ಮಾಸ್ಕ್ ಹಾಕಿ, ಸಾಮಾಜಿಕ ಅಂತರದಲ್ಲಿ ಇದ್ದು, ಅನವಶ್ಯಕವಾಗಿ ಹೊರಗೆ ಬಾರದಂತೆ ಅರಿವು ಕೂಡ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

       ಈಸಂದರ್ಭದಲ್ಲಿ ಅಂತರಾಷ್ಟ್ರೀಯಮಾನವ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಸಯ್ಯಾದ್ ಏಜಾಜ್, ವಿಜಯಕುಮಾರ್, ಜಗನ್ನಾಥ್, ಬಕ್ಸಿ, ಸಾಧಿಕ್ ಆಲಿ ಖಾನ್, ಸಯ್ಯಾದ್ ನಯಿಮ್, ಆಯಿಷ, ಚಂದ್ರಿಕಾ, ಶ್ರುತಿ, ಸುಲ್ತಾನಾ, ರೀನಾ, ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ ನಿರ್ದೇಶಕ ಶೈಜುಲ್ಲಾಲ್, ಚಾರಿಟಿ ಇನ್ಚಾರ್ಜ್ ಅಂಡ್ ಮಾರ್ಕೇಟಿಂಗ್ ಟೀಮ್ ಮೊಹಾಮದ್ ಇರ್ಪಾನ್, ಸ್ವಾತಂತ್ರ್ಯಹೋರಾಟಗಾರ ಹೆಚ್.ಎಂ. ಶಿವಣ್ಣ, ರಘುನಂದನ್, ಕಸಾಪ ತಾಲೂಕು ಅಧ್ಯಕ್ಷ ಜಿ.ಓ. ಮಹಾಂತಪ್ಪ, ಸ್ಕೌಟ್ ಅಂಡ್ ಗೈಡ್ಸ್ ಹಿರಿಯರಾದ ಕಾಂಚನಾ ಮಾಲಾ, ಗಿರೀಶ್, ಅನ್ನಪೂರ್ಣ, ಭಾನುಮತಿ ಇತರರು ಉಪಸ್ಥಿತರಿದ್ದರು,


Post a Comment

Previous Post Next Post